ಕಲಬುರಗಿ: ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನ ಪ್ರತಿಮೆಗೆ ಅವಮಾನ ಮಾಡಿದ ಕಿಡಿಗೇಡಿಗಳ ವಿರುದ್ದ ಸೂಕ್ತ ಕ್ರಮಕೈಗೊಳ್ಳಬೇಕೆಂದು ಭಾರತೀಯ ಯುವ ಸೈನ್ಯ,ದ ಕಲ್ಯಾಣ ಕರ್ನಾಟಕದ ಅಧ್ಯಕ್ಷರಾದ ರವಿ ದೇಗಾಂವ್ ಆಗ್ರಹಿಸಿದರು.
ಅವರು ನಗರದ ಸಿಟಿ ಬಸ್ ನಿಲ್ದಾಣ ಬಳಿಯಿರುವ ಸಂಗೋಳ್ಳಿ ರಾಯಣ್ಣನ ಪ್ರತಿಮೆಗೆ ಕ್ಷೀರಾಭಿಷೇಕ ಮಾಡಿ ಮಾತನಾಡಿ, ದೇಶಭಕ್ತ ರಾಯಣ್ಣನ ಪ್ರತಿಮೆಗೆ ಭಗ್ನ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸಿ,ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದರು. ಎಂಇಎಸ್ ಸಂಘಟನೆಯ ಉಪಟಳ ಅತಿಯಾಗುತ್ತಿದೆ. ಇದು ಹೀಗೆಯೇ ಮುಂದುವರೆದರೆ ಮುಂದಿನ ದಿನಗಳಲ್ಲಿ ಎಂಇಎಸ್ ಪುಂಡರ ರಕ್ತವನ್ನು ಚೆಂಡಾಡಿ ಆ ರಕ್ತದಿಂದ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನವರ ಪ್ರತಿಮೆಗೆಎ ಅಭಿಷೇಕ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇನ್ನೋಂದೆ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಿದ ಜಿಲ್ಲಾಧ್ಯಕ್ಷ ಶರಣಯ್ಯ ಮಠ, ಬೆಳಗಾವಿಯಲ್ಲಿ ಎಂಇಎಸ್ ಸಂಘಟನೆಯೂ ಕನ್ನಡ ವಿರೋಧಿ ನೀತಿಯನ್ನು ಅನುಸಿರಿಸಿ ಸಂಗೋಳ್ಳಿ ರಾಯಣ್ಣನ ಪ್ರತಿಮೆಯನ್ನು ಭಗ್ನಗೊಳಿಸಿ ಸರ್ಕಾರಿ ವಾಹನಗಳ ಮೇಲೆ ಕಲ್ಲು ತುರಾಟ ಮಾಡಿ,ಪುಂಡಾಟಿಕೆಯನ್ನು ಮೆರೆದಿದ್ದು, ಸಹಿಸಲಾಗದು ಎಂದರು.ಕೂಡಲೇ ಈ ಪುಂಡಾಟಿಕೆ ಮಾಡುತ್ತಿರುವ ಜನರನ್ನು ಬಂಧಿಸಿ, ಕಠಿಣ ಶಿಕ್ಷಗೆ ಗುರಿಯಾಗಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಚಿಂಚನಸೂರ, ರವಿ ಚಹೌನ,ವಿಜಯಲಕ್ಷ್ಮಿ, ನಿರ್ಮಲಾ ಬರಗಾಲಿ, ಸೇರು ಕಾಳೆ, ರಾಜು ಉಪಾಧ್ಯ, ಗೌತಮ ಹದನೂರ, ರವಿ.ಲಕ್ಷ್ಕಣ, ಪ್ರಶಾಂತ ಮಠಪತಿ, ಗೌಸ್, ಬಸಯ್ಯ, ಪ್ರದೀಪ, ರಾಜೇಂದ್ರ, ಮಲ್ಲಿಕಾರ್ಜುಣ ಕಣ್ಣಿ, ಅನಿಲಕುಮಾರ ಕಡಗಂಚಿ, ಕಿರಣ, ಶರಣು, ಶಿವಶಂಕರ ಪಾಟೀಲ, ಮಲ್ಲು ದತತರಗಾಂವ, ರವಿ, ಲಿಂಗರಾಜ ಬನಶೆಟ್ಟಿ ಸೇರಿದಂತೆ ಹಲವರು ಇದ್ದರು.