ಶ್ರೀಹರ್ಷ ಸಾಲಿಮಠ ಎಂಬ ಕತೆಗಾರನ ಬಗ್ಗೆ ಒಂದಿಷ್ಟು

0
16
  •  ಕೆ.ಶಿವು.ಲಕ್ಕಣ್ಣವರ

ಶ್ರೀಹರ್ಷ ಸಾಲಿಮಠರ ‘ಉದಕ ಉರಿದು’ ಕತಾ ಸಂಕಲನದ ಪರಾಮರ್ಶೆಗೆ ಮೊದಲು ಈ ಶ್ರೀಹರ್ಷ ಸಾಲಿಮಠರು ಯಾರು, ಏನು, ಎತ್ತ, ಎಂಬುದರ ಬಗೆಗೆ ನೋಡೋಣ. ಆ ಶ್ರೀಹರ್ಷ ಸಾಲಿಮಠರು ಒಬ್ಬ ಕತೆಗಾರ ಎಂಬುದನ್ನು ಮೊದಲು ಸಾಹಿತಿ ಹನುಮಂತ ಹಾಲಿಗೇರಿಯವರು ಪರಿಚಯಿಸಿದರು, ಆ ಶ್ರೀಹರ್ಷ ಸಾಲಿಮಠರ ಕತಾ ಸಂಕಲನವನ್ನು ಅವರಿಗೆ ಪ್ರೋತ್ಸಾಹಿಸಿ ‘ಉದಕ ಉರಿದು’ ಎಂಬ ಕತಾ ಸಂಕಲನವನ್ನು ಹೊರತರುವುದರ ಮೂಲಕ. ಹಾಗಾದರೆ ಈ ಶ್ರೀಹರ್ಷ ಸಾಲಿಮಠರು ಯಾರು, ಏನು, ಎತ್ತ…

# ಯ್ಯಾರೀ ಶ್ರೀಹರ್ಷ ಸಾಲಿಮಠರೂ ಮತ್ತು ಎಲೆಮರೆಯ ಕಾಯಿಯಂತೆ ಇದ್ದ ಶ್ರೀಹರ್ಷ ಸಾಲಿಮಠರನ್ನು ಪರಿಚಯಿಸಿದ ಈ ನಮ್ಮ ಸಾಹಿತಿ ಹನುಮಂತ ಹಾಲಿಗೇರಿಯವರೂ..!–

Contact Your\'s Advertisement; 9902492681

ಇತ್ತೀಚೆಗೆ ನಮ್ಮ ಸಾಹಿತಿ ಹನುಮಂತ ಹಾಲಿಗೇರಿಯವರು ಪ್ರೀತಿಯಿಂದ ಕಳಸಿದ ಒಂದು ಪುಸ್ತಕಗಳ ಪಟ್ಟಿ‌ ಅಂಚೆಗೆ ಬಂದಿತು.‌ ಆ ಪಟ್ಟಿಯಲ್ಲಿ ಎರಡು ಪುಸ್ತಕಗಳು ಇದ್ದವು. ಒಂದು ಶೀಹರ್ಷ ಸಾಲಿಮಠರ ‘ಉದಕ ಉರಿದು’ ಮತ್ತು ಹನುಮಂತ ಹಾಲಿಗೇರಿಯವರ ‘ಆಲೈದೇವ್ರು’ ಮತ್ತು ಮತ್ತಿತರ ನಾಟಕಗಳು. ಆ ಪೈಕಿ ಈಗ ನಾನು ಮೊದಲು ಶ್ರೀಹರ್ಷ ಸಾಲಿಮಠರ ಪುಸ್ತಕ ‘ಉದಕ ಉರಿದು’ ಎಂಬುದರ ಬಗೆಗೆ ಬರೆಯಬೇಕಾಗಿತ್ತು. ಆದರೆ ಮೊದಲು ಈ ನಮ್ಮ ಶ್ರೀಹರ್ಷ ಸಾಲಿಮಠರು ಯಾರು ಎಂಬುದರ ಕುರಿತು, ಅವರನ್ನು ಪರಿಚಯಿಸುವ ಲೇಖನ ಮಾಡುತ್ತೇನೆ, ಮೊದಲು. ಆನಂತರ ಈ ಹರ್ಷ ಸಾಲಿಮಠರ ಈ ‘ಉದಕ ಉರಿದು’ ಪುಸ್ತಕದ ಕುರಿತು ಒಂದು ಪರಿಚಯಾತ್ಮಕ ಲೇಖನ ಮಾಡುತ್ತೇನೆ.

# ಯ್ಯಾರೀ ಶ್ರೀಹರ್ಷ ಸಾಲಿಮಠರು.?!ಈ ಶ್ರೀಹರ್ಷ ಸಾಲಿಮಠರು ಎಂಬ ಅನಿವಾಸಿ ಭಾರತೀಯ ಲೇಖಕರು. ಮೂಲತಃ ಕಥೆಗಾರರು. ಈ ಶ್ರೀಹರ್ಷ ಸಾಲಿಮಠರು ಕನ್ನಡದ ಜನಪ್ರಿಯ ಕಥೆಗಾರರಲೊಬ್ಬರು ಎಂಬುದೇ ನಮಗೀಗ ಸೋಜಿಗವಾಗಿದ ವಿಷಯವಾಗಿದೆ. ಏಕೆಂದರೆ ಈ ಲೇಖಕ ಶ್ರೀಹರ್ಷ ಸಾಲಿಮಠರು, ತಾವೊಬ್ಬ ಲೇಖಕರು ಎಂಬ ಗುರುತರವಾದ ಜವಾಬ್ದಾರಿಯನ್ನು ಹೊರಲು ಬಹು ಸಂಕೋಚ ಪಟ್ಟವರು.

ಇಂತಹ ಲೇಖಕ ಶ್ರೀಹರ್ಷ ಸಾಲಿಮಠರನ್ನು ಹುರುದುಮ್ಮಿಸಿ, ನೀವೊಬ್ಬ ಲೇಖಕರು ಅಲ್ಲದೇ ಕಥೆಗಾರರು ಎಂಬುದನ್ನು ಗುರುತಿಸಿ ಮತ್ತು ಸಾಹಿತ್ಯ ರಚನೆಗೆ ಹಚ್ವಿದವರು ಮತ್ತು ಒಂದು ಪುಸ್ತಕ ರೂಪದಲ್ಲಿ ಈ ‘ಉದಕ ಉರಿದು’ ಎಂಬ ಕಥೆಗಳ ಸಂಗ್ರಹ ತರಲು ಹಚ್ಚಿದ್ದು ನಮ್ಮ ನಿಮಗೆಲ್ಲರಿಗೂ ಗೊತ್ತಿರುವಂತೆ ಸಾಹಿತಿ ಹನುಮಂತ ಹಾಲಿಗೇರಿಯವರು.

ಏಕೆಂದರೆ ಅಲ್ಲಿಯ ವರಗೆ ಶ್ರೀಹರ್ಷ ಸಾಲಿಮಠ ಈ ‘ಉದಕ ಉರಿದು’ ಎಂಬ ಪುಸ್ತಕವನ್ನು ಹೊರತಂದಿರಲೇ ಇಲ್ಲ. ತಮ್ಮೊಳಗೆ ಒಬ್ಬ ಸಾಹಿತಿ ಇದ್ದಾನೆ ಎಂದು ಹೇಳಿಕೊಳ್ಳಲೂ ಸಂಕೋಚ ಪಟ್ಟ ಮತ್ತು ಪಡುತ್ತಿದ್ದ ಶ್ರೀಹರ್ಷ ಸಾಲಿಮಠರನ್ನು ಗುರುತಿಸಿ ನೀನೂ ಒಬ್ಬ ಸಾಹಿತಿ ಎನ್ನುಸುವಷ್ಟರ ಮಟ್ಟಿಗೆ ಈ ಶ್ರೀಹರ್ಷ ಸಾಲಿಮಠರನ್ನು ಪುಸಲಾಯಿಸಿ ಇಂತಹದೊಂದು ಅಂದರೆ ‘ಉದಕ ಉರಿದು’ ಎಂಬ ಸಾಹಿತ್ಯ ರಚನೆಗೆ ಆ ಮತ್ತು ಪುಸ್ತಕ ಹೊರಬರಲು ಕಾರಣರಾದವರೊಬ್ಬರಲ್ಲಿ ಈ ನಮ್ಮ ಸಾಹಿತಿ ಹನುಮಂತ ಹಾಲಿಗೇರಿಯೂ ಎಂಬುದಂತು ನಿಜವಾದ ಸತ್ಯವೂ ಆಗಿದೆ. ಈ ಸಾಹಿತ್ಯದ ಗೀಳಿಗೆಗೆ ಹಚ್ಚಿದವರು ಇದೇ ಸಾಹಿತಿ ಹನುಮಂತ ಹಾಲಿಗೇರಿಯವರು ಎಂಬುದೂ ನನಗಂತೂ ಸ್ಪಷ್ಟವಾಗಿದೆ.

ಇಂತಹ ಈ ಶ್ರೀಹರ್ಷ ಸಾಲಿಮಠ ಬಾಲ್ಯ ಕಳೆದದ್ದು ದಾವಣಗೆರೆಯಲ್ಲಿ. ಅಲ್ಲದೇ ಅಲ್ಲಿಯೇ ಇಂಜಿನಿಯರಿಂಗ್ ಪದವಿಯನ್ನು ಮುಗಿಸಿದ್ದು. ಮೈಸೂರಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿದ್ದು. ಸ್ನಾತಕೋತ್ತರ ಪದವಿಯನ್ನು ಮುಗಿಸಿದ ಮೇಲೆ ಕೆಲಸದ ನಿಮಿತ್ತವಾಗಿ ಎರಡು ವರ್ಷಗಳ ವರೆಗೂ ಚೆನೈನಲ್ಲಿ ಇದ್ದರು ಸಾಹಿತಿ ಶ್ರೀಹರ್ಷ ಸಾಲಿಮಠರು.

ಅಲ್ಲಿಂದ ಮುಂದೆ ಟ್ರಿವೆಂಡ್ರಮ್ ನಲ್ಲಿ ಕೆಲಸಕ್ಕೆ ಸೇರಿದರು ಸಾಹಿತಿ ಶ್ರೀಹರ್ಷ ಸಾಲಿಮಠರು. ಅದಕ್ಕೂ ಮೊದಲು ಬೆಂಗಳೂರಿನಲ್ಲಿ ಹತ್ತು ವರ್ಷಗಳ ಕಾಲ ಇದ್ದರು ಮತ್ತು ಅಲ್ಲಿಯೇ ಕೆಲಸವನ್ನೂ ಮಾಡಿದರು. ಈಗ ಸದ್ಯಕ್ಕೆ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ವೃತ್ತಿ ಮತ್ತು ಜೀವನ ನಡೆಸುತ್ತಿದ್ದತ್ತಿದ್ದಾರೆ ಸಾಹಿತಿ ಶ್ರೀಹರ್ಷ ಸಾಲಿಮಠರು.

ಇಂತಹ ಈ ಶ್ರೀಹರ್ಷ ಸಾಲಿಮಠರು ಕನ್ನಡದ ಅನೇಕಾನೇಕ ತಾಂತ್ರಿಕ ಸಾಧನಗಳಿಗೆ ಕೊಡುಗೆಯನ್ನು ನೀಡಿದ್ದಾರೆ. ಇವರಿಗೆ ಬಾಲ್ಯದಿಂದಲೂ ಓದು ಮತ್ತು ಬರಹದ ಕಡೆಗೆ ಆಸಕ್ತಿ ಇದ್ದದ್ದು ಈ ಶ್ರೀಹರ್ಷ ಸಾಲಿಮಠರನ್ನು ಒಬ್ಬ ಬರಹಗಾರರನ್ನಾಗಿಸಿತು. ಇವರ ವೈಯಕ್ತಿಕ ಲೈಬ್ರರಿಯಲ್ಲಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಸಾಕಿದ್ದಾರೆ ಎಂಬುದೇ ಒಂದು ವಿಶೇಷವಾಗಿದೆ.

ಇಂದಿನ ದಿನಗಳಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿದವರು ಇಷ್ಟೊಂದು ಸಾಹಿತ್ಯಕ ಪುಸ ಸಾಕಿರುವುದಿಲ್ಲ. ಆದರೆ ಈ ಶ್ರೀಹರ್ಷ ಸಾಲಿಮಠರಿಗೆ ಮೊದಲಿಂದಲೂ ಸಾಹಿತ್ಯದ ಗೀಳು ಇತ್ತೆಂಬುದಕ್ಕೆ ಇವರ ಸಾಹಿತ್ಯಿ ಆಚಾರ ವಿಚಾರ ಮತ್ತು ಆ ಸಾಹಿತ್ಯದ ವಿನಿಮಯದ ರೂಢಿ ಇತ್ತೆಂಬುದಕ್ಕೆ ಸಾಕ್ಷಿ ಆಗಿದೆ.

ಮುಖ್ಯವಾಗಿ ಈ ಶ್ರೀಹರ್ಷ ಸಾಲಿಮಠರು ಬರೆದ ಅನೇಕಾನೇಕ ಬರಹಗಳು ನಾಡಿನ ನಾನಾ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರು ‘ಕನ್ನಡ ಪ್ರಭಾ’ವದಲ್ಲಿ ಒಂದು ವಿಜ್ಞಾನ ಅಂಕಣವನ್ನು ಬರೆದವರು. ನೂರಕ್ಕೂ ಹೆಚ್ಚು ವಿಜ್ಞಾನ ಲೇಖನಗಳನ್ನು ಬರೆದವರು ಶ್ರೀಹರ್ಷ ಸಾಲಿಮಠರು. ಅಲ್ಲದೇ ಸಾಹಿತ್ಯದ ಬರಹಗಳ ‘ಕೆಂಡಸಂಪಿಗೆ’ಯಲ್ಲಿ ಒಂದು ಅಂಕಣವನ್ನೂ ಬರೆದವರು ಈ ಶ್ರೀಹರ್ಷ ಸಾಲಿಮಠರು.

ಇವರ ತಲೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಕೊರೆಯುತ್ತಿದ್ದ ಅನೇಕಾನೇಕ ಕಥೆಗಳಲ್ಲಿ ಒಂದಿಷ್ಟು ಪ್ರಮುಖವಾದವುಗಳನ್ನು ನಮ್ಮ ಸಾಹಿತಿ ಹನುಮಂತ ಹಾಲಿಗೇರಿಯವರ ಮತ್ತು ಕೆಲ ಗೆಳೆಯರ ಒತ್ತಾಯಕ್ಕೆ ಇಳಿದು, ಆ ಕಥೆಗಳೆಲ್ಲಾ ಒಂದು ಪುಸ್ತಕದ ರೂಪಕ್ಕಿಳಿದಿವೆ ಈಗ. ಇದುವೇ ಶ್ರೀಹರ್ಷ ಸಾಲಿಮಠರ ಕಥೆಗಳ ಮೊದಲ ಪುಸ್ತಕ ಪ್ರಯತ್ನವೂ ಆಗಿದೆ.

ಆ ಕಥೆಗಳ ಸಂಗ್ರಹವೇ ‘ಉದಕ ಉರಿದು’ ಎಂಬ ಕಥೆಗಳ ಸಂಕಲನವಾಗಿದೆ ಕೂಡ. ಆ ಕಥೆಗಳ ಸಂಕಲನವನ್ನು ಹೊರತಂದವರು ಅದೇ ಸಾಹಿತಿ ಹನುಮಂತ ಹಾಲಿಗೇರಿಯವರು..! ಇಲ್ಲಿಯ ವರೆಗೆ ಸುಮಾರು ಅಧಿಕೃತವಾಗಿ ಶ್ರೀಹರ್ಷ ಸಾಲಿಮಠರು ಬೇರೆ ಬೇರೆ ಆನ್ ಲೈನ್ ಪತ್ರಿಕೆಗಳಲ್ಲಿ ಬರೆದದ್ದು ಸಾವಿರ ಪುಟಗಳಷ್ಟು ಆಗಬಹುದು. ಇವುಗಳಲ್ಲಿ ಸೃಜನಶೀಲ ಬರೆವಣಿಗೆ ಅಂತ ಬರೆದದ್ದು ತುಸು ಕಮ್ಮಿಯೇ ಅನ್ನುತ್ತಾರೆ ಸಾಹಿತಿ ಶ್ರೀಹರ್ಷ ಸಾಲಿಮಠರು.

ಆದರೆ ನಮ್ಮ ಸಾಹಿತಿ ಹನುಮಂತ ಹಾಲಿಗೇರಿಯವರು ಹೇಳುತ್ತಾರೆ ಈ ಶ್ರೀಹರ್ಷ ಸಾಲಿಮಠರು ಕನ್ನಡದ ಒಬ್ಬ ಸೃಜನಶೀಲ ಬರಹಗಾರರು ಎಂದು. ಅದಕ್ಕಾಗಿಯೇ ಈ ಶ್ರೀಹರ್ಷ ಸಾಲಿಮಠರ ಈ ಒಂದು ಕಥೆಗಳ ಸಂಕಲನವನ್ನು ಹೊರತರುತ್ತಿದ್ದೇವೆ ಎಂದು.

ಹೀಗೆಯೇ ಹೇಳುವ ಈ ನಮ್ಮ ಸಾಹಿತಿ ಹನುಮಂತ ಹಾಲಿಗೇರಿಯವರು ಏನೇಯಾಗಲಿ ಕನ್ನಡಕ್ಕೊಬ್ಬ ನವನವೀನ ಸಾಹಿತಿಯನ್ನಂತೂ ತರುತ್ತಿರುವುದು ಸ್ವಾಗತಾರ್ಹವಾಗಿದೆ.

ಮುಂದೆ ಈ ಕತೆಗಳ ಸಂಕಲನದ ಕುರಿತು ಒಂದು ವಿಮರ್ಶೆಯನ್ನು ಮಾಡೋಣ. ಈಗ ಬರೀ ಈ ಶ್ರೀಹರ್ಷ ಸಾಲಿಮಠರು ಯಾರು ಎಂಬುದಕ್ಕೆ ಪುರಾವೆಗೆ ಈ ಲೇಖನವೂ..! ಅಲ್ಲದೇ ಈಗ ಈ ಶ್ರೀಹರ್ಷ ಸಾಲಿಮಠರ ‘ಉದಕ ಉರಿದು’ ಕತಾ ಸಂಕಲನದ ಬಗೆಗೆ ನೋಡೋಣ ಈಗ…

‘ಉದಕ ಉರಿದು’ ಕತಾ ಸಂಕಲನದ ಪರಾಮರ್ಶೆ ಹೀಗಿದೆ ನೋಡಿ: ಶ್ರೀಹರ್ಷ ಸಾಲಿಮಠ ಅವರ ಕತಾ ಸಂಕಲನವಾದ ‘ಉದಕ ಉರಿದು’ ಕತಾ ಸಂಕಲನದ ಕತೆಗಳಲ್ಲಿ ಕತೆಯನ್ನು ಕತೆಗಾರ ನಡೆಸುತ್ತಿದ್ದಾನೆ ಎನ್ನಿಸುವ ಭಾವ ಹುಟ್ಟಿಸುತ್ತದೆ.

ಆ ಕತೆಗಳು ತನ್ನಿಂದ ತಾನೇ ನಡೆದು ಹೋಗುತ್ತವೆ.

ಕತೆಯೊಳಗಿರುವ ಪ್ರಸಂಗ ಓದುಗನ ಮುಂದೆ ಈಗ ನಡೆಯುತ್ತಿರುವಂತೆ ಪ್ರಸ್ತುತಗೊಳ್ಳುತ್ತವೆ. ಈ ಬಗೆಯ ಕತೆಗಳನ್ನು ಬರೆಯುವಲ್ಲಿ ಶ್ರೀಹರ್ಷ ಸಾಲಿಮಠರಿಗೊಂದು ಬಿಗಿಯಾದ ಹಿಡಿತವಿದೆ ಎಂದು ನನಗಷ್ಟೇ ಅಲ್ಲ, ಎಲ್ಲಾ ಓದುಗರಿಗೂ ಅನ್ನಿಸಿರದೇ ಇರುವುದು.

ಈ ಕತೆಗಳಲ್ಲಿ ಶ್ರೀಹರ್ಷ ಸಾಲಿಮಠರ, ಅವರೊಳಗಿನ ಚಿಂತಕ ಕತೆಗಾರನಿಗೆ ಜಾಗ ಬಿಟ್ಟು ಕೊಟ್ಟು ಹಿಂದಿನ ಸಾಲಿನಲ್ಲಿ ಕೂರುತ್ತಾನೆ.

ಹಾಗಾಗಿಯೇ ಈ ಕತೆಯ ಓದಿನ ಸೊಗಸಾದ ಅನುಭವವನ್ನು ಅದರ ಮೂಲಸತ್ವದ ಸಮೇತವಾಗಿ ಪಡೆಯಲು ಸಾಧ್ಯವಾಗುತ್ತದೆ.

`ಗಂಧಕ್ಕೊಂದು ಬರೆ’, `ಸದ್ಗತಿ’ ಹಾಗೂ `ಉಡಾಳ ಬಸ್ಯಾನ ಖೂನಿ’ ಕತೆಗಳು ಶ್ರೀಹರ್ಷ ಸಾಲಿಮಠರಲ್ಲಿ ಇರುವ ಉತ್ತಮ ಕಥನ ಕೌಶಲದ ನಿದರ್ಶನಗಳಾಗಿವೆ.

`ಉಡಾಳ ಬಸ್ಯಾನ ಖೂನಿ’ ಮತ್ತು `ಸದ್ಗತಿ’ ಕತೆಗಳಲ್ಲಿ ಕತೆಗಾರನ ಸತ್ವ ಬಹಳ ತಾಜಾ ಆಗಿ ಅನಾವರಣಗೊಂಡಿದೆ. ಕತೆಯ ಅಂತ್ಯದಲ್ಲಿ `ಗಂಧಕ್ಕೊಂದು ಬರೆ’ಯ ಮೇಷ್ಟ್ರು ಶಾಮಣ್ಣನಿಗೆ ಒದಗುವ ದುರಂತ ವಿಷಾದ ಹುಟ್ಟಿಸುತ್ತದೆ.

ವ್ಯವಸ್ಥೆ ಮಹಾಪರಾಧಿಗಳನ್ನು ರಕ್ಷಿಸಲು ನಿರಪರಾಧಿಯನ್ನು ಬಲಿ ಹೊಡೆಯುವ ವಿಧಾನ ಇಲ್ಲಿ ಸ್ಪಷ್ಟವಾಗಿ ಕಥನಗೊಂಡಿದೆ. ಸಜ್ಜನಿಕೆಯ ಅಪರಾವತಾರ ಶಾಮಣ್ಣ ವ್ಯವಸ್ಥೆಯ ಕುತಂತ್ರಕ್ಕೆ ಬಲಿಯಾಗಿ ಜೈಲುಪಾಲಾಗುವ ವಾಸ್ತವದೊಂದಿಗೆ ಮುಗಿಯುವ ಈ ಕತೆ ತನ್ನ ಅಂತ್ಯದಲ್ಲಿ ಸ್ವಲ್ಪ ಅವಸರದಿಂದ ಕೊನೆಗೊಂಡಿದೆ.

ದುರುಳ ವ್ಯವಸ್ಥೆಯ ವಿಪರ್ಯಾಸವನ್ನು ಬಿಚ್ಚಿಡಬೇಕು ಎನ್ನುವ ಕತೆಗಾರನ ತೀರ್ಮಾನವೇ ಈ ಅಂತ್ಯದ ಅವಸರಕ್ಕೆ ಕಾರಣವಾಗಿದೆ. ಅಂತ್ಯದಲ್ಲಿಯ ಅವಸರವನ್ನು ಹೊರತುಪಡಿಸಿದರೆ ಕತೆಯ ಒಟ್ಟಾರೆ ಹೂರಣ ಅನನ್ಯವಾಗಿದೆ. ಅದು ಗ್ರಾಮೀಣ ಭಾಷೆಯ ಬಳಕೆ, ಸನ್ನಿವೇಶಗಳ ಚಿತ್ರಣವೇ ಆಗಿದೆ, ಬೇರೆ ಬೇರೆ ಪಾತ್ರಧಾರಿಗಳ ತಾಕಲಾಟ, ಇವೆಲ್ಲಾ ಸೇರಿಯೇ ಇದನ್ನು ಒಂದು ಒಳ್ಳೆಯ ಕತೆಯನ್ನಾಗಿಸಿವೆ.

`ಉಡಾಳ ಬಸ್ಯಾನ ಖೂನಿ’ ಮತ್ತು `ಸದ್ಗತಿ’ ಕತೆಗಳಂತೂ ಗ್ರಾಮೀಣ ಜೀವನದ ಒಂದು ವಿಶಿಷ್ಟ ಪರಿಸರದ ಅನನ್ಯ ಕತನಗಳಾಗಿವೆ. ಇವು ಒಂದು ಜೀವನದ ವಿಶಿಷ್ಟ ಕೋನಗಳು. ಗ್ರಾಮ ಜೀವನದಲ್ಲಿ ಕಂಡುಬರುವ ಇಂತಹ ಕೋನಗಳನ್ನು ಆಯ್ಕೆ ಮಾಡಿಕೊಂಡು ಅವುಗಳನ್ನು ಚಿತ್ರಿಸಿರುವ ಪರಿ ಶ್ರೀಹರ್ಷ ಸಾಲಿಮಠರಿಗೆ ಇರುವ ಬರವಣಿಗೆಯ ಹದಕ್ಕೆ ಕನ್ನಡಿ ಹಿಡಿಯುತ್ತಿದೆ.

ಉಡಾಳ ಬಸ್ಯಾ ಅವನ ಜೀವನದಲ್ಲಿ ಪ್ರವೇಶಿಸಿದ ಚಂದ್ರಿ ಎಂಬ ಹುಡುಗಿ, ಇವೆರಡೂ ಪಾತ್ರಗಳೂ ಓದುಗನನ್ನು ಕಾಡುತ್ತವೆ. ಉಡಾಳ ಬಸ್ಯಾ ತನ್ನ ಬಾಲ್ಯದ ಕಪಿಚೇಷ್ಟೆಗೆ ಹೆಸರಾಗಿದ್ದವನು. ಊರು ಬಿಟ್ಟು ಹೋಗಿ, ಮರಳಿ ಬರುವ ಹೊತ್ತಿಗೆ ಸಭ್ಯನಾಗಿದ್ದವನು. ಸಭ್ಯನಾಗಿರುವ ಬಸ್ಯಾನನ್ನು ತನ್ನ ಹಳೆಯ ಅವಮಾನದ ಸಾಲ ತೀರಿಸುವುದಕ್ಕಾಗಿ ಚಂದ್ರಿ ಚಿತ್ ಮಾಡುವ ವಿಧಾನ ಅಸದೃಶವಾಗಿದೆ.

ಅವನನ್ನು ಕಾಮಕ್ಕೆ ಕರೆದು `ಆಟಿಕೆ ಸಾಮಾನ ಜೊತೆಗೆ ಒಂದು ಸಾರಿ ಆಡಿ ಬಿಸಾಡೋ ಹಂಗ ಬಿಸಾಡು’ವ ಮೂಲಕ ಬಸ್ಯಾನ ಗಂಡಸುತನವನ್ನೇ ಹೀನ ಮಾಡುತ್ತಾಳೆ ಚಂದ್ರಿ.

ಆಗ ಸೋತ ಬಸ್ಯಾ ಮತ್ತೇ ಗೆಲ್ಲುವುದೇ ಇಲ್ಲ. ಕೊಲೆಯಾಗಿ ಹೋಗುತ್ತಾನೆ. ಬಸ್ಯಾ ಮತ್ತು ಚಂದ್ರಿ ಶ್ರೀಹರ್ಷ ಸಾಲಿಮಠರ ಲೇಖನಿಯಲ್ಲಿ ಅತ್ಯಂತ ಅಸಲಿ ಪಾತ್ರಗಳಾಗಿ ರೂಪುಗೊಂಡಿವೆ. ಕತೆ ಸರಾಗವಾಗಿ ಸಾಗುತ್ತಾ ಒಳಗೊಳಗೇ ಹಲವು ಸುರುಳಿಗಳ ಅರ್ಥವನ್ನು ಧ್ವನಿಸುತ್ತವೆ ಎಂದು ನನಗೆ ಅನ್ನಿಸಿತು.

ಒಂದು ಸಾದಾ ಗ್ರಾಮದ ಸೀದಾ ಹೆಣ್ಣಾದ ರ್ಯಾವಮ್ಮ `ಸದ್ಗತಿ’ ಕತೆಯಲ್ಲಿ ಗಟ್ಟಿ ಪಾತ್ರವಾಗಿ ಚಿತ್ರಿತಳಾಗಿದ್ದಾಳೆ. ಅವಳ ಗಂಡ ಉದ್ದರಿ ಬರೆಸಿ ಕುಡಿದ ಚಹಾ ಮತ್ತು ಚೂಡಾದ ಸಲುವಾಗಿ ಗಂಡನ ಪಾಲಿಗೆ ಬರಬೇಕಾದ ಜಮೀನು ಕಳಕೊಂಡ ರ್ಯಾವಮ್ಮ ಅಸಲಿ ಜವಾರಿ ಕತೆಯಾಗಿ ನಮ್ಮೆದುರು ನಿಲ್ಲುಳೆ. ಇಲ್ಲಿನ ಘಟನಾವಳಿಗಳಲ್ಲಿ ಕೃತಕತೆ ಇಲ್ಲ.ಕತೆಗಾರ ಬೇಕೆಂದೇ ತಂದಿರುವ ನಾಟಕೀಯತೆಯೂ ಇಲ್ಲ. ಇವಳ ಶಾಪದ ಕಾರಣದಿಂದಾಗಿಯೇ ಬಸೆಣ್ಣೆಪ್ಪನಿಗೆ ಸಾವಿನಲ್ಲಿ ಸರಿಯಾದ ಸಂಸ್ಕಾರ ಸಿಗಲಿಲ್ಲ ಎಂದು ತರ್ಕಿಸಬಹುದಾದಷ್ಟು ಶಕ್ತವಾಗಿ ಕತೆ ನಡೆಯುತ್ತದೆ.

ರ್ಯಾವಮ್ಮ ಮತ್ತು ಅವಳನ್ನು ಮದುವೆಯಾದವನ ನಡುವಿನ ದಾಂಪತ್ಯದ ವಿಧಾನವೂ ಕೂಡ ಗ್ರಾಮ ಜೀವನದ ಒಂದು ರೀತಿಯಾಗಿದ್ದು, ಅದನ್ನು ಓದುಗರಿಗೆ ಕಟ್ಟಿ ಕೊಡುವ ವಿಧಾನದಿಂದ ಶ್ರೀಹರ್ಷ ಸಾಲಿಮಠರು ನಮ್ಮ ಮೆಚ್ಚುಗೆಗೆ ಕಾರಣರಾಗುತ್ತಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here