ಆರ್ಯ ಈಡಿಗ ಸಮಾಜ ಸಂಘದ ಅಧ್ಯಕ್ಷ ಹುದ್ದೆ ಮುಂದುವರೆಸಿಕೊಂಡು ರಾಮಯ್ಯಾ ಗುತ್ತೇದಾರ ಗೆ ಸೂಚನೆ

0
18

ಕಲಬುರಗಿ (ಸೇಡಂ) ಜಿಲ್ಲೆಯ ಸೇಡಂ ತಾಲೂಕಿನ ಆರ್ಯ ಈಡಿಗ ಸಮಾಜ ಸಂಘದ ತಾಲ್ಲೂಕು ಅಧ್ಯಕ್ಷ ಹುದ್ದೆಯ ಮೂರು ವರ್ಷಗಳ ಅಧಿಕಾರ ಅವಧಿ ಮುಗಿದ ಹಿನ್ನೆಲೆಯಲ್ಲಿ, ಕಲಬುರಗಿಯ ಮಾನ್ಯ ಜಿಲ್ಲಾ ಅಧ್ಯಕ್ಷರಾದ ರಾಜೇಶ ಜೆ ಗುತ್ತೇದಾರ ಅವರ ಆದೇಶದ ಮೇರೆಗೆ ಪ್ರಸ್ತುತ ಗೌರವಾಧ್ಯಕ್ಷರಾಗಿರುವ ರಾಮಯ್ಯ ಗುತ್ತೇದಾರ ಕುರಕುಂಟಾ ಇವರಿಗೆ ಮುಂದಿನ ತಾಲೂಕಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಸೇಡಂ ತಾಲ್ಲೂಕು ಆರ್ಯ ಈಡಿಗ ಸಮಾಜ ಸಂಘದ ಅಧ್ಯಕ್ಷ ಹುದ್ದೆ ನಿಭಾಯಿಸಿಕೊಂಡು ಹೋಗಲು ಆದೇಶಿಸಿರುತ್ತಾರೆ.

ಸದರಿ ರಾಮಯ್ಯಾ ಗುತ್ತೇದಾರ ಕುರಕುಂಟಾ ಇವರಿಗೆ ತಾಲೂಕಾ ಅಧ್ಯಕ್ಷರ ಹುದ್ದೆಯನ್ನು ವಹಿಸಿಕೊಂಡು ಸಂಘದ ಎಲ್ಲ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗುವಂತೆ ಕಲಬುರಗಿ ಜಿಲ್ಲಾ ಆರ್ಯ ಈಡಿಗ ಸಮಾಜದ ಅಧ್ಯಕ್ಷರಾದ ರಾಜೇಶ ಗುತ್ತೇದಾರ ಅವರು ಸೂಚಿಸಿರುತ್ತಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here