ಗದಗ: ಲೋಕದಾಲತ್ ನಲ್ಲಿ 3762 ಪ್ರಕರಣಗಳು ಇತ್ತ್ಯರ್ಥ

0
21

ಗದಗ: ರಾಜ್ಯ ಉತ್ಛ ನ್ಯಾಯಾಲಯ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾ ಧಿಕಾರದ ಆದೇಶದನ್ವಯ ಜಿಲ್ಲೆಯಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಒಟ್ಟು 3019 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಎಸ್‌.ಮಹಾಲಕ್ಷಿ ನೇರಳೆ ಅವರ ಅಧ್ಯಕ್ಷತೆಯಲ್ಲಿ ನಡೆದ ಅದಾಲತ್‌ನಲ್ಲಿ ಜಿಲ್ಲೆಯಲ್ಲಿ ಚಾಲ್ತಿ ಇರುವ 3762 ಪ್ರಕರಣಗಳನ್ನು ರಾಜೀ ಸಂಧಾನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಅದರಲ್ಲಿ 3019 ಪ್ರಕರಣಗಳನ್ನು 114642644 ರೂ.ಗೆ ರಾಜೀ ಮಾಡಲಾಗಿದೆ.

Contact Your\'s Advertisement; 9902492681

ಈ ಪೈಕಿ 22 ಮೋಟಾರು(ಎಂವಿಸಿ) ಅಪಘಾತ ಪ್ರಕರಣಗಳನ್ನು 12887758 ರೂ.ಗೆ, 155 ಚೆಕ್‌ ಬೌನ್ಸ್‌ ಪ್ರಕರಣಗಳನ್ನು 21285261 ರೂ., 30 ಕ್ರಿಮಿನಲ್‌ ಕಂಪೌಂಡೇಬಲ್‌ ಪ್ರಕರಣಗಳನ್ನು 3600 ರೂ.ಗೆ, 226 ಅಸಲು ದಾವೆ ಪ್ರಕರಣಗಳನ್ನು 75475939 ರೂ.ಗೆ, 42 ಭೂ ಸ್ವಾಧೀನ ದರಖಾಸ್ತು ಪ್ರಕರಣಗಳನ್ನು 913409 ರೂ.ಗೆ, 2459 ಇತರೆ ಕ್ರಿಮಿನಲ್‌ ಪ್ರಕರಣಗಳನ್ನು 563989 ರೂ.ಗೆ, 38 ಎಂಎಂಆರ್‌ಡಿ ಪ್ರಕರಣಗಳನ್ನು 422000 ರೂ.ಗೆ, 6 ವೈವಾಹಿಕ ಪ್ರಕರಣಗಳು, 23 ವಿದ್ಯುತ್ಛಕ್ತಿ ಪ್ರಕರಣಗಳನ್ನು, 2 ಕಾರ್ಮಿಕ ಪ್ರಕರಣಗಳನ್ನು, 7 ಹಣ ವಸೂಲಾತಿ ಪ್ರಕರಣಗಳು ಸೇರಿದಂತೆ ಒಟ್ಟು 3019 ಚಾಲ್ತಿ ಪ್ರಕರಣಗಳಿಗೆ 114642644 ರೂ. ಪರಿಹಾರ ಒದಗಿಸುವುದರ ಮೂಲಕ ರಾಜೀ ಸಂಧಾನ ಮಾಡಲಾಗಿದೆ.

ಅದೇ ರೀತಿ, 34 ಬಿಎಸ್‌ಎನ್‌ಎಲ್‌ ದೂರವಾಣಿ ಪ್ರಕರಣಗಳು ಹಾಗೂ 84 ಬ್ಯಾಂಕ್‌ ಪ್ರಕರಣಗಳ ವ್ಯಾಜ್ಯಪೂರ್ವ ಪ್ರಕರಣಗಳನ್ನು 10432646 ರೂ.ಗೆ ರಾಜೀ ಸಂಧಾನ ಮಾಡಲಾಗಿದೆ. ಎಲ್ಲಾ ಸೇರಿ ಒಟ್ಟು 3137 ಪ್ರಕರಣಗಳನ್ನು 125075290 ರೂ.ಗೆ ರಾಜೀ ಸಂಧಾನಗೊಳಿಸಲಾಗಿದೆ.

ಕಾರ್ಯಕ್ರಮದಲ್ಲಿ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧಿಧೀಶ ಬಿ.ಮಧುಸೂದನ್‌, ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧಿಧೀಶರಾದ ನರಶಿಂಸಾ ಎಂ.ವಿ. 1ನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾ.ಪಿ.ಜಿ.ಚಲುವಮೂರ್ತಿ, ಪ್ರಧಾನ ಹಿರಿಯ ದಿವಾಣಿ ನ್ಯಾಯಾಧಿಧೀಶ ರಾಜಣ್ಣಾ ಸಂಕಣ್ಣವರ, ಜೆಎಂಎಫ್‌ಸಿ ನ್ಯಾಯಾಧೀಶರಾದ ಎಸ್‌.ಚಿನ್ನಸ್ವಾಮಿ, ಶ್ರೀಕಾಂತ ರವೀಂದ್ರ, ಅರುಣ ಚೌಗಲೆ, ನಿಖೀತಾ ಎಸ್‌. ಅಕ್ಕಿ, ಹಾಗೂ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಎ.ಮಾಲ್ವಿ, ಪ್ರ. ಕಾರ್ಯದರ್ಶಿ ಎಂ.ಬಿ.ಮತ್ತೂರ, ಉಪಾಧ್ಯಕ್ಷ ವಿ.ವಿ.ಪಾಟೀಲ, ಜಂಟಿ ಕಾರ್ಯದರ್ಶಿ ಕುಮಾರ ಜಿ.ವಿ. ಖಜಾಂಚಿ ಎಂ.ಎ.ನಾಯ್ಕರ ಪಾಲ್ಗೊಂಡಿದ್ದರು.

# ಕುಶಲ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here