ಅಳ್ನಾವರ : ರಾಜ್ಯದಲ್ಲಿ ಭಾಷೆ ಹೆಸರಿನಲ್ಲಿ ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡುತ್ತಿರುವ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿ ಪಟ್ಟಣದ ಮರಾಠಾ ಸೇವಾ ಸಮಿತಿ ಸದಸ್ಯರು ತಹಶೀಲ್ದಾರ್ ಅಮರೇಶ ಪಮ್ಮಾರ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ದೇಶಕ್ಕಾಗಿ ಹೋರಾಡಿದ ಶಿವಾಜಿ ಮಹಾರಾಜರ ಮೂರ್ತಿ, ಸಂಗೊಳ್ಳಿ ರಾಯಣ್ಣ ಮೂರ್ತಿ ವಿರೂಪಗೊಳಿಸಿರುವುದು, ಕನ್ನಡ ಬಾವುಟಕ್ಕೆ ಅವಮಾನ ಮಾಡಿರುವುದು ಮತ್ತು ರಾಜ್ಯದ ಬಸ್‌ಗಳನ್ನು ಜಖಂಗೊಳಿಸಿ ಅಶಾಂತಿ ಉಂಟು ಮಾಡುತ್ತಿರುವವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು. ಇದಕ್ಕೂ ಮುನ್ನ ಬಸ್ ನಿಲ್ದಾಣದ ಹತ್ತಿರದ ಅಂಭಾ ಭವಾನಿ ದೇವಸ್ಥಾನದಿಂದ ಪಟ್ಟಣ ಪಂಚಾಯ್ತಿ ಕಚೇರಿವರೆಗೆ ಸದಸ್ಯರು ಮೆರವಣಿಗೆ ನಡೆಸಿದರು.
ಪುಂಡಲಿಕ ಪಾರ್ದಿ, ರಾಜು ಅಷ್ಟೇಕರ, ಸಂದೀಪ ಪಾಟೀಲ, ಕೇದಾರ ಬಾಚೋಳಕರ, ವಿಕ್ರಾಂತ ಅಷ್ಟೇಕರ, ಆಭಯ ವಾಘಮೋಡೆ, ರಾಜು ಮುನವಳ್ಳಿ, ಸುಭಾಸ ಪಾಟೀಲ, ಉಮೇಶ ಕದಂ, ಅರುಣ ರಾಂದೇವಾಡಿ, ಬಾಳು ಪಾಟೀಲ, ವಿಶಾಲ ಪಾಲಕರ , ಶಂಕರ ಪಾರ್ದಿ ಇದ್ದರು.