ಕಲಬೆರಕೆ ಆಹಾರದ ಬಗ್ಗೆ ಅರಿವಿನ ಕೊರತೆ: ಸಮೀಕ್ಷೆಯಿಂದ ಬಹಿರಂಗ

0
17

ಕಲಬುರಗಿ: ಸಾಂಕ್ರಾಮಿಕ ಪರಿಸ್ಥಿತಿಯಿಂದಾಗಿ ನೈಜ, ಉತ್ತಮ ಗುಣಮಟ್ಟದ ಹಾಗೂ ಕಲಬೆರಕೆ ರಹಿತ ಆಹಾರ ಉತ್ಪನ್ನಗಳ ಬಗ್ಗೆ ಜಾಗೃತಿ ಹೆಚ್ಚಿದ್ದರೂ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‍ಎಸ್‍ಎಸ್‍ಎಐ) 2018-2019ರ ವಾರ್ಷಿಕ ವರದಿಯ ಪ್ರಕಾರ, ಆಹಾರ ಕಲಬೆರಕೆಯ ಶೇಕಡಾವಾರು ಪ್ರಮಾಣವು 2011-2012ಕ್ಕೆ ಹೋಲಿಸಿದರೆ 2018-2019ರಲ್ಲಿ ಶೇಕಡಾ 12.8ರಿಂದ ಶೇಕಡಾ 28ಕ್ಕೆ ಹೆಚ್ಚಿದೆ.

ಬಹುತೇಕ ಭಾರತೀಯ ಗ್ರಾಹಕರು ಅರಿವಿನ ಕೊರತೆಯಿಂದಾಗಿ ಕಲಬೆರಕೆ ಆಹಾರ ಉತ್ಪನ್ನಗಳಿಗೆ ಬಲಿಯಾಗುತ್ತಿದ್ದಾರೆ ಎಂಬ ಅಂಶ ಟಾಟಾ ಟೀ ಕಣ್ಣನ್ ದೇವನ್ ನಡೆಸಿದ ‘ಕರ್ನಾಟಕ ಗುಣಮಟ್ಟದ ವಿರೋಧಾಭಾಸ’ ಸಮೀಕ್ಷೆಯಿಂದ ಬಹಿರಂಗವಾಗಿದೆ.

Contact Your\'s Advertisement; 9902492681

ಬೆಂಗಳೂರು, ಮಂಗಳೂರು, ಮೈಸೂರು, ಬಾಗಲಕೋಟೆ, ಚಿತ್ರದುರ್ಗ, ಚಿಕ್ಕಮಗಳೂರು ಮತ್ತು ದಾವಣಗೆರೆಯಂತಹ ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಕೈಗೊಂಡ ವ್ಯಾಪಕ ಸಮೀಕ್ಷೆಯು ಕಲಬೆರಕೆ ಚಹಾದ ಹಾನಿಕಾರಕ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯತೆ ಮತ್ತು ವಿಶ್ವಾಸಾರ್ಹ ಗುಣಮಟ್ಟ ಮತ್ತು ಶುದ್ಧತೆಯ ತಾಜಾ ಚಹಾ ಆಯ್ಕೆ ಮಾಡುವ ಅಗತ್ಯತೆಯ ಕುರಿತು ಪ್ರಮುಖ ಒಳನೋಟಗಳನ್ನು ನೀಡಿದೆ ಎಂದು ಟಾಟಾ ಗ್ರಾಹಕ ಉತ್ಪನ್ನ ನಿಯಮಿತದ ಭಾರತ ಮತ್ತು ದಕ್ಷಿಣ ಏಷ್ಯಾದ ಪ್ಯಾಕೇಜ್ಡ್ ಪಾನೀಯಗಳ ವಿಭಾಗದ ಅಧ್ಯಕ್ಷ ಪುನೀತ್ ದಾಸ್ ಅವರು ಹೇಳಿದ್ದಾರೆ.

ಶೇಕಡ 67 ರಷ್ಟು ಗ್ರಾಹಕರು ಇನ್ನೂ ಬಿಡಿ ಚಹಾವನ್ನು ಖರೀದಿಸುತ್ತಾರೆ ಎಂದು ಸಮೀಕ್ಷಾ ವರದಿ ಸೂಚಿಸುತ್ತದೆ, ಇದು ಕಲಬೆರಕೆಯಾಗಬಹುದು, ಬಹುಶಃ ಆರೋಗ್ಯ ಸಮಸ್ಯೆಗಳಿಗೆ ಕೂಡಾ ಇದು ಕಾರಣವಾಗಬಹುದು. ವಿಶ್ವಾಸಾರ್ಹ ಬ್ರ್ಯಾಂಡ್‍ಗಳ ಉತ್ಪನ್ನಗಳನ್ನು ಆಯ್ಕೆ ಮಾಡುವ ಮೂಲಕ ಇದನ್ನು ಸುಲಭವಾಗಿ ತಡೆಯಬಹುದು” ಎಂದು ಪೌಷ್ಟಿಕಾಂಶ ತಜ್ಞೆ ಕವಿತಾ ದೇವಗನ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಸಮೀಕ್ಷೆಗೆ ಗುರಿಪಡಿಸಿದ ಬಹುತೇಕ ಮಂದಿ ಕಲಬೆರಕೆ ರಹಿತ ಆಹಾರ ವಸ್ತುಗಳ ಪ್ರಯೋಜನಗಳ ಬಗ್ಗೆ ತಿಳಿದಿದ್ದಾರೆ. ಆದರೆ ಪ್ರತಿಕ್ರಿಯಿಸಿದವರಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ಜನರು (ಶೇಕಡಾ 32) ತಮ್ಮ ಚಿಲ್ಲರೆ ವ್ಯಾಪಾರಿಯ ಶಿಫಾರಸಿನ ಆಧಾರದ ಮೇಲೆ ಚಹಾವನ್ನು ಖರೀದಿಸುತ್ತಾರೆ ಹಾಗೂ ಗ್ರಾಹಕರು ನೈಜ, ಕಲಬೆರಕೆ ರಹಿತ ಉತ್ಪನ್ನಗಳನ್ನು ಗುರುತಿಸಲು ಹೆಣಗಾಡುತ್ತಾರೆ. ಶೇಕಡ 24 ರಷ್ಟು ಶುದ್ಧ ಮತ್ತು ನೈಸರ್ಗಿಕ ಉತ್ಪನ್ನಗಳು ಹೆಚ್ಚು ದುಬಾರಿಯಾಗುತ್ತವೆ ಎಂಬ ತಪ್ಪು ಕಲ್ಪನೆಯಲ್ಲಿದ್ದಾರೆ ಎಂದು ಸಮೀಕ್ಷೆಯಿಂದ ತಿಳಿದು ಬಂದಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here