ಪಕ್ಷಾಂತರ-ತತ್ವಾಂತರ ಒಪ್ಪಿದವರಿಂದ ಮತಾಂತರ ನಿಷೇಧ!

0
38

ವಾಡಿ: ಆಪರೇಷನ್ ಕಮಲದ ಮೂಲಕ ಹಣದ ಆಮಿಷ್ಯ, ಬೆದರಿಕೆಯೊಡ್ಡಿ ಬೇಕುಬೇಕಾದವರನ್ನೆಲ್ಲ ಪಕ್ಷಾಂತರ-ತತ್ವಾಂತರ ಮಾಡಿಸಿ ರಚನೆಯಾಗಿರುವ ಸರಕಾರದ ಮತಾಂತರ ನಿಷೇಧ ಕಾಯ್ದೆಯ ನಡೆ ಇಬ್ಬಗೆ ಧೋರಣೆಯ ಪರಮಾವದಿಯಾಗಿದೆ ಎಂದು ಎಂದು ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‌ಯುಸಿಐ) ಕಮ್ಯುನಿಸ್ಟ್ ಪಕ್ಷ ಟೀಕಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಎಸ್‌ಯುಸಿಐ (ಸಿ) ಪಕ್ಷದ ಜಿಲ್ಲಾ ಸಮಿತಿ ಸದಸ್ಯ, ವಾಡಿ ನಗರ ಸಮಿತಿ ಕಾರ್ಯದರ್ಶಿ ಕಾಮ್ರೇಡ್ ವೀರಭದ್ರಪ್ಪ ಆರ್.ಕೆ, ರಾಜ್ಯ ಬಿಜೆಪಿ ಸರಕಾರ ಮಂಡಿಸಿರುವ ಮತಾಂತರ ನಿಷೇಧ ಕಾಯ್ದೆ ಜಾರಿಯ ಗದ್ದಲ ಸೃಷ್ಠಿಯ ಹಿಂದೆ ಅಲ್ಪಸಂಖ್ಯಾತರನ್ನು ಭಯ ಪಡಿಸುವ ಹುನ್ನಾರ ಅಡಗಿದ್ದಲ್ಲದೆ ಜನರ ಗಮನವನ್ನು ಅಧಿವೇಷನದ ಚರ್ಚೆಗಳಿಂದ ಬೇರೆಡೆ ಸೆಳೆಯುವ ಪಿತೂರಿಯಾಗಿದೆ ಎಂದು ಆರೋಪಿಸಿದ್ದಾರೆ.

Contact Your\'s Advertisement; 9902492681

ರಾಜ್ಯ ಬಿಜೆಪಿ ಸರಕಾರ ತರಾತುರಿಯಲ್ಲಿ ಸಿದ್ಧಪಡಿಸಿರುವ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿನ ರಕ್ಷಣಾ ಮಸೂಧೆ ೨೦೨೧ ವಿಧಾನ ಸಭೆಯಲ್ಲಿ ಮಂಡಿಸಿ ಅಂಗೀಕಾರಗೊಂಡಿದೆ. ಅಮಾಯಕರ ಬಲವಂತದ ಮತಾಂತರ ಯಾರೂ ಒಪ್ಪುವುದಿಲ್ಲ. ಅಲ್ಲದೆ ಇದನ್ನು ತಡೆಯಲು ಈಗಾಗಲೇ ಕಾನೂನುಗಳಿವೆ. ಮತ್ತೆ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದು ಧಾರ್ಮಿಕ ಸ್ವಾತಂತ್ರ್ಯ ರಕ್ಷಿಸುವ ನೆಪದಲ್ಲಿ ಅಲ್ಪಸಂಖ್ಯಾತರಿಗೆ ಕಿರುಕುಳ ನೀಡಲು ಬಿಜೆಪಿ ಮತ್ತು ಸಂಘ ಪರಿವಾರ ಮುಂದಾಗಿದೆ. ಬಿಜೆಪಿ ಪಕ್ಷದ ಕೋಮುವಾದಿ ಕಾಲಾಳು ಪಡೆಯನ್ನು ತೃಪ್ತಿಪಡಿಸಲು, ಜನರ ಗಮನವನ್ನು ನೈಜ ಸಮಸ್ಯೆಗಳಿಂದ ಬೇರೆಡೆ ಸೆಳೆಯಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಲೆ ಏರಿಕೆ, ಪ್ರವಾಹ, ಉದ್ಯೋಗ ನಾಶ ಇತ್ಯಾದಿ ಸಮಸ್ಯೆಗಳಿಂದ ಜನತೆ ಬಳಲಿದ್ದಾರೆ. ವಿದ್ಯಾರ್ಥಿಗಳು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ವಿರುದ್ಧ ಬೀದಿಗಿಳಿದಿದ್ದಾರೆ. ವಿದ್ಯಾರ್ಥಿ ವೇತನ, ಶುಲ್ಕ ವಿನಾಯಿತಿ ದೊರಕದೆ ಕಂಗಾಲಾಗಿದ್ದಾರೆ. ರೈತರು ಭೂಸುಧಾರಣಾ ತಿದ್ದುಪಡಿ ಕಾಯಿದೆ ಮತ್ತು ಎಪಿಎಂಸಿ ಕಾಯಿದೆಗಳ ವಿರುದ್ಧ ಹೋರಾಟದ ಘೋಷಣೆ ಮೊಳಗಿಸಿದ್ದಾರೆ. ಹೊಸ ಕಾರ್ಮಿಕ ಸಂಹಿತೆಗಳ ವಿರುದ್ಧ ಮತ್ತು ಖಾಸಗೀಕರಣದ ವಿರುದ್ಧ ಕಾರ್ಮಿಕರು ಮುಷ್ಕರಕ್ಕೆ ಸಿದ್ಧವಾಗುತ್ತಿದ್ದಾರೆ.

ಪ್ರವಾಹ ಸಂತ್ರಸ್ತರಿಗೆ ೨-೩ ವರ್ಷಗಳಿಂದ ಸರಿಯಾಗಿ ಪುನರ್ವಸತಿ ಒದಗಿಸದೆ ಬೀದಿಪಾಲಾಗಿದ್ದಾರೆ. ಇಂತಹ ಪರಸ್ಥಿತಿಯಲ್ಲಿ ಸರಕಾರದ ಮೇಲೆ ಭ್ರಷ್ಟಾಚಾರದ ಆರೋಪ ಬಂದಿದೆ. ಎಲ್ಲ ಕಾಮಗಾರಿಗಳಲ್ಲಿ ಶೇ.೪೦ ಕಮಿಷನ್ ಕೊಡುಬೇಕಾಗಿದೆ ಎಂಬ ಆಘಾತಕಾರಿ ಆರೋಪ ಗುತ್ತಿಗೆದಾರರೇ ಮಾಡಿದ್ದಾರೆ. ಬಿಟ್ ಕಾಯಿನ್ ಹಗರಣದಲ್ಲಿ ಪ್ರಭಾವಿ ಅಧಿಕಾರಸ್ಥರ ಹೆಸರು ಕೇಳಿಬರುತ್ತಿದೆ.

ಜನರು ಬೆವರು ಸುರಿಸಿ ಪಾವತಿಸಿದ ತೆರಿಗೆ ಹಣ ಜನಕಲ್ಯಾಣ ಯೋಜನೆಗಳಿಗೆ ಬಳಕೆಯಾಗುವ ಬದಲು ಅಧಿಕಾರಿಗಳ, ರಾಜಕಾರಣಿಗಳ ಮತ್ತು ಬಂಡವಾಳಶಾಹಿಗಳ ಜೇಬು ಸೇರುತ್ತಿದೆ. ಇದನ್ನು ಜನರಿಂದ ಮರೆಮಾಚಲು ಮತಾಂತರ ನಿಷೇಧ ಕಾಯಿದೆ ಮಂಡಿಸಿ ಕೋಮು ಗಲಬೆಗಳಿಗೆ ಪ್ರಚೋದನೆ ನೀಡಿದೆ ಎಂದು ಹೋರಾಟಗಾರ ವೀರಭದ್ರಪ್ಪ ಆರ್.ಕೆ ಗಂಭೀರ ಆರೋಪ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here