ಶ್ರೀಲಂಕಾಕ್ಕಿಂತ ದೊಡ್ಡ ಪ್ರದೇಶ ಕಲ್ಯಾಣ ಕರ್ನಾಟಕ: ಬಿದರಿ

0
11

ಕಕ ಯುವ ಸೇನೆ ದಶಮಾನೋತ್ಸವ: ಪತ್ರಕರ್ತ ಪ್ರಕಾಶ ದೊರೆ ಸೇರಿ ಹಲವರಿಗೆ ಕ.ಕ ಸೇವಾ ರತ್ನ ಪ್ರಶಸ್ತಿ ಪ್ರದಾನ

ಶಹಾಪುರ: ಕಲ್ಯಾಣ ಕರ್ನಾಟಕ ಭವ್ಯ ಪರಂಪರೆ ಹೊಂದಿದ ಮತ್ತು ಅಪಾರ ಸಂಪನ್ಮೂಲ ಹೊಂದಿದ ಪ್ರದೇಶವಾಗಿದ್ದು, ಶ್ರೀಲಂಕಾ ದೇಶಕ್ಕಿಂತ ದೊಡ್ಡ ಪ್ರದೇಶ ಕಲ್ಯಾಣ ಕರ್ನಾಟಕವಾಗಿದೆ ಮತ್ತು ಸಂಪನ್ಮೂಲದಲ್ಲೂ ಶ್ರೀಲಂಕಾಕ್ಕಿಂತ ಮುಂದಿದೆ ಎಂದು ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಶಂಕರ ಬಿದರಿ ತಿಳಿಸಿದರು.

Contact Your\'s Advertisement; 9902492681

ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ಕಲ್ಯಾಣ ಕರ್ನಾಟಕ ಯುವ ಸೇನೆಯ ದಶಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಲವಾರು ಜನ ಸಾಧು ಸಂತರು ಶರಣರು ಜನ್ಮ ತಾಳಿ ಹೋಗಿದ್ದಾರೆ, ಇಂತಹ ಮಹತ್ವದ ಪ್ರದೇಶ ಹಿಂದುಳಿದಿರುವದು ದುರಂತ. ಈ ಪ್ರದೇಶದ ಅಭಿವೃದ್ಧಿಗೆ ಸಾಕಷ್ಟು ಪೂರಕ ಯೋಜನೆಗಳು ತಂದರೂ ಸಮರ್ಪಕವಾಗಿ ಅನುಷ್ಠಾನಗೊಳ್ಳದ ಕಾರಣ ಹಿಂದುಳಿಯುವಿಕೆಗೆ ಕಾರಣವಿರಬಹುದೇನು ಗೊತ್ತಿಲ್ಲ.

ಪತ್ರಕರ್ತ ಪ್ರಕಾಶ ದೊರೆ ಸೇರಿ ಹಲವರಿಗೆ ಕಲ್ಯಾಣ ಕರ್ನಾಟಕ ಸೇವಾ ರತ್ನ ಪ್ರಶಸ್ತಿ ಪ್ರದಾನ: ಇದೇ ಸಂದರ್ಭದಲ್ಲಿ ಪ್ರಕಾಶಗೌಡ ಬೆದವಟ್ಟಿ ಡಾ.ಅಂಬಾರಾಯ ಎಸ್. ರುದ್ರವಾಡಿ, ಡಾ.ಸಿದ್ದು ಪಾಟೀಲ್ ಜೇವರ್ಗಿ, ಡಾ.ಅಪರ್ಣಾ ಬಸವಕಲ್ಯಾಣ, ಪ್ರಕಾಶ ದೊರೆ, ಡಾ.ಸಂತೋಷ ಕಾಳೆ, ಶರಣಗೌಡ ಕರಡ್ಡಿ, ನರಸಿಂಹನಾಯಕ, ಭಾಗ್ಯ ದೊರೆ, ಸುಷ್ಮಾ ಶೀಲವಂತ ಅವರಿಗೆ ಕಲ್ಯಾಣ ಕರ್ನಾಟಕ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಆದರೆ ಈ ಪ್ರದೇಶವನ್ನು ಆಳಿ ಹೋದ ರಾಷ್ಟ್ರಕೂಟರು, ಬಹಮನಿ ಸುಲ್ತಾನರು, ಸುರಪುರ ಪಿಡ್ಡ ನಾಯಕರು ಹೀಗೆ ರಾಜರ ದೊಡ್ಡ ಇತಿಹಾಸವೇ ಇದೆ. ಅಲ್ಲದೆ ಹಿಂದೆ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ರಥ ಯಾತ್ರೆ ನಡೆದ ಸಂದರ್ಭದಲ್ಲಿ ರಾಜ್ಯದ ಹಲವಡೆ ಗಲಭೆ, ಗಲಾಟೆಗಳು ಜರುಗಿದವು, ಆದರೆ ಕಕ ಭಾಗದಲ್ಲಿ ಮುಸ್ಲಿಂ, ಹಿಂದೂಗಳು ಮತ್ತು ಇತರೆ ಧರ್ಮದವರು ಇದ್ದರೂ ಯಾವುದೇ ಗಲಭೆಗಳಿಗೆ ಸಾಕ್ಷಿಯಾಗಲಿಲ್ಲ. ಇಲ್ಲಿನ ಜನರಲ್ಲಿ ಸೌಹಾರ್ದತೆ ಮೇಳೈಸಿದೆ ಎಂದರು.

ಕಕಯುವ ಸೇನೆ ಈ ಭಾಗದ ಅಭೀವೃದ್ಧಿಗೆ ಸಾಕಷ್ಟು ಹೋರಾಟಗಳನ್ನು ಮಾಡುತ್ತಾ ಬಂದಿದೆ. ಸೇನೆಯ ರಾಜ್ಯಧ್ಯಕ್ಷ ಮತ್ತು ತಂಡದವರಿಗೆ ಕೃತಜ್ಞತೆಗಳನ್ನು ಅರ್ಪಿಸಿದರು.

ಸುರಪುರ ಶಾಸಕ ರಾಜೂಗೌಡ ಮಾತನಾಡಿ, ಕನ್ನಡ ಪರ ಸಂಘಟನೆ, ಕನ್ನಡಪರ ಹೋರಾಟಗಾರರು ಇರುವದರಿಂದಲೇ ಇಂದಿಗೂ ನಮ್ಮ ನೆಲ, ಜಲ ಮತ್ತು ಕನ್ನಡ ಭಾಷೆ ಉಳಿದದೆ. ಕನ್ನಡತನ ಉಳಿದು ಕೊಂಡಿದೆ. ಕನ್ನಡಕ್ಕೆ ಧಕ್ಕೆ ಬಂದಾಗ ಕನ್ನಡ ಸಂಘಟನೆಗಳ ಜೊತೆಗೆ ನಾವು ಇರುತ್ತೇವೆ.

ನಮ್ಮ ತಾಯಿ ಗೌರವಕ್ಕೆ ಧಕ್ಕೆ ಬಂದಾಗ ನಾವೆಲ್ಲರೂ ಒಂದೇ. ಸದಾ ಕನ್ನಡತನಕ್ಕೆ ಅವಮಾನ ಮಾಡುವ ಎಂಇಎಸ್ ಸಂಘಟನೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲದೆ ಕನ್ನಡಕ್ಕಾಗಿ ಹೋರಾಟ ಮಾಡಿದ ಕನ್ನಡಿಗರ ಮೇಲೆ ಐಪಿಸಿ ಕಲಂ 307 ಸೇರಿದಂತೆ ಕೊಲೆ ಪ್ರಕರಣಗಳು ಹಾಕಿರುವದು ಸರಿಯಲ್ಲ. ಈ ಕುರಿತು ಸಿಎಂ ಹಾಗೂ ಗೃಹ ಸಚಿವರ ಜೊತೆ ಚರ್ಚಿಸಿ ಇಂತಹ ಸುಳ್ಳು ಪ್ರಕರಣಗಳ ರದ್ದತಿಗೆ ಮನವಿ ಮಾಡುವದಾಗಿ ತಿಳಿಸಿದರು.

ಶಾಸಕ ಶರಣಬಸಪ್ಪಗೌಡ ದರ್ಶನಪುರ, ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ, ಕೆಂಚಪ್ಪ ನಗನೂರ, ಭೀಮಾಶಂಕರ ಬಿಲ್ಲವ್, ಗುರು ಕಾಮಾ, ಶಾಂತಪ್ಪ ಕಟ್ಟಿಮನಿ, ಬಸವರಾಜ ಹಿರೇಮಠ, ಬಸವರಾಜ ಪಡಕೋಟೆ, ಸಣ್ಣ ನಿಂಗಪ್ಪ ನಾಯ್ಕೋಡಿ ಸೇರಿದಂತೆ ಸೇನೆ ರಾಜ್ಯಧ್ಯಕ್ಷ ಅಮರೀಶ ಬಿಲ್ಲವ್ ಉಪಸ್ಥಿತರಿದ್ದರು. ಶರಣು ಗದ್ದುಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸೇನೆ ಜಿಲ್ಲಾಧ್ಯಕ್ಷ ಭೀಮಾಶಂಕರ ಕಟ್ಟಿಮನಿ ಸ್ವಾಗತಿಸಿದರು.ರಾತ್ರಿ 12 ಗಂಟೆವರೆಗೂ ಝೀ ಟವಿ ಕಲಾವಿದರ ತಂಡದಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here