ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಗರದ ಕನ್ನಡ ಭವನದಲ್ಲಿ ಶನಿವಾರ ಏರ್ಪಡಿಸಿದ ಮುಖಾಮುಖಿ ಕಾರ್ಯಕ್ರಮದಲ್ಲಿ ಚಲನಚಿತ್ರ ಹಾಸ್ಯ ನಟ ವೈಜನಾಥ ಬಿರಾದಾರ ಅವರನ್ನು ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಸತ್ಕರಿಸಿದರು. ಶಿವರಾಜ ಅಂಡಗಿ, ಧರ್ಮಣ್ಣಾ ಧನ್ನಿ, ಸಿದ್ಧದಾರ್ಥ ಚಿಮ್ಮಾಇದಲಾಯಿ, ಶಿವಾನಂದ ಮಠಪತಿ ಇತರರಿದ್ದದರು.
ಕಲಬುರಗಿ: ಪ್ರತಿಯೊಬ್ಬರ ಜೀವನದಲ್ಲಿ ಕನಸು ಮತ್ತು ಗುರಿ ಬಹಳ ಮುಖ್ಯ, ಅತೀ ಆಸೆಯಿಂದ ಮಾನವೀಯ ಸಂಬಂಧಗಳು ದೂರವಾಗುತ್ತಿವೆ. ಹೀಗಾಗಿ ಹೃದಯ ಶ್ರೀಮಂತಿಕೆಯಿಂದ ಮಾತ್ರ ಶಾಂತಿ, ಸಾಮರಸ್ಯ ಮೂಡಲು ಸಾಧ್ಯ ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದು ಖ್ಯಾತ ಹಾಸ್ಯ ನಟ-ರಾಷ್ಟ್ರ ಮಟ್ಟದ ಪ್ರಶಸ್ತಿ ಪುರಸ್ಕೃತ ವೈಜನಾಥ ಬಿರಾದಾರ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದ ಕನ್ನಡ ಭವನದಲ್ಲಿ ಶನಿವಾರ ನಡೆದ ‘ಮುಖಾಮುಖಿ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸತ್ಯ ಸಾಧಿಸಲು ಹೊರಟವರಿಗೆ ಎಲ್ಲ ತರಹದ ಸಂಕಷ್ಟ ತಪ್ಪಿದ್ದಲ್ಲ. ಜನರ ನಿಂದನೆಗಳು ಇದ್ದೆ ಇರುತ್ತವೆ. ಅವುಗಳನ್ನು ಲೆಕ್ಕಿಸದೇ ಗಟ್ಟಿತನದಿಂದ ನಡೆದಾಗ ಗುರಿ ಮುಟ್ಟಲು ಸಾಧ್ಯ ಎಂದು ಮಾರ್ಮಿಕವಾಗಿ ಹೇಳಿದರು.
ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಅನುಭವದಿಂದ ಸಿಗುವ ಜ್ಞಾನ ಯಾವುದೇ ವಿಶ್ವವಿದ್ಯಾಲಯದಿಂದ ಪಡೆಯಲು ಸಾಧ್ಯವಿಲ್ಲ. ಕ್ರಿಯಾಶೀಲ ವ್ಯಕ್ತಿಗಳು ಸಾಧಿಸುವ ಛಲ ನಿಷ್ಠೆ ಹೊಂದಿರುತ್ತಾರೆ. ಮೊದಲು ತಮ್ಮನ್ನು ತಾವು ಪ್ರೀತಿಸುವುದನ್ನು ಕಲಿಯಬೇಕು. ಆಗ ಮಾತ್ರ ಇಡೀ ಸಮಾಜ ನಮ್ಮನ್ನು ಮತ್ತು ಮಾಡುವ ಕೆಲಸವನ್ನು ಪ್ರೀತಿಸಲು ಸಾಧ್ಯ. ಇದಕ್ಕಾಗಿಯೇ ಬದ್ಧತೆ ಅಳವಡಿಸಿಕೊಳ್ಳುವುದು ಅಗತ್ಯವಿದೆ ಎಂದರು.
ಕಸಾಪ ಗೌರವ ಕಾರ್ಯದರ್ಶಿ ಶಿವರಾಜ್ ಎಸ್.ಅಂಡಗಿ, ಸಾಹಿತಿ ಧರ್ಮಣ್ಣಾ ಧನ್ನಿ, ಪ್ರಮುಖರಾದ ಶರಣಬಸಪ್ಪ ನರೂಣಿ, ಭುವನೇಶ್ವರಿ ಹಳ್ಳಿಖೇಡ, ವಿನೋದ ಜೇನವೇರಿ, ಸಂತೋಷ ಕುಡಳ್ಳಿ, ಮಂಜುನಾಥ ಕಂಬಾಳಿಮಠ, ವಿಶ್ವನಾಥ ತೊಟ್ನಳ್ಳಿ, ಶಿವಾನಂದ ಮಠಪತಿ, ಸಿದ್ಧಾರ್ಥ ಚಿಮ್ಮಾಇದಲಾಯಿ. ಹೆಚ್.ಎಸ್.ಬರಗಾಲಿ, ಮಹಾಂತೇಶ ಪಾಟೀಲ, ಗಂಗಾಧರ ಬಡಿಗೇರ, ಶಿವಶಂಕರ ವರ್ಮಾ, ಯೋಗೇಶ ಹಿರೇಮಠ, ಶರಣರೆಡ್ಡಿ ಕೋಡ್ಲಾ, ಜಗದೀಶ ಮರಪಳ್ಳಿ, ಬಿ.ಎಂ.ಪಾಟೀಲ ಕಲ್ಲೂರ, ರವೀಂದ್ರಕುಮಾರ ಭಂಟನಳ್ಳಿ, ವಿದ್ಯಾಸಾಗರ ದೇಶಮುಖ, ಪ್ರಭುಲಿಂಗ ಮೂಲಗೆ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.