ಸುರಪುರ: ಐ.ಸಿ.ಎ.ಆರ್ ಕೃಷಿ ವಿಜ್ಞಾನ ಕೇಂದ್ರ ಕವಡಿಮಟ್ಟಿಯಲ್ಲಿ ರಾಷ್ಟ್ರಿಯ ರೈತದಿನ ಕಿಸಾನ್ ದಿನವನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥರಾದ ಡಾ.ಅಮರೇಶ ವೈ.ಎಸ್. ರಾಷ್ಟ್ರಿಯ ರೈತರ ದಿನಾಚರಣೆಯ ಶುಭಾಶಯ ಕೊರಿದರು, ಭಾರತದ ೫ನೇ ಪ್ರಧಾನ ಮಂತ್ರಿಯಾದ ಚೌಧರಿ ಚರಣ ಸಿಂಗ್ ಅವರ ಜನ್ಮದಿನವನ್ನು ಕಿಸಾನ್ ದಿವಸ ಎಂದು ಆಚರಿಸಲಾಗುತ್ತಿದೆ. ಮಾನ್ಯ ಚೌದರಿ ಚರಣಸಿಂಗ್ ಅವರು ಅಲ್ಪಾವದಿಗೆ ಭಾರತದ ಪ್ರಧಾನ ಮಂತ್ರಿಯಾಗಿದ್ದರು. ಈ ಅವದಿಯಲ್ಲಿ ರೈತರ ಕಲ್ಯಾಣಕ್ಕೆ ಅವರು ಅನೇಕ ರೈತರ ಪರ ಯೋಜನೆಗಳು ತಂದದ್ದಿಕ್ಕಾಗಿ ಅವರ ನೆನಪಿನಲ್ಲಿ ಈ ದಿನ ವನ್ನು ಆಚರಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಕೊಡೆಕಲ್ ಹೋಬಳಿ ಗೆದ್ದಲಮರಿ ಗ್ರಾಮದ ಬಸವರಾಜ ಅಮೃತರಾವ ದೇಸಾಯಿ ಇವರ ಸಮಗ್ರ ಕೃಷಿ ಪದ್ದತಿಯನ್ನು ಅಳವಡಿಸಿಕೊಂಡಿದ್ದಾರೆ ಇವರಿಗೆ ಕೃಷಿ ವಿಜ್ಞಾನ ಕೇಂದ್ರ ಕವಡಿಮಟ್ಟಿವತಿಯಿಂದ ಸನ್ಮಾಸಲಾಯಿತು ಇವರು ೨೦ ಎಕರೆ ಬರಡು ಭೂಮಿಯನ್ನು ಕೃಷಿ ಮಾಡಿ ಮಾವು, ದಾಳಿಂಬೆ, ನಿಂಬೆ, ತೆಂಗು, ಭತ್ತ, ತೋಗರಿ, ಮೇಣಸಿನಕಾಯಿ, ಬೇಳೆಗಳು ಬೆಳದಿದ್ದಾರೆ.
ಇನ್ನೋರ್ವ ಪ್ರಗತಿಪರ ರೈತರಾದ ಬಿಳಾರ ಗ್ರಾಮದ ವಡಗೇರಿ ತಾಲ್ಲೂಕಿನ ಶ್ರೀ. ಅಮರಪ್ಪ ಸಹುಕಾರ ಅಂಗಡಿ ಇವರು ಹತ್ತಿಯ ಬೆಳೆಯನ್ನು ಹೆಚ್ಚು ಪ್ರಮಾಣದಲ್ಲಿ ಬೆಳೆದು ಅತಿ ಹೆಚ್ಚು ಇಲುವರಿಯನ್ನು ಪಡೆದ ಸುತ್ತಮುತ್ತಲಿನ ರೈತರಿಗೆ ಮಾದರಿಯಾಗಿದ್ದಾರೆ. ಕೃಷಿ ವಿಜ್ಞಾನ ಕೇಂದ್ರ ಕವಡಿಮಟ್ಟಿವತಿಯಿಂದ ಸನ್ಮಾಸಲಾಯಿತು ಈ ಕಾರ್ಯಕ್ರಮದಲ್ಲಿ ಮುಖ್ಯಥಿಗಳದ ಬಸವರಾಜ ಅಮೃತರಾವ ದೇಸಾಯಿ ಇವರು ತಮ್ಮ ಕೃಷಿ ಅನುಭವನ್ನು ತಿಳಿಸಿದರು ಕೃಷಿ ವಿಜ್ಞಾನ ಕೇಂದ್ರ , ಕೃಷಿ ವಿಶ್ವವಿಧ್ಯಾಲಯ ಹಾಗೂ ಕೃಷಿ ಇಲಾಖೆಗಳ ಸಂಪರ್ಕಿಸಿ ಆಧುನಿಕ ಕೃಷಿ ತಂತ್ರಜ್ಞಾನಗಳ ಪಡೆದು ಅವುಗಳನ್ನು ಅಳವಡಿಸಿಕೊಂಡು ಕೃಷಿಯಲ್ಲಿ ಹೆಚ್ಚಿನ ಲಾಭ ಪಡೆಯಬೇಕೆಂದು ತಿಳಿಸಿದರು.
ಇನ್ನೋರ್ವ ಪ್ರಗತಿಪರ ರೈತರಾದ ಶ್ರೀ. ಅಮರಪ್ಪ ಸಹುಕಾರ ಅಂಗಡಿ ಮಾತನಾಡಿ ತಮ್ಮ ಕೃಷಿ ಅನುಭವವನ್ನು ಅಂಚಿಕೊಂಡರು. ಸನ್ಮಾಸಿದ್ದಕ್ಕಾಗಿ ಕೃಷಿ ವಿಜ್ಞಾನ ಕೇಂದ್ರ ಕವಡಿಮಟ್ಟಿಗೆ ವಂದಿಸಿದರು.
ಡಾ. ದೆವೇಂದ್ರ ಬೀರಲದಿನ್ನಿ ಕ್ಷೇತ್ರ ಅಧಿಕ್ಷರು ಇವರು ಕೃಷಿ ಭೂಮಿ ಹೊಂದಿದ ಪ್ರತಿಯೊಬ್ಬ ರೈತರು ದೇಶದ ಬೆನ್ನೆಲಬು ಮತ್ತು ದೇಶದ ಆದಾಯ ಹೆಚ್ಚಿಸುವಲ್ಲಿ ರೈತರು ಪಾತ್ರ ದೊಡ್ಡದು ಎಂದು ತಿಳಿಸಿದರು ಡಾ. ಸತಿಶ ಕಾಳೆ ಕಾರ್ಯಕ್ರಮವನ್ನು ನಿರೂಪಿಸಿ, ಸ್ವಾಗತಿಸಿದರು ಮತ್ತು ಡಾ. ಗುರುಪ್ರಸಾದ್ ಹೆಚ್ ವಂದನಾರ್ಪಣೆ ಮಾಡಿದರು.
ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಯಾದ ಡಾ. ಕೋಟ್ರೆಶ ಪ್ರಸಾದ್ ಮತ್ತು ಸಿಬ್ಬಂದಿಗಳಾದ ಶ್ರೀಮತಿ ಶ್ರೀದೆವಿ, ಡಾ.ಶಿಲ್ಪಾ, ಅಮಾತೆಪ್ಪ, ಹಣಮಂತ, ಇರ್ಮಾನ್, ಉಪಸ್ಥಿತರಿದ್ದರು . ಈ ಕಾರ್ಯಕ್ರಮದಲ್ಲಿ ಸುಮಾರು ೩೫ ಜನ ರೈತರು ಭಾಗವಹಿಸಿದ್ದರು