ಸಂವಿಧಾನದ ಆಶಯಗಳನ್ನು ಭಗ್ನಗೊಳಿಸಿದ ಬಿಜೆಪಿ: ಶಾಸಕ ಪ್ರಿಯಾಂಕ್ ಖರ್ಗೆ ಆರೋಪ

0
20

ಕಲಬುರಗಿ: ಮತಾಂತರ ಕಾಯ್ದೆ ತರುವ ಮೂಲಕ ಬಿಜೆಪಿ ಸರಕಾರ ಸಂವಿಧಾನದ ಆಶಯಗಳನ್ನು ಭಗ್ನಗೊಳಿಸಿದೆ ಎಂದು ಮಾಜಿ ಸಚಿವರಾದ, ಶಾಸಕರಾದ ಹಾಗೂ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ಆರೋಪಿಸಿದರು.

ಅವರು ಶನಿವಾರ ಶಹಾಬಾದ ತಾಲೂಕಿನ ಭಂಕೂರು ಗ್ರಾಮದಲ್ಲಿ ರೂ ೫೦ ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಡಾ ಬಿ.ಆರ್. ಅಂಬೇಡ್ಕರ ಭವನಕ್ಕೆ ಅಡಿಗಲ್ಲು ಹಾಗೂ ರೂ ೧೭ ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಶಾಲಾ ಕೋಣೆ, ರೂ ೧೫ ವೆಚ್ಚದಲ್ಲಿ ನಿರ್ಮಾಣಗೊಂಡ ಬಾಬು ಜಗಜೀವನರಾಮ್ ಭವನ ಹಾಗೂ ರೂ ೧೭ ಲಕ್ಷದಲ್ಲಿ ನಿರ್ಮಾಣಗೊಂಡ ಪ್ರೌಢಶಾಲಾ ಕೊಠಡಿ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ತನ್ನ ಬಳಿ ಸಂಖ್ಯಾಬಲ ಇದೆ ಎಂದು(ಬಹುಮತ) ಬಿಜೆಪಿ ಸರ್ಕಾರ ಯಾವುದೇ ಚರ್ಚೆ ಮಾಡದೆ ಕದ್ದು ಮುಚ್ಚಿ ಬಿಲ್ಗಳನ್ನು ಪಾಸ್ ಮಾಡುತ್ತಿದೆ. ಸಂವಿಧಾನದ ಅಡಿಯಲ್ಲಿ ಯಾವುದೇ ಕಾಯಿದೆ ಕಾನೂನು ಜಾರಿಯಾಗಬೇಕಾದರೆ ಆ ಬಗ್ಗೆ ಚರ್ಚೆ ನಡೆಸಲೇಬೇಕು ಇಲ್ಲದಿದ್ದರೆ ಅದ್ಹೇಗೆ ಜನಪರವಾದ ಕಾಯ್ದೆಯಾಗುತ್ತದೆ.? ಎಂದು ಪ್ರಶ್ನಿಸಿದ ಶ್ರೀ ಪ್ರಿಯಾಂಕ್ ಖರ್ಗೆ ಬಿಜೆಪಿ ಸರ್ಕಾರ ಸಂವಿಧಾನದ ನೀತಿ ನಿಯಮಗಳನ್ನು ಗಾಳಿಗೆ ತೂರುವುದರ ಜೊತೆಗೆ ಬುದ್ಧ ಬಸವ ಅಂಬೇಡ್ಕರ್ ಜಗಜೀವನರಾಂ ಅವರ ಆಶಯಗಳನ್ನು ಮಣ್ಣು ಪಾಲು ಮಾಡಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದ್ದು, ಗಾಂಜಾ,ಜೂಜಾಟ, ಕ್ರಿಕೆಟ್ ಬೆಟ್ಟಿಂಗ್ ದಂಧೆಗಳು ರಾಜಾರೋಷವಾಗಿ ಚಿತ್ತಾಪುರ, ಶಹಾಬಾದ,ಚಿಂಚೋಳಿ ಮುಂತಾದ ಕಡೆ ಅವ್ಯಾಹತವಾಗಿ ನಡೆಯುತ್ತಿವೆ.ಮತ್ತೆ ಅಧಿಕೃತವಾಗಿಯೇ ನಡೆಯುತ್ತಿವೆ. ಇದೆಲ್ಲ ಸರ್ಕಾರಕ್ಕೂ ಕೂಡಾ ಗೊತ್ತಿದೆ.ಆದರೆ, ತಡೆಯುತ್ತಿಲ್ಲ ಎಂದರು.

ಕಲ್ಯಾಣ ಕರ್ನಾಟಕದ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡಲು ಬಿಜೆಪಿಯವರಿಗೇ ಸಮಯವಿಲ್ಲ. ಬಿಜೆಪಿ ಸರ್ಕಾರ ಬಂದಾಗಿನಿಂದ ಇಲ್ಲಿಯವರೆಗೆ ಯಾವುದೇ ಒಂದು ಒಳ್ಳೆಯ ಕಾರ್ಯಕ್ರಮಗಳನ್ನು ತಂದಿಲ್ಲ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಯಗಬೇಕಾದರೆ ಅದು ಕಾಂಗ್ರೆಸ್ ಪಕ್ಷದಿಂದಲೇ ಸಾಧ್ಯ.ಬಿಜೆಪಿಯವರ ಸಾಧನೆ ಮಾತ್ರ ಶೂನ್ಯ ಎಂದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಭ್ರ?ಚಾರ ತಾರಕಕ್ಕೇರಿದ್ದು ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಕುಂಠಿತಗೊಂಡಿವೆ. ಈ ಹಿಂದೆ ಚಿತ್ತಾಪುರ ಕ್ಷೇತ್ರಕ್ಕೆ ಬಿಡುಗಡೆಯಾದ ರೂ ೨೭೦ ಕೋಟಿ ಅನುದಾನವನ್ನೂ ಕೂಡಾ ಈ ಸರ್ಕಾರ ತಡೆ ಹಿಡಿದಿದೆ ಎಂದು ಆರೋಪಿಸಿದರು.

ಆಪರೇ?ನ್ ಕಮಲ ಮಾಡಲು, ಭ್ರ?ಚಾರ ಮಾಡಲು ಈ ಸರ್ಕಾರದ ಬಳಿ ಹಣವಿದೆ ಆದರೆ ಅಭಿವೃದ್ದಿ ಕಾರ್ಯಗಳಿಗೆ ದುಡ್ಡಿಲ್ಲ. ಪಂಚಾಯತಿಗಳಿಗೆ ಅನುದಾನ ನೀಡಿ ಅವುಗಳ ಬಲವರ್ಧನೆಗೆ ಯಾವುದೇ ಕ್ರಮವಿಲ್ಲ. ಅಭಿವೃದ್ದಿ ಕಾರ್ಯಗಳಿಗಾಗಿ ಸದಸ್ಯರಿಗೆ ಅನುದಾನ ಬಿಡುಗಡೆ ಮಾಡಿಲ್ಲ. ಇವರ ಅಧಿಕಾರವಾಧಿಯಲ್ಲಿ ರೈತ, ಕೂಲಿ- ಕಾರ್ಮಿಕ ಶ್ರಮಿಕ ವರ್ಗ ನಿಟ್ಟುಸಿರು ಬಿಡುತ್ತಿದೆ. ಈ ವರ್ಗಗಳ ಏಳಿಗೆಗಾಗಿ ಒಂದೇ ಒಂದು ಕಾರ್ಯಕ್ರಮ ನೀಡಲು ಬಿಜೆಪಿ ಸರ್ಕಾರದ ಕೈಯಲ್ಲಿ ಆಗಿಲ್ಲ. ಇಂತಹ ಅಭಿವೃದ್ದಿ ಶೂನ್ಯ ಸರ್ಕಾರ ಇರಬೇಕಾ ? ಎಂದು ಪ್ರಶ್ನಿಸಿದರು.

ಇದಕ್ಕೂ ಮುನ್ನ, ಭಂಕೂಡವಾಡದಲ್ಲಿ ರೂ ೪೮ ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಹಿರಿಯ ಪ್ರಾಥಮಿಕ ಶಾಲೆಯ ಹೆಚ್ಚುವರಿ ಕೋಣೆ ಹಾಗೂ ತರಿತಾಂಡಾದಲ್ಲಿ ರೂ ೧೨ ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕಿರಿಯ ಪ್ರಾಥಮಿಕ ಶಾಲೆಯ ಹೆಚ್ಚುವರಿ ಕೋಣೆಯನ್ನು ಅವರು ಉದ್ಘಾಟಿಸಿದರು.

ಮಾಜಿ ಜಿಪಂ ಸದಸ್ಯ ಶಿವಾನಂದ ಪಾಟೀಲ ಮರತೂರ, ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಪೂಜಾರಿ ಮಾತನಾಡಿದರು.ಶಹಾಬಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಶೀದ್ ಮರ್ಚಂಟ್, ಭೀಮಣ್ಣಾ ಸಾಲಿ, ಎಪಿಎಮ್ಸಿ ಅಧ್ಯಕ್ಷ ಸಿದ್ದುಗೌಡ ಅಫಜಲಪೂರಕರ್, ಮುಖಂಡರಾದ ಅಣ್ಣಪ್ಪ ಸರಡಗಿ, ಪ್ರಕಾಶ ಜೈನ್, ಶರಣಬಸಪ್ಪ ಧನ್ನಾ, ರಮೇಶ ಮರಗೋಳ, ನಾಮದೇವ ರಾಠೋಡ, ದೇವೆಂದ್ರ ಕಾರೊಳ್ಳಿ, ತಿಪ್ಪಣ್ಣ ಕೋಮಟೆ, ರೌಫ್ ಸೇಠ,ಈರಣ್ಣ ಗುಡೂರ, ವಿಜಯಲಕ್ಷ್ಮಿ ವಗ್ಗನ್,ಜ್ಯೋತಿ ಮೋರೆ, ಗಿರೀಶ ಕಂಬಾನೂರ, ಮೃತ್ಯುಂಜಯ್ ಹಿರೇಮಠ, ಮುಜಾಹಿದ್ದಿನ್, ಅಜಿತಕುಮಾರ ಪಾಟೀಲ, ಜಾಕೀರ ಹುಸೇನ್, ರಾಜೇಶ ಯನಗುಂಟಿಕರ್,ಕಿರಣ ಚವ್ಹಾಣ, ಶಿವಾನಂದ ಹೊನಗುಂಟಿ, ಶೇಖರ್ ಕಾಸಿ, ಸುನಿಲ್ ದೊಡ್ಡಮನಿ, ಮನಸೂರ ಪಟೇಲ್, ಮಲ್ಲಪ್ಪ ಹೊಸ ಮನಿ, ಸೂರ್ಯಕಾಂತ ರದ್ದೆವಾಡಿ ಇತರರು ಉಪಸ್ಥಿತರಿದ್ದರು.

ಮದುವೆ, ಗೃಹಪ್ರವೇಶ ಇನ್ನೀತರ ಕಾರ್ಯಕ್ರಮಗಳಿಗೆ ಬಂದರೆ ನಿಮ್ಮ ಸಮಸ್ಯೆಗಳು ಪರಿಹಾರವಾಗುತ್ತಿದ್ದರೇ ಅದೆ ಮಾಡೋಣ. ನಾನು ನಿಮ್ಮ ಸೇವಕ.ಮನವಿ ಪತ್ರ ನಿಡೋದು ನಿಮ್ಮ ಹಕ್ಕು.ನಿಮ್ಮ ಧ್ವನಿಯಾಗಿ ವಿಧಾನಸೌಧದಲ್ಲಿ ನಿಮ್ಮ ಪರವಾಗಿ ಸಮಸ್ಯೆ ಪರಿಹರಿಸುವುದು ನನ್ನ ಕರ್ತವ್ಯ.ಕೆಲಸ ಆದ ಮೇಲೆ ಸತ್ಕಾರ ಮಾಡಿ.ಅದನ್ನು ಬಿಟ್ಟು ಮನವಿ ಪತ್ರ ನಿಡುವುದಕ್ಕಿಂತ ಮುಂಚೆಯೇ ಈ ಹಾರ, ಶಾಲು ಹಾಕಬೇಡಿ.ಕೆಲಸ ಮಾಡುವವರಿಗೆ ಮಾತ್ರ ಮತ ನೀಡಿ- ಪ್ರಿಯಾಂಕ್ ಖರ್ಗೆ ಶಾಸಕರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here