ಆಳಂದ: ರೈತಾಪಿ ವರ್ಗದ ಜನ ಆಧುನಿಕ ಪದ್ಧತಿಯಂತೆ ಸಂಶೋಧನೆ ಆಧಾರಿತ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಸಂಶೋಧಾನಾ ಆಧಾರಿತ ತಳಿ ಬೆಳೆ ಬೆಳೆಯಲು ಮುಂದಾಗಬೇಕು ಎಂದು ಆಳಂದನ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಶಂಕರಗೌಡ ಸಲಹೆ ನೀಡಿದರು.
ಸೋಮವಾರ ತಾಲೂಕಿನ ಗಡಿಗ್ರಾಮ ಖಜೂರಿಯ ಪ್ರಗತಿಪರ ರೈತರಾದ ವೈಜನಾಥ ವಾಡೆ ಹೊಲದಲ್ಲಿ ಹಮ್ಮಿಕೊಂಡಿದ್ದ ಈರುಳ್ಳಿ ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಆಳಂದ ತಾಲೂಕಿನಲ್ಲಿಯೇ ಖಜೂರಿ ಹೊಬಳಿಯಲ್ಲಿಯೇ ಅತೀ ಹೆಚ್ಚು ಈರುಳ್ಳಿ ಬೆಳೆಯಲಾಗುತ್ತದೆ ಅಂದಾಜು ೧೨೦೦ ಹೆಕ್ಟರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿದೆ ಆದರೆ ಅತಿಯಾದ ಮಳೆಯಿಂದ ಕೆಲವು ಕಡೆ ಹಾಳಾಗಿದೆ ಆದರೂ ಸಂಶೋಧನಾ ಆಧಾರಿತ ತಳಿ ಹಾಕಿರುವ ರೈತರು ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದಾರೆ. ಈರುಳ್ಳಿ ತೋಟಗಾರಿಕೆ ಬೆಳೆಯಾಗಿರುವುದರಿಂದ ನೀರಿನ ಲಭ್ಯತೆ ನೋಡಿಕೊಂಡು ವರ್ಷದಲ್ಲಿ ಮೂರು ಬಾರಿ ಬೆಳೆಯಬಹುದು ಎಂದರು.
ಹೆಚ್ಚು ಮಳೆಯಾಗಿದ್ದರೂ ಕಳಸ್ ಸಿಡ್ಸ್ ಕಂಪನಿಯ ಹೈಬ್ರಿಡ್ ಈರುಳ್ಳಿ ತಳಿಯಾದ ಸೂಪರ್ ಫ್ಲೇರ್ ಉತ್ತಮವಾಗಿ ಬಂದಿದೆ ಇದರಿಂದ ರೈತರು ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದಾರೆ ಎಂದು ಹೇಳಿದರು. ಕಳಸ್ ಸಿಡ್ಸ ಕಂಪನಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಂಪನಿಯ ಇತರೆ ಉತ್ಪನ್ನಗಳಾದ ಕಲ್ಲಂಗಡಿ, ಟೋಮ್ಯಾಟೋ, ಹಿರೇಕಾಯಿ ಮತ್ತು ಇತರೆ ತೋಟಗಾರಿಕೆ ಬೆಳೆಗಳ ಬಗ್ಗೆ ಮಾಹಿತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ಮಂಜುನಾಥ ಬಂಗರಗೆ, ಡಿಸಿಸಿ ಬ್ಯಾಂಕ್ ನಿರ್ದೇಶಕ ಅಶೋಕ ಸಾವಳೇಶ್ವರ, ಮುಖಂಡರಾದ ಶಿವಪ್ಪ ವಾರಿಕ, ಭೀಮರಾವ ಢಗೆ, ಭೀಮರಾವ ಕಂದಗೂಳೆ, ಸೇರಿದಂತೆ ವಿವಿಧ ಕಂಪನಿಗಳ ವಿತರಕರಾದ ಪ್ರಶಾಂತ ಕುಲಕರ್ಣಿ, ಮಹೇಶ ಏಕಬೋಟೆ, ನಾಗರಾಜ ಶೇಗಜಿ, ಶೇಖರ ಪಾಟೀಲ, ರಾಜಶೇಖರ ಪಾಟೀಲ, ಚಂದ್ರಶೇಖರ ಪಾಟೀಲ, ಬಾಬುರಾವ ಚಂಗಳೆ, ಪ್ರಕಾಶ ಗುಂಜೂಟೆ, ಸುನೀಲ ಚಂಗಳೆ, ಕಂಪನಿಯ ಪ್ರತಿನಿಧಿಗಳಾದ ಸಂಗಮೇಶ ಗೋಗಿ, ಸುನೀಲ ಮುನಿಗೇರಿ, ರೇವಣಸಿದ್ದ ದಬಾಡೆ, ಸುನೀಲ ಶೇಗಜಿ ಹಾಗೂ ಆಳಂಗಾ, ತಡೋಳಾ, ಸಾಲೇಗಾಂವ, ಕಿಣ್ಣಿಸುಲ್ತಾನ, ತೇಲಾಕುಣಿ, ಮೋಘಾ ಬಿ, ಮೋಘಾ ಕೆ ಸೇರಿದಂತೆ ಹತ್ತಾರು ಹಳ್ಳಿಯ ಪ್ರಗತಿಪರ ರೈತರು ಭಾಗವಹಿಸಿದ್ದರು.