ಆನಂದಮಯ ಜೀವನಕ್ಕೆ ಆಧ್ಯಾತ್ಮಿಕ ಶಿಕ್ಷಣ ಅಗತ್ಯ: ಬಿ.ಕೆ ಮೃತ್ಯುಂಜಯ

0
10

ಕಲಬುರಗಿ: ಮಾನವನ ಆನಂದಮಯ ಜೀವನ ಸಾಗಿಸಲಿಕ್ಕಾಗಿ ಆಧ್ಯಾತ್ಮಿಕ ಶಿಕ್ಷಣ ಪಡೆದುಕೊಳ್ಳುವುದು ಬಹು ಅಗತ್ಯವಾಗಿದೆ ಎಂದು ಮೌಂಟ್‌ ಅಬುವಿನ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಶಿಕ್ಷಣ ವಿಭಾಗದ ಚೇರ್‌ಪರ್ಸನ್ ಬಿ.ಕೆ.ಮೃತ್ಯುಂಜಯ ಅವರು ಅಭಿಪ್ರಾಯಪಟ್ಟರು.

ನಗರದ ಹೊರವಲಯದಲ್ಲಿರುವ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಗೀತಾನಗರದ ಅಮೃತ ಸರೋವರದಲ್ಲಿನ ರಿಟ್ರೀಟ್‌ ಸೆಂಟರ್‌ನಲ್ಲಿ ಶರಣಬಸವ ವಿಶ್ವವಿದ್ಯಾಲಯ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ, ರಾಜಯೋಗ ಶಿಕ್ಷಣ ಮತ್ತು ಸಂಶೋಧನಾ ಫೌಂಡೇಶನ್‌ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿರುವ ‘ಆಧ್ಯಾತ್ಮ ಮತ್ತು ಮೌಲ್ಯಗಳ ಮೂಲಕ ಸ್ವಸಬಲೀಕರಣ ಮತ್ತು ಒತ್ತಡ ಮುಕ್ತ ಜೀವನಕ್ಕೆ ಶಿಕ್ಷಣ’ ಎಂಬ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ವಿಶ್ವದ ವಿವಿಧೆಡೆ ವಿವಿಧ ರೀತಿಯ ಶಿಕ್ಷಣ ನೀಡುವ ಕೇಂದ್ರಗಳು ಕಾಣಿಸುತ್ತವೆ, ಆದರೆ ಆಧ್ಯಾತ್ಮಿಕ ಶಿಕ್ಷಣ ನೀಡುವುದು ನಮ್ಮ ಭಾರತದಲ್ಲಿ ಅದೂ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ನೀಡುತ್ತಿರುವುದು ಆದರಣೀಯ ಎಂದು ಹೇಳಿದ ಅವರು, ಮಹಿಳೆಯರ ಸಶ್ಯಸ್ತ್ರೀಕರಣಕ್ಕೆ ನಮ್ಮ ಸಂಸ್ಥೆಯಲ್ಲಿ ನೂರಕ್ಕೆ ನೂರು ಪ್ರಮಾಣದಲ್ಲಿ ಮಹಿಳೆಯರಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.

ಇಂದಿನ ದಿನಗಳಲ್ಲಿ ತಾಂತ್ರಿಕ , ವೈದ್ಯಕೀಯ, ಇನ್ನಿತರ ಶಿಕ್ಷಣ ವಿಭಾಗಗಳು ಕೇವಲ ಪದವಿ ಹಾಗೂ ಉದ್ಯೋಗ ಪಡೆಯುವಲ್ಲಿ ಸಹಕರಿಸುತ್ತವೆ. ಆದರೆ, ನಮ್ಮ ಆತ್ಮದ ಶುದ್ದೀಕರಣ, ಸಮಾಜ ವಿಕಾಸಕ್ಕೆ ಆಧ್ಯಾತ್ಮಿಕ ಶಿಕ್ಷಣ ಮುಖ್ಯವಾಗಿದೆ ಎಂದರು.

ಶಿಕ್ಷಣವು ನಮ್ಮ ಆಂತರಿಕ ಜ್ಯೋತಿಯನ್ನು ಜಾಗೃತಿಗೊಳಿಸಬೇಕು, ನಿತ್ಯ ನಮ್ಮಲ್ಲಿರುವ ಒತ್ತಡ ನಿಯಂತ್ರಿಸಲು ಸ್ವಯ0 ಶಕ್ತಿಯೂ ಅಗತ್ಯವಾಗಿರುತ್ತದೆ, ಆ ತರಹದ ಉತ್ತಮ ಶಿಕ್ಷಣ ಪಡೆದಾಗ ಮಾತ್ರ ಸಮಾಜದ ಅಭ್ಯುದಯವಾಗುವುದು ಎಂದು ಬಿ.ಕೆ.ಮೃತ್ಯುಂಜಯ ಅವರು ತಿಳಿಸಿದರು.

ಪ್ರಸ್ತುತ ದಿನಗಳಲ್ಲಿ ಅಪರಾಧೀಕರಣ, ಜಾತೀಕರಣ ಹಾಗೂ ವಾಣಿಜ್ಯಕರಣ ಹೆಚ್ಚಳವಾಗಿದೆ, ಪ್ರಕೃತಿಯೊಂದಿಗೆ ಬೆರೆತು ಜೀವನ ನಡೆಸುವ ಶಿಕ್ಷಣ ಕಾಣುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಬಟ್ಟು ಸತ್ಯನಾರಾಯಣ ಅವರು ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಬಿ.ಕೆ ಸುಮನ್, ಬಿ.ಕೆ.ಲಕ್ಷ್ಮಿ, ಬಿ.ಕೆ.ಪ್ರೇಮ್, ಶರಣಬಸವ ವಿ.ವಿಯ ಸಮ ಕುಲಪತಿ ಡಾ. ವಿ. ಡಿ ಮೈತ್ರಿ, ಕುಲಸಚಿವ ಡಾ.ಅನಿಲಕುಮಾರ , ಬಿ.ಕೆ ಧಾನೇಶ್ವರಿ, ಬಿ.ಕೆ ಶೀವಲೀಲಾ, ಸವಿತಾ, ರಾಜೇಶ್ವರಿ, ಕಿರಣ ಮಾಕಾ, ಸೇರಿದಂತೆ ಇನ್ನಿತರರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ರಾಜಯೋಗಿನಿ ಬಿ.ಕೆ ವಿಜಯಾ ಅವರು ಪ್ರಾಸ್ತಾವಿಕ ಮಾತನಾಡಿ, ಅತಿಥಿಗಳನ್ನು ಸ್ವಾಗತಿಸಿದರು. ತನುಪ್ರಿಯಾ ಭಾರತ ನಾಟ್ಯ ಪ್ರದರ್ಶಿಸಿದರು. ಈ ವೇಳೆ ಶರಣಬಸವ ವಿವಿಯ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು. ಕಾರ್ಯಕ್ರಮ ಪ್ರಾರಂಭಕ್ಕಿಂತ ಮುಂಚೆ ಇತ್ತೀಚೆಗೆ ಹೆಲಿಕಾಪ್ಟರ್ ದುರಂತದಲ್ಲಿ ನಿಧನರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಮೌನಚರಣೆ ಮಾಡಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here