ಕಲಬುರಗಿ: ನೆಹರು ಗಂಜ ಪ್ರದೇಶದಲ್ಲಿರುವ ಲಾಹೋಟಿ ಕಲ್ಯಾಣ ಮಂಟಪದಲ್ಲಿ ಶ್ರೀ ಮೈಲಾರ ಮಲ್ಲಣ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ ೨೦೨೦-೨೦೨೧ನೇ ಸಾಲಿನ ಪ್ರಥಮ ವಾರ್ಷಿಕ ವರದಿಯ ಸರ್ವ ಸದಸ್ಯರ ಸಭೆಯನ್ನು ಶ್ರೀ ಮೈಲಾರ ಮಲ್ಲಣ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ ಅಧ್ಯಕ್ಷ ಸಂತೋಷ ಎಮ್.ಹಾದಿಮನಿ ಅವರು ಉದ್ಘಾಟಿಸಿದರು.
ಉಪಾಧ್ಯಕ್ಷ ಸಿದ್ಧಾರೂಢ ಸೋನಾರ, ವೀರಶೈವ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಸವರಾಜ ವಾಲಿ, ಪ್ರಭು ಹಾದಿಮನಿ, ಕಾರ್ಯದರ್ಶಿ ವಿಶ್ವನಾಥ ಕಲಶೆಟ್ಟಿ, ನಿರ್ದೇಶಕರಾದ ವಿರಣ್ಣಾ ಚಿನ್ನಮಳ್ಳಿ, ರಾಜಶೇಖರ ಬೋಮನ್ನಳ್ಳಿ, ಶೀವಶರಣಪ್ಪ ನಿಂಬರಗಿ, ವಿಶ್ವನಾಥ ಗೋಧಿ, ರವಿಶಂಕರ ಜಮದರಖಾನಿ, ರವಿಂದ್ರನಾಥ ಮಾಲಿಬಿರಾದಾರ, ವಿಜಯಕುಮಾರ ಕುಮಸಿ, ಗುಂಡಪ್ಪ ಡೋಣ್ಣುರ, ರವಿ ನಾಡಳ್ಳಿ, ಶಿಲ್ಪಾ ಅವಂಟಿ, ಶ್ವೇತಾ ಸಿದ್ರಾಮಗೋಳ ಹಾಗೂ ಸಿಬ್ಬಂದಿ ವರ್ಗದವರು ಇದ್ದರು.