ಸುರಪುರ: ಸನಾತನ ಸಂಸ್ಕೃತಿಯು ಇಂದು ನಶಿಸುವ ಅಂಚಿಗೆ ತಲುಪಿದೆ ನಮ್ಮ ದೈನಂದಿನ ಕೆಲಸಗಳಲ್ಲಿ ಬಿದ್ದು ನಮ್ಮ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ನಾವೆ ಹಾಳುಮಾಡುತ್ತಿದ್ದೇವೆ ಎಂದು ಯಾದಗಿರ ಜಿಲ್ಲಾ ಬ್ರಾಹ್ಮಣ ಸಂಘದ ಗೌರವಾಧ್ಯಕ್ಷ ವಾಮನರಾವ ದೇಶಪಾಂಡೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ನಗರದ ರಾಮಮಂದಿರದಲ್ಲಿ ಮಂಗಳವಾರ ವ್ಯಾಸ ಪುರ್ಣಿಮ ನಿಮಿತ್ಯ ಶ್ರೀ ಜಗದ್ಗುರು ಶಂಕರ ಸೇವಾಸಮಿತಿ ಹಾಗೂ ಯಾದಗಿರಜಿಲ್ಲಾ ಬ್ರಾಹ್ಮಣ ಸಂಘದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ತಾಯಿಯೆ ಮೂದಲು ಗುರು ಮನೆಯ ಮೂದಲ ಪಾಠಶಾಲೆ ಎಂಬಂತೆ ಹಿಂದೆ ನಮ್ಮ ಮನೆಯಲ್ಲಿ ಮಕ್ಕಳಿಗೆ ತಾಯಿ ಶ್ಲೊಕ ಮತ್ತು ಪಾಠವನ್ನು ಹೇಳಿಕೊಡುತ್ತಿದ್ದರು ಆದರೆ ಈಗಿನ ತಾಯಂದಿರು ಲೌಕಿಕ ಜಗತ್ತಿನ ಹೊಂಗಿನಲ್ಲಿ ಬಿದ್ದು ಅದನ್ನು ಮರೆತು ಬಿಟ್ಟಿದ್ದಾರೆ ಕೆಲ ಜನರಂತು ತಮ್ಮ ಮಕ್ಕಳನ್ನು ನೋಡಿಕೊಳ್ಳಲು ಆಗದೆ ಆಯಾಗಳನ್ನು ನೇಮಿಸುತ್ತಾರೆ ಹೀಗಿರುವಾಗ ಮಕ್ಕಳು ತಂದೆ ತಾಯಿರನ್ನು ವೃದ್ಧಾವಸ್ಥೆಯಲ್ಲಿ ಆರೈಕೆಮಾಡದಿರುವುದರಿಂದನೆ ಇಂದು ವೃದ್ಧಾಶ್ರಮಗಳು ಹೆಚ್ಚು ಹೆಚ್ಚಾಗಿ ತೆರೆಯುತ್ತಿವೆ ಇದು ನಮ್ಮ ಸಂಸ್ಕೃತಿಯಲ್ಲಾ ಹೀಗಾಗಲು ನಾವು ಬಿಡಬಾರದು ಎಂದು ಹೇಳಿದರು.
ವೇ.ಮೂ.ಭೀಮಸೇನಾಚಾರ ಉಪನ್ಯಾಸನೀಡಿ ಮಾತನಾಡಿ ಈ ವ್ಯಾಸ ಪೊರ್ಣಿಮೆಗೆ ಮಹತ್ವಾದ್ದಾಗಿದೆ ನಮ್ಮ ಬದುಕಿಗೆ ದಾರಿ ತೋರಿಸಿಕೊಟ್ಟು ಗುರುಗಳಿಗಳನ್ನು ಸರಿಸಿ ಅವರಿಗೆ ವಂದನೆ ಅರ್ಪಸುವುದು ನಮ್ಮೆಲ್ಲರ ಕರ್ತವ್ಯ ಈ ಹುಣ್ಣಿಮೆಯನ್ನು ಗುರುಪೋರ್ಣಿಮೆಯನ್ನು ನಮ್ಮ ದೇಶದಲ್ಲಿ ಮಾತ್ರವಲ್ಲ ವಿದೇಶಗಳಲ್ಲಿಯೊ ಆಚರಿಸುತ್ತಾರೆ. ಹೀಗಿರುವಾಗ ವಿಶ್ವಕ್ಕೆ ಗುರುವಾಗಿರುವ ನಮ್ಮ ಭಾರತದೇಶದಲ್ಲಿ ನಾವೆಲ್ಲರು ನಮ್ಮ ಸಂಸ್ಕೃತಿಯನ್ನು ಬಿಟ್ಟು ಪಾಶ್ಚಿಮಾತ್ಯ ಸಂಸ್ಕೃತಿಗೆ ಮೊರೆಹೋಗಿರುವುದ ನೊವಿನ ಸಂಗತಿಯಾಗಿದೆ ನಮ್ಮ ಸಂಸ್ಕೃತಿಯನ್ನು ನಾವೆ ಉಳಿಸಿಕೊಳ್ಳದಿದ್ದರೆ ಹೇಗೆ ಆದ್ದರಿಂದ ನಮ್ಮ ಮಕ್ಕಳಿಗೆ ಇಂದಿನ ಲೌಕಿಕ ವಿದ್ಯಾಭ್ಯಸದೊಂದಿಗೆ ನಮ್ಮ ವೇದಗಳು, ಶಾಸ್ತ್ರಗಳನ್ನು ಕಲಿಸಬೇಕು ಇದರಿಂದ ನಮ್ಮ ಸಂಸ್ಕೃತಿ ಉಳಿಯುತ್ತದೆ ಎಂದು ಹೇಳಿದರು.
ಸುಧಾಪಂಡಿತ ಶ್ರೀರಾಮ ಪಾಲ್ಮೊರ, ಮುಖಂಡರಾದ ಕೃಷ್ಣಭಟ್ ಜೋಶಿ ಹಿಪ್ಪರಗಿ, ಧಿರೇಂದ್ರ ಕುಲ್ಕರ್ಣೀ, ವಿಜಯರಾಘವನ ಪುಣೆ ಮಾತನಾಡಿದರು ಕೇದಾರನಾಥ ಶಾಸ್ತ್ರಿ ಯಾಳಗಿಕರ್, ಗುರುರಾಜ ಪಾಲ್ಮೊರ್, ಜ್ಞಾನರಾಜ ಭಟ್ ಗಡ್ಡದ, ರಾಮಭಟ್ ರಾಜೋಶಿ, ಭೀಮಭಟ್ ಜೋಶಿ, ಯಜ್ಞೇಶ್ವರ ಭಟ್ ರಾಜೋಶಿ, ನಾಗರಾಜ ಜಹಗಿರದಾರ, ಗಣಪತಿ ಜಹಗಿರದಾರ, ಸಹಜಾನಂದ ಭಟ್ ಜೋಶಿ, ಪ್ರಶಾಂತ ಭಟ್, ಪ್ರಭಂಜನ್ ಜಹಗಿರದಾರ, ಉಮಾಶಂಕರ ಧೀಕ್ಷಿತ್ ಕನಕಗಿರಿ, ಶಂಕರ ಗಡ್ಡದ್, ರಾಜಾ ಪಿಡ್ಡನಾಯಕ ಪ್ಯಾಪ್ಲಿ, ಗುರುನಾಥ ರೆಡ್ಡಿ ಸೇರಿದಂತೆ ಇನ್ನಿತರರಿದ್ದರು ಅಪ್ಪಣ್ಣ ಕುಲ್ಕರ್ಣಿ ನಿರೂಪಿಸಿದರು ಶ್ರೀಹರಿರಾವ ಆದೋನಿ ಸ್ವಾಗತಿಸಿದರು, ರತ್ನಾಕರಭಟ್ ಜೋಶಿ ವಂದಿಸಿದರು.