ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ‘ವಿಶ್ವ ಮಾನವ ದಿನಾಚರಣೆ’

0
226

ಕಲಬುರಗಿ: ತಮ್ಮ ಸಾಹಿತ್ಯದ ಮೂಲಕ ವೈಚಾರಿಕತೆ, ನಾಡು-ನುಡಿ, ದೇಶಪ್ರೇಮ, ಭ್ರಾತೃತ್ವ, ವಿಶ್ವಮಾನವತೆ, ಪ್ರಕೃತಿ ಸೌಂದರ್ಯ, ಜೀವನ ಪ್ರೀತಿ, ಆದ್ಯಾತ್ಮೀಕತೆಯನ್ನು ಎಲ್ಲರೆದೆಯೊಳಗೂ ತುಂಬಿಸುತ್ತಾ ಕಂದಾಚಾರ, ಮೂಢತೆ, ದುರಳತೆಯನ್ನು ಸರ್ವರ ಮನಸ್ಸಿನಿಂದ ಬಡಿದೋಡಿಸುವ ಸರ್ವ ಪ್ರಯತ್ನ ಮಾಡಿದ ಶತಮಾನದ ಶ್ರೇಷ್ಠ ವ್ಯಕ್ತಿ ಜಗದ ಕವಿ-ರಾಷ್ಟ್ರಕವಿ ಕುವೆಂಪು ಅವರಾಗಿದ್ದಾರೆ ಎಂದು ಸೇಡಂ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಅಧ್ಯಕ್ಷ ಪೂಜ್ಯ ಶ್ರೀ ಸದಾಶಿವ ಮಹಾಸ್ವಾಮಿಗಳು ನುಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದ ಕನ್ನಡ ಭವನದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದಂಗವಾಗಿ ಏರ್ಪಡಿಸಿದ ‘ವಿಶ್ವ ಮಾನವ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಕುವೆಂಪು ಪಂಚಸೂತ್ರಗಳಾದ ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯತೆ, ಪೂರ್ಣ ದೃಷ್ಠಿ ಪಾಲಿಸಿದರೆ ಸಮಾಜದಲ್ಲಿ ಸಮಾನತೆ ಕಾಣಬಹುದು. ರಾಷ್ಟ್ರಕವಿ ಕುವೆಂಪು ಸಂದೇಶಗಳು ಸರ್ವಕಾಲಕ್ಕೂ ಸಲ್ಲುತ್ತವೆ. ಅವರ ಸಾಹಿತ್ಯವನ್ನು ಯುವ ಸಮುದಾಯ ಅಭ್ಯಶಿಸಬೇಕಾಗಿದೆ ಎಂದರು.

ಡಿಸಿಸಿ ಬ್ಯಾಂಕಿನ ಅಧ್ಯಕ್ಷರೂ ಆದ ಸೇಡಂ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ, ಜೇವರ್ಗಿ ಶಾಸಕ ಡಾ.ಅಜಯಸಿಂಗ್ ಧರ್ಮಸಿಂಗ್, ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಸಿದ್ರಮಪ್ಪಾ ಪಾಟೀಲ ಧಂಗಪೂರ, ಕಸಾಪ ಪದಾಧಿಗಳಾದ ಶಿವರಾಜ್ ಅಂಡಗಿ, ಡಾ.ಶರಣರಾಜ್ ಛಪ್ಪರಬಂದಿ, ಪ್ರಮುಖರಾದ ಕಲ್ಯಾಣಪ್ಪ ಪಾಟೀಲ ಮಳಖೇಡ, ಮುಡುಬಿ ಗುಂಡೇರಾವ, ಚಂದ್ರಶೇಖರ ತಳ್ಳಳ್ಳಿ, ಶರಣಬಸಪ್ಪ ಭೂಸನೂರ, ಶಕುಂತಲಾ ಪಾಟೀಲ ಜಾವಳಿ, ಕಲ್ಯಾಣಕುಮಾರ ಶೀಲವಂತ, ಮಾಲಾ ಕಣ್ಣಿ, ಮಾಲಾ ದಣ್ಣೂರ, ಶಿವಲೀಲಾ ತೆಗನೂರ, ಜ್ಯೋತಿ ಕೋಟನೂರ, ವಿಜಯಲಕ್ಷ್ಮೀ ಹಿರೇಮಠ, ಸವಿತಾ ಪಾಟೀಲ, ಶಿಲ್ಪಾ ಜೋಶಿ, ವಿದ್ಯಾಸಾಗರ ದೇಶಮುಖ, ಜಗದೀಶ ಮರಪಳ್ಳಿ, ರವೀಂದ್ರ ಭಂಟನಳ್ಳಿ, ಶಿವಾನಂದ ಮಠಪತಿ, ಗುರುಬಸಪ್ಪ ಸಜ್ಜನಶೆಟ್ಟಿ, ಸಂತೋಷ ಕುಡಳ್ಳಿ ಕಾಳಗಿ, ವಿಶ್ವನಾತ ತೊಟ್ನಳ್ಳಿ ಶ್ರೀಕಾಂತ ಪಾಟೀಲ ತಿಳಗುಳ, ಯಲ್ಲಾಲಿಂಗ ಪಾಟೀಲ ಕಾಳಗಿ, ಮಂಜುನಾಥ ಕಂಬಾಳಿಮಠ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here