ಮದರ್ ತೆರೆಸಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಾಷ್ಟ್ರೀಯ ಗಣಿತ ದಿನಾಚರಣೆ

0
15

ಕಲಬುರಗಿ: ನಗರದ ಗೋದುತಾಯಿ ಬಡಾವಣೆಯಲ್ಲಿರುವ ಮದರ್ ತೆರೆಸಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬುಧವಾರ ಶ್ರೇಷ್ಟ ಗಣಿತ ತಜ್ಞರಾದ ಶ್ರೀನಿವಾಸ ರಾಮಾನುಜನ್ ಅವರ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಗಣಿತ ದಿನವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳಾದ ನಾಗೇಂದ್ರ ಬಡಿಗೇರ ಅವರು ಮಾತನಾಡಿ ಗಣಿತ ಎಂದರೆ ಕಠಿಣವಾದ ವಿಷಯ ಎನ್ನುವ ಮಕ್ಕಳು ಈ ಕಾರ್ಯಕ್ರಮದ ಮೂಲಕ ಹೆಚ್ಚಿನ ಆಸಕ್ತಿ ತೋರಿಸುವಂತಾಗಬೇಕು. ಅಂದಾಗ ಮಾತ್ರ ಇಂತಹ ಕಾರ್ಯಕ್ರಮಗಳಿಗೆ ಒಂದು ಮೆರಗು ಬಂದಂತೆ ಆಗುತ್ತದೆ ಎಂದರು.

Contact Your\'s Advertisement; 9902492681

ಗಣಿತ ಶಿಕ್ಷಕರಿಂದ ಹೈಸ್ಕೂಲ್ ಮಕ್ಕಳಿಗಾಗಿ ವಿವಿಧ ಪರೀಕ್ಷೆ ಹಮ್ಮಿಕೊಳ್ತಲಾಗಿತ್ತು. ಅದರಲ್ಲಿ ಕೆಲವು ಮಕ್ಕಳು ವಿಶೇಷವಾದ ಬಹುಮಾನ ಪಡೆದರು. ಅದರಂತೆ ಪ್ರಾಥಮಿಕ ಮಕ್ಕಳು ಕೂಡ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿ, ವಿಶೇ? ಬಹುಮಾನ ಪಡೆದರು.

ಗಣಿತ ಶಿಕ್ಷಕಿಯರಾದ ಸುಕನ್ಯಾ ವಾರದ, ಶಿಲ್ಪಾ ಉಡುಗಿ, ಗೀತಾಂಜಲಿ ಸಿನ್ನುರಕರ, ಭಾಗ್ಯಶ್ರೀ ಹೈತಾಪುರ, ಸಹಾಯಕ ಶಿಕ್ಷಕಿಯರಾದ ಸುಜಾತಾ ನಾಗನಹಳ್ಳಿ, ಮನೀಶಾ ಜೋಶಿ ಸೇರಿದಂತೆ ಶಾಲೆಯ ಎಲ್ಲಾ ಶಿಕ್ಷಕಿಯರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here