ಜಲ ಜೀವನ ಮಿಷನ್ ಯೋಜನೆ ಸದ್ಭಳಕೆಯಾಗಲಿ-ಶಿವಾನಂದ ಪಾಟೀಲ

0
136

ಶಹಾಬಾದ:ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸುವ ಮಹಾತ್ವಾಕಾಂಕ್ಷಿ ಜಲ ಜೀವನ ಮಿಷನ್ ಯೋಜನೆ ಸಂಪೂರ್ಣವಾಗಿ ಸದ್ಭಳಕೆಯಾಗಲಿ ಎಂದು ಮಾಜಿ ಜಿಪಂ ಸದಸ್ಯ ಶಿವಾನಂದ ಪಾಟೀಲ ಮರತೂರ ಹೇಳಿದರು.

ಅವರು ಹೊನಗುಂಟಾ ಗ್ರಾಮದಲ್ಲಿ ಗ್ರಾಪಂ ವತಿಯಿಂದ ಜಲ ಜೀವನ ಮಿಷನ್ ಯೋಜನೆ ಮೂಲಕ ಗ್ರಾಮಗಳಲ್ಲಿ ಕುಡಿಯುವ ನೀರು ಒದಗಿಸುವ ಕಾಮಗಾರಿಯಲ್ಲಿ ಪಾಲ್ಗೊಂಡು ಮಾತನಾಡಿದರು.

Contact Your\'s Advertisement; 9902492681

ಗ್ರಾಮೀಣ ಭಾಗದ ಎಲ್ಲ ಮನೆಗಳಿಗೂ ನಲ್ಲಿ ನೀರು ಪೂರೈಕೆ ಗುರಿ ಹೊಂದಲಾಗಿದ್ದು, ಈ ಯೋಜನೆಯಡಿಯಲ್ಲಿ ಗ್ರಾಮದ ಜನರಿಗೆ ಶುದ್ಧ ಕುಡಿಯುವ ನೀರು ಅವರ ಮನೆ ಬಾಗಿಲಿಗೆ ತಲುಪಲಿದೆ.ಇದರಿಂದ ಅಲೆದಾಡುವುದು ತಪ್ಪುತ್ತದೆಯಲ್ಲದೇ, ಗ್ರಾಮೀಣ ಪ್ರದೇಶದ ಜನರು ಕೂಡ ಕುಡಿಯುವ ನೀರನ್ನು ಉಪಯೋಗಿಸಲಿದ್ದಾರೆ.

ಮತಕ್ಷೇತ್ರದ ಜನತೆಗೆ ಮೂಲ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಸರಕಾರ ಮಟ್ಟದಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ಸತತ ಪ್ರಯತ್ನ ಮಾಡುತ್ತಿದ್ದಾರೆ.ಅಲ್ಲದೇ ಈಗಾಗಲೇ ಗ್ರಾಮದ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ಒದಗಿಸಿದ್ದಾರೆ. ಗ್ರಾಮದಲ್ಲಿ ಹಿಂದೆಂದೂ ಕಾಣದ ಅಭಿವೃದ್ಧಿ ಆಗಿದೆ ಎಂಬ ಸಂತಸ ಭಾವ ನನಗಿದೆ ಎಂದರು.

ಗ್ರಾಪಂ ಅಧ್ಯಕ್ಷ ಭೀಮಬಾಯಿ ಮಲ್ಲಪ್ಪ ರಸ್ತಾಪೂರ ಕಾಮಗಾರಿಗೆ ಚಾಲನೆ ನೀಡಿದರು.ಗ್ರಾಪಂ ಉಪಾಧ್ಯಕ್ಷ ತಿಪ್ಪಣ್ಣ ಚಡಬಾ, ಮುಖಂಡರಾದ ರುದ್ರಗೌಡ ಮಾಲಿ ಪಾಟೀಲ,ದೇವೆಂದ್ರ ಕಾರೊಳ್ಳಿ, ಪೀರಪಾಶಾ,ನಜೀರ್ ಪಟೇಲ್, ಸಾಬಣ್ಣ ಕೊಲ್ಲೂರ್,ಮಲ್ಕಪ್ಪ ಮುದ್ದಾ, ಗ್ರಾಪಂ ಸದಸ್ಯರಾದ ಶರಣಬಸಪ್ಪ, ರಾಜು ಸಣಮೋ, ಬಸವರಾಜ ಕಂಟಿಕಾರ,ಶಿವಕುಮಾರ ಬುರ್ಲಿ, ಶವಾಣಿ ವಾರಕರ್, ಜೈಭೀಮ ರಸ್ತಾಪೂರ,ಮಹಾದೇವ ಮೇತ್ರೆ,ನಿಂಗಣ್ಣ ಕಾರೊಳ್ಳಿ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here