ಮಾಹಿತಿ ಹಕ್ಕು, ಸಾಮಾಜಿಕ ಕಾರ್ಯಕರ್ತರ ಮನವಿಗೆ ಮಣಿದ ಸಾರಿಗೆ ಇಲಾಖೆ; ಗ್ರಾಮಕ್ಕೆ ಬಸ್ ಸೌಕರ್ಯ:

0
43

ಜೇವರ್ಗಿ; ತಾಲೂಕಿನ ಕಟ್ಟಕಡೆಯ ಹಳ್ಳಿಗಳಾದ ರಂಜಣಗಿ ಹಾಗೂ ಬದನಿಹಾಳ ಹಾಗೂ ದೇಸುಣಗಿ ಗ್ರಾಮಗಳಿಗೆ ಬಸ್ ಸೌಕರ್ಯವಿಲ್ಲದೆ ಶಾಲೆ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ದಿನನಿತ್ಯ ಖಾಸಗಿ ವಾಹನಗಳಿಗೆ ಪರದಾಡುವುದು, ಸಮಯಕ್ಕೆ ಸರಿಯಾಗಿ ಶಾಲಾ-ಕಾಲೇಜುಗಳಿಗೆ ತಲುಪದೇ ಇರುವ ಪರಿಸ್ಥಿತಿ ಇದನ್ನು ಗಮನಿಸಿದ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಕಲ್ಯಾಣ ಕರ್ನಾಟ ವಿಭಾಗದ ಅಧ್ಯಕ್ಷರಾದಂತ ಚೆನ್ನಯ ಸ್ವಾಮಿ ವಸ್ತ್ರದ್ ಹಾಗೂ ಕಲಬುರ್ಗಿ ಜಿಲ್ಲಾ ಸಂಚಾಲಕರಾದಂತ ರಾಜು ವ್ಹಿ ಮುದ್ದುಡಗಿ (ನ್ಯಾಯವಾದಿಗಳು) ಹಾಗೂ ಜೇವರ್ಗಿ ತಾಲೂಕು ಅಧ್ಯಕ್ಷರಾದಂತ ಕಂಟು ಆರ್ ಮಳಗಿ ಅವರ ನೇತೃತ್ವದಲ್ಲಿ ಸಾರಿಗೆ ಇಲಾಖೆಗೆ ಮನವಿ ಸಲ್ಲಿಸುವ ಮೂಲಕ ಮನವರಿಕೆ ಮಾಡಲಾಯಿತು.

ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಕಾರ್ಯಕರ್ತರ ಮನವಿಗೆ ಸ್ಪಂದಿಸಿದ ಸಾರಿಗೆ ಇಲಾಖೆ ಅಧಿಕಾರಿಗಳು ಇಂದು ಗ್ರಾಮಕ್ಕೆ ಬಸ್ಸು ಸೇವೆಯನ್ನು ಆರಂಭಿಸಲಾಗಿದೆ. ಸಾರಿಗೆ ಇಲಾಖೆ ಬಸ್ ಸೇವೆ ಆರಂಭಿಸಿದ್ದು ಸಂತಸದ ಸಂಗತಿಯಾಗಿದೆ ಎಂದು ಗ್ರಾಮಸ್ಥರು ಹಾಗೂ ಊರಿನ ಮುಖಂಡರು ಹರ್ಷ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here