ದೇವರಗೋನಾಲ ಗ್ರಾಮದಲ್ಲಿ ಮಗ ತಂದ ಮಾಂಗಲ್ಯ ನಾಟಕ ಪ್ರದರ್ಶನ

0
14

ಸುರಪುರ: ತಾಲೂಕಿನ ದೇವರಗೋನಾಲ ಗ್ರಾಮದಲ್ಲಿ ಬಲಭೀಮೇಶ್ವರ ಕಾರ್ತಿಕೋತ್ಸವದ ಅಂಗವಾಗಿ ವಿವಿಧ ನಾಟಕ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಗುರು ರಾತ್ರಿ ದೇವರಗೋನಾಲ ಗ್ರಾಮದ ನುರಿತ ಕಲಾವಿದರಿಂದ ಬಸವರಾಜ್ ಎಲದಳ್ಳಿ ರಚನೆಯ ಮಗ ತಂದ ಮಾಂಗಲ್ಯ ಎಂಬ ಸಾಮಾಜಿಕ ನಾಟಕ ಪ್ರರ್ಶಿಸಲಾಯಿತು.

ಗ್ರಾಮದ ಹಿರಿಯ ಕಲಾವಿದರಾದ ವೆಂಕಟೇಶ ಬೇಟೆಗಾರ,ದೊಡ್ಡ ದೇಸಾಯಿ,ಯಲ್ಲಪ್ಪ ಕಾಡ್ಲೂರ್,ಸಣ್ಣ ದೇಸಾಯಿ,ಈಶ್ವರ ಬಸಂತಪುರ,ನಿಂಗಣ್ಣ ಗುಡ್ಡದ ಪೂಜಾರಿ,ಮಹಾಂತೇಶ ಪಾಟೀಲ್ ಸೇರಿದಂತೆ ಅನೇಕರಿದ್ದರು.

Contact Your\'s Advertisement; 9902492681

ಟಿ.ವಿ,ಸಿನೆಮಾಗಳ ಭರಾಟೆಯಲ್ಲಿ ನಾಟಕಗಳ ಪ್ರದರ್ಶನ ಕಡಿಮೆಯಾಗಿರುವ ಇಂದಿನ ದಿನಮಾನಗಳಲ್ಲಿ ನಾಟಕ ವೀಕ್ಷಕರು ಇನ್ನೂ ಕಡಿಮೆಯಾಗಿಲ್ಲ ಎನ್ನುವಂತೆ ಈ ನಾಟಕವನ್ನು ವೀಕ್ಷಿಸಲು ಸಾವಿರಾರು ಜನರು ಸೇರಿದ್ದು ಕಂಡುಬಂತು.ಹಿರಿಯ ನುರಿತ ಕಲಾವಿದರೆ ಹೆಚ್ಚಾಗಿರುವುದರಿಂದ ಇಡೀ ನಾಟಕದಲ್ಲಿನ ಎಲ್ಲಾ ಪಾತ್ರಗಳಿಗೆ ಜೀವತುಂಬಿದ್ದರು.ಪ್ರತಿಯೊಂದು ಪಾತ್ರಧಾರಿಯ ಅಭಿನಯವನ್ನು ಕಂಡು ಕಲಾಸಕ್ತರು ಶಿಳ್ಳೆ ಕೇಕೆ ಹಾಕಿ ಸಂತಷವನ್ನು ಪಡುತ್ತಿದ್ದರು.ಗುರುವಾರ ಇಡೀ ರಾತ್ರಿ ನಡೆದ ನಾಟಕ ಪ್ರರ್ಶನದಲ್ಲಿ ಎಲ್ಲಾ ಸಾವಿರಾರು ಸಂಖ್ಯೆಯ ವೀಕ್ಷಕರು ನಡಗುವ ಛಳಿಯಲ್ಲಿಯೆ ಕುಳಿತು ನಾಟಕ ವೀಕ್ಷಿಸಿದ್ದು ನಾಟಕಗಳಿಗೆ ಇನ್ನೂ ಜೀವಂತಿಕೆ ಇದೇ ಎನ್ನುವುದನ್ನು ಎತ್ತಿ ತೋರಿಸಿದಂತಿತ್ತು.

ಇದಕ್ಕು ಮುನ್ನ ಸ್ಥಳಿಯ ರಂಗ ಕಲಾವಿದರು ಹಾಗು ನಾಟಕಕಾರರಾದ ಯಲ್ಲಪ್ಪ ಕಾಡ್ಲೂರವರ ರಚನೆಯ ಪ್ರೇಮಸೌಧಕ್ಕೆ ಕಾಮದ ಕಿಡಿ ಅರ್ಥಾತ್ ಜಾರಿಣಿಯ ಜಾಗೃತಿ ಎನ್ನುವ ಮತ್ತು ಧರ್ಮ ದೇಗುಲ ಅರ್ಥಾತ್ ಸೇಡಿಟ್ಟ ಸರ್ಪ ಎನ್ನುವ ಎರಡು ನಾಟಕಗಳನ್ನೂ ಪ್ರದರ್ಶಿಸಲಾಗಿದೆ.ಈ ನಾಟಕಗಳಲ್ಲಿ ನೂತನ ಕಲಾವಿದರಾದ ನಬಿಲಾಲ ಮುಲ್ಲಾ,ಮಲ್ಲು ಮಾಲಿ ಪಾಟೀಲ್,ಬಸವರಾಜ ಮಡಿವಾಳ,ಶಿವರಾಜ್ ಬೈರಮರಡಿ,ಶರಣಬಸವ ಶಹಾಪುರಕರ್,ಬಸವರಾಕ ಬಂಟನೂರ್,ಸಂಗಮೇಶ ದಳವಾಯಿ,ಶೇಖರ ಹೊಸ್ಮನಿ ಅಭಿನಯಿಸಿದ್ದರು.

ದೇವರಗೋನಾಲ ಗ್ರಾಮದಲ್ಲಿ ನಡೆದ ಮೂರು ನಾಟಕಗಳ ಪ್ರದರ್ಶನವನ್ನು ನೋಡಿದ ಜನರು ದೇವರಗೋನಾಲ ಗ್ರಾಮದಲ್ಲಿನ ಕಲಾವಿದರ ದಂಡು ಕಂಡು ರಂಗ ಕಲೆ ಎಂಬುದು ಇನ್ನೂ ಜೀವಂತವಾಗಿದೆ ಎಂದು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here