ಕಲಬುರಗಿ: ನಗರದ ಶರಣಬಸವ ವಿಶ್ವವಿದ್ಯಾನಿಲಯದ ಹಿಂಭಾಗದ ದ್ವಾರಬಾಗಿಲಿನ ಬಲಭಾಗದಲ್ಲಿ ಅಲ್ಲಿ ನ ಜನರು ಕಸದ ರಾಶಿರನ್ನು ದಿನಾ ಕಸಾ , ಮುಸುರಿ ಇನ್ನೂ ಅನುಪಯುಕ್ತ ಕಸದರಾಶಿಯನ್ನು ದ್ವಾರ ಬಾಗಿಲಿನ ಬಲಭಾಗದಲ್ಲಿ ತಂದು ಹಾಕುತ್ತಾರೆ.
ವಿಶ್ವವಿದ್ಯಾಲಯಕ್ಕೆ ಬರುವ ವಿದ್ಯಾರ್ಥಿಗಳು ಒಳಗಡೆ ಹೋಗುವ ಮುನ್ನ ಒಳ್ಳೆಯ ದೃಶ್ಯ ಮತ್ತು ಒಳ್ಳೆಯ ಸುವಾಸನೆಯನ್ನು ತೆಗೆದುಕೊಂಡು ಹೋಗುವ ಬದಲು ಕಸದ ರಾಶಿಯ ದರ್ಶನ ಮತ್ತು ಹೊಲಸು ದುರ್ವಾಸನೆಯ ತೆಗೆದುಕೊಂಡು ಒಳಗಡೆ ಹೋಗುವ ಪರಿಸ್ಥಿತಿ ಬಂದಿದೆ. ಆದಕಾರಣ ಕೂಡಲೇ ಮಹಾನಗರ ಪಾಲಿಕೆ ಆಯುಕ್ತರು ಅಲ್ಲಿನ ಜನಕ್ಕೆ ಕಸ ಹಾಕಲು ಒಂದು ಕಸದ ತೊಟ್ಟಿಯ ವ್ಯವಸ್ಥೆ ಮಾಡಿ ಎಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.
– ರಾಜಶೇಖರ್ ಮಾತೋಳಿ, ಶರಣಬಸವ ವಿಶ್ವವಿದ್ಯಾಲಯ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿ