ಕಲಬುರಗಿ : ತೊಗರಿ ಧಾನ್ಯಕ್ಕೆ ವೈಜ್ಞಾನಿಕ ಬೆಂಬಲ ಬೆಲೆ ಹಾಗೂ ಬೆಳೆ ನಷ್ಟ ಪರಿಹಾರ ಸಮರ್ಪಕವಾಗಿ ನೀಡಬೇಕೆಂದು ಒತ್ತಾಯಿಸಿ ರೈತ -ಕೃಷಿ ಕಾರ್ಮಿಕರ ಸಂಘಟನೆಯ (ಆರ್ ಕೆ ಎಸ್) ಕಾರ್ಯಕರ್ತರು, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ(ಕೆಕೆಆರ್ ಡಿ ಬಿ) ಪ್ರಾದೇಶಿಕ ಆಯುಕ್ತರಾದ ಎನ್.ವಿ. ಪ್ರಸಾದ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಸಂಘಟನೆಯ ಜಿಲ್ಲಾ ಘಟಕದ ಕಾರ್ಯದರ್ಶಿ ಮಹೇಶ ಎಸ್.ಬಿ. ಜಿಲ್ಲಾ ಉಪಾಧ್ಯಕ್ಷ ವಿಶ್ವನಾಥ ಭೀಮಳ್ಳಿ ಸೇರಿದಂತೆ ಹಲವರು ಇದ್ದರು.