ಡಾ.‌ ಎಚ್. ಎಸ್. ಶಿವಪ್ರಕಾಶ ಅಮೆಜಾನ್ ಕವಿ: ಡಾ. ಸಿರಾಜ್ ಅಹ್ಮದ್

0
66

ಕಲಬುರಗಿ: ಕವಿಗಳಾದವರು ಎಚ್ವರದ ಪರಿವೆಯ ಕರೆ ಗಂಟೆಗಳಾಗಬೇಕು ಎಂದು ಹಿರಿಯ ಕವಿ ಡಾ. ಎಚ್.ಎಸ್. ಶಿವಪ್ರಕಾಶ ಹೇಳಿದರು.

ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ‘ಹೋಗಿ ಬನ್ನಿ ಋತುಗಳೇ’ (ನಾಲ್ಕು ದಶಕದ ಕವಿತೆಗಳು) ಡಾ. ಎಚ್.ಎಸ್. ಶಿವಪ್ರಕಾಶ್ ಸಂವಾದ ಮತ್ತು ಚರ್ಚೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬುದ್ಧ, ಬಸವ, ಕಾರ್ಲ್ ಮಾರ್ಕ್ಸ್ ಮುಂತಾದವರು ಇತ್ಯಾತ್ಮಕವಾದ ಮಂಡಿಸಿದರು ಎಂದು ವಿವರಿಸಿದರು.

Contact Your\'s Advertisement; 9902492681

ವಿಶ್ವ ಮಾರುಕಟ್ಟೆಯ ಸಂದರ್ಭದಲ್ಲಿ ಬದುಕುತ್ತಿರುವ ಈ ಸಂದರ್ಭದಲ್ಲಿ ಪುಣ್ಯ ಕೋಟಿ ಬರೆದ ಕವಿ ದೇಶಿ ಕವಿಯಾ? ಅಥವಾ ವಿಶ್ವ ಕವಿಯೋ? ಎಂಬುದು ನಿರ್ಣಯಿಸಲು ಬಾರದು. ನಾವೇ ವಿಶ್ವದ ಭಾಗವಾದಾಗ ಮಾತ್ರ ಅದು ಕಾಣುತ್ತದೆ. ಎಲ್ಲವೂ ಇಲ್ಲಿ ಅನಿಮಿತ್ತವಾಗಿದೆ. ನಾವು ಏನಿದ್ದೇವೆ? ಹೇಗಿದ್ದೇವೆ ಎಂಬುದನ್ನು ಜನ ನಮ್ಮನ್ನು ಗಮನಿಸುತ್ತಾರೆ ಎಂದು ತಿಳಿಸಿದರು.

ಬಸವ, ಅಲ್ಲಮ, ಅಕ್ಕನ ವಿಚಾರಗಳು ಸಮಕಾಲೀನವಾಗಿರದೆ ಅವುಗಳು ಪ್ರಸ್ತುತವಾಗಿವೆ. ಬಹುತ್ವ ವಿಜೃಂಭಿಸುವ ಚಿಂತಕರ ಪಡೆ ಮಹಾನ್ ಢೋಂಗಿ ಎಂದು ಟೀಕಿಸಿದರು. ಕಾವ್ಯ ಈ ಕ್ಷಣದ ವೀಕ್ಷಣೆಯಿಂದ ಅದೇನನ್ನೋ ದರ್ಶಿಸುವಂತಿರಬೇಕು ಎಂದು ತಿಳಿಸಿದರು.

ಕೃತಿ ಕುರಿತು ಮಾತನಾಡಿದ ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಡಾ. ಸಿರಾಜ್ ಅಹ್ಮದ್ ಅವರು ” ಶಿವಪ್ರಕಾಶರ ವೈವಿಧ್ಯಮಯ ಕಾವ್ಯಗಳಲ್ಲಿ ಸಾರ್ವಕಾಲಿಕ. ಸರ್ವವ್ಯಾಪಿ ಗುಣಗಳಿದ್ದು, ಕನ್ನಡ ಕಾವ್ಯ ವಿಸ್ತಾರಗೊಳಿಸಿದ ಕೀರ್ತಿಗೆ ಭಾಜನರಾಗಿದ್ದಾರೆ ಎಂದರು.

ಇವರ ಕಾವ್ಯಕ್ಕೆ ಚಲುಸುವ, ಹರಿಯುವ ಆಹ್ವಾನೆಗೊಳಿಸುವ ಶಕ್ತಿಯಿದೆ. ಕನ್ನಡ ಸಂವೇದನೆ ಸಂವರ್ಧನೆಗೊಂಡಿದೆ. ಇವರ ಕಾವ್ಯ ಬದುಕಿನ ಎಲ್ಲವನ್ನು ಹಾಸು ಹೊಕ್ಕು, ಮಿಳಿತಗೊಂಡಂತಿದೆ ಎಂದು ಅಭಿಪ್ರಾಯಪಟ್ಟರು.

ಎಚ್. ಎಸ್. ಶಿವಪ್ರಕಾಶರ ದೇಶಿ ಅನುಭವಕ್ಕೆ ಪರಿಧಿಯೇ ಇಲ್ಲ. ಆಯುಧಗಳಿಲ್ಲದ, ಹಿಂಸೆ ಇಲ್ಲದ ಸಂಸ್ಕತಿಯನ್ನು ಹುಡುಕಾಡುವ ಗುಣಲಕ್ಷಣಗಳು ಇವರ ಕಾವ್ಯಕ್ಕಿದ್ದು, ಸಂಸ್ಕತಿ, ಚರಿತ್ರೆ, ಪ್ರಭುತ್ವವನ್ನು ಪುನರುಜ್ಜೀವನಗೊಳಿಸುವ ಆಶಯ ಹೊಂದಿದ ಅಮೆಜಾನ್ ಕವಿ ಶಿವಪ್ರಕಾಶ ಎಂದು ಬಣ್ಣಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಬಳ್ಳಾರಿಯ ಲೋಹಿಯಾ ಪ್ರಕಾಶನದ ಸಿ. ಚೆನ್ನಬಸವಣ್ಣ ಮಾತನಾಡಿ, ಎಚ್. ಶಿವಪ್ರಕಾಶರ ಶತಮಾನದ ಕಾವ್ಯ ಹಾಗೂ ಈಗಿನ ನಾಲ್ಕು ದಶಕದ ಕಾವ್ಯ ಅವಲೋಕಿಸಿದಾಗ, ಅವರೊಬ್ಬ ಎಚ್ಚರದ ಕವಿ ಎಂಬುದು ರುಜುವಾತಾದಂತಿದೆ.‌ ಅವರೊಬ್ಬ ಅನುಭಾವಿ, ಅವಧೂತ, ಆರೂಢ ಕವಿ. ಯಾವುದೇ ಎಲ್ಲೆ, ಚೌಕಟ್ಟಿಗೆ ಅಳವಡದ ಸೀಮಾತೀತ ಕವಿಯಾಗಿದ್ದು, ತಮ್ಮದೇ ಆದ ಕಾವ್ಯ ಮಾರ್ಗವನ್ನು ಅವರು ಕಂಡುಕೊಂಡಿದ್ದಾರೆ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ಕೇಂದ್ರೀಯ ವಿಶ್ವ ವಿದ್ಯಾಲಯದ ಕುಲಸಚಿವ ಡಾ. ಬಸವರಾಜ ಡೋಣೂರ ಮಾತನಾಡಿ, ಶಿವಪ್ರಕಾಶರು ಏನನ್ನೂ ಕುರಿತು ಬರೆದರೂ ವರ್ತಮಾನಕ್ಕೆ ಮಿಡಿಯುವ ತುಡಿತ ಇರುವುದನ್ನು ಕಾಣಬಹುದು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಪ್ರೊ. ಎಚ್.ಟಿ. ಪೋತೆ ಮಾತನಾಡಿ, ಕನ್ನಡಕ್ಕೆ ವಿಶ್ವಮನ್ನಣೆ ತಂದು ಕೊಟ್ಟವರಲ್ಲಿ ಶಿವಪ್ರಕಾಶ ಕೂಡ ಒಬ್ಬರಾಗಿದ್ದು, ಬಹುತ್ವವನ್ನು ಕಾವ್ಯಾನುಭವವಾಗಿಸಿಕೊಂಡು ಕನ್ನಡದ ಸಮದರ್ಶಿತ್ವವನ್ನು ಪ್ರಕಟಿಸಿದ್ದಾರೆ ಎಂದು ತಿಳಿಸಿದರು.

ಡಾ. ಶ್ರೀಶೈಲ ನಾಗರಾಳ ನಿರೂಪಿಸಿದರು. ಸಿದ್ಧಾರ್ಥ ಚಿಮ್ಮಾಇದ್ಲಾಯಿ ಪ್ರಾರ್ಥಿಸಿದರು. ಡಾ. ವಿಕ್ರಮ ವಿಸಾಜಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here