ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಕೇಂದ್ರ, ರಾಜ್ಯ ಸರಕಾರಗಳ ಮಲತಾಯಿ ಧೋರಣೆಗೆ ಖಂಡನೆ: ಲಕ್ಷ್ಮಣ ದಸ್ತಿ

0
31

ಕಲಬುರಗಿ : ಸಂವಿಧಾನದ 371ನೇ(ಜೆ) ಕಲಂ ವಿಶೇಷ ಸ್ಥಾನಮಾನ ಪಡೆದಿರುವ ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ರಾಜಾರೋಷವಾಗಿ ಮಲತಾಯಿ ಧೋರಣೆ ಮಾಡುತ್ತಿರುವುದು ಖಂಡನೀಯ ವಿಷಯವಾಗಿದೆ. ಸುಮಾರು 40 ಶಾಸಕರು ಹಾಗೂ 6 ಜನ ಸಂಸದರು ಹೊಂದಿರುವ ಕಲ್ಯಾಣ ಕರ್ನಾಟಕ, ಕರ್ನಾಟಕ ರಾಜ್ಯದ 23% ಪ್ರತಿಶತ ಭೂ ಪ್ರದೇಶ ಹೊಂದಿದ್ದು, ಶೇ.20% ಪ್ರತಿಶತ ಜನಸಂಖ್ಯೆ ಹೊಂದಿದೆ.

ಇಷ್ಟು ವಿಶಾಲವಾದ ಒಂದು ರಾಜ್ಯದ ಸ್ಥಾನಮಾನದ ಪ್ರದೇಶವಾದ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಉಭಯ ಸರಕಾರಗಳು ನಿರ್ಲಕ್ಷ ಮಾಡುತ್ತಿರುವುದು ಯಾವ ನ್ಯಾಯ? ಕೇಂದ್ರ ಸರಕಾರದ ಯೋಜನೆಗಳಾದ ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿ, ಕಲಬುರಗಿ ಎರಡನೇ ವರ್ತುಲ ರಸ್ತೆ ನಿರ್ಮಾಣ ಕಾರ್ಯ, ಏಮ್ಸ್ ಮತ್ತು ನೀಮ್ಝ ಸೇರಿದಂತೆ ಕಲ್ಯಾಣ ಕರ್ನಾಟಕದ ಆಯಾ ಜಿಲ್ಲೆಗಳಲ್ಲಿ ಉದ್ದಿಮೆ ಸ್ಥಾಪನೆ ಮಾಡಲು ಘೋಷಣೆ ಮಾಡಲಾದ ಭರವಸೆಗಳು ಹುಸಿಯಾಗಿವೆ. ಅಷ್ಟೇ ಅಲ್ಲದೇ ನಮ್ಮ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ದಕ್ಕಬೇಕಾದ ಏಮ್ಸ ಹುಬ್ಬಳ್ಳಿಗೆ ಸ್ಥಳಾಂತರ ಮಾಡುತ್ತಿರುವುದು ಮತ್ತು ಕಲಬುರಗಿ ರೈಲ್ವೆ ವಿಭಾಗಿಯ ಕಚೇರಿ ಸ್ಥಾಪನೆ ವಾಪಸ್ಸು ಪಡೆದಿರುವುದು ಖಂಡನೀಯವಾಗಿದೆ.

Contact Your\'s Advertisement; 9902492681

ರಾಜ್ಯ ಸರಕಾರ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ವಿಶೇಷ ಹೆಚ್ಚುವರಿ ಅನುದಾನ ನೀಡುವ ಬಗ್ಗೆ ಭರವಸೆ ನೀಡಿರುವುದು ಕೇವಲ ಭರವಸೆಯಾಗಿರುವುದಲ್ಲದೆ 371ನೇ(ಜೆ) ಕಲಂ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರತ್ಯೇಕ ಮಂತ್ರಾಲಯದ ಘೋಷಣೆ ಕನಸಾಗಿಯೇ ಉಳಿದಿದೆ. ಅಷ್ಟೇ ಅಲ್ಲದೇ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು 371ನೇ(ಜೆ) ಕಲಂ ನಿಯಮದಂತೆ ವಿಶೆಷ ಕೋಶ ಕಚೇರಿ ವಿಭಾಗೀಯ ಕೇಂದ್ರ ಕಲಬುರಗಿಗೆ ಸ್ಥಳಾಂತರ ಮಾಡುವ ಬಗ್ಗೆ ಅಧಿಕೃತ ಘೋಷಣೆ ಮಾಡಿ ಆದೇಶವಾಗಿದ್ದರೂ ಸಹ ಇನ್ನೂ ಅನುಷ್ಠಾನವಗದೇ ಇರುವುದು ನಮ್ಮ ಭಾಗಕ್ಕೆ ಸರಕಾರದ ನಿರ್ಲಕ್ಷ ಧೋರಣೆಯ ಸ್ಪಷ್ಟ ಉದಾಹರಣೆಯಾಗಿದೆ.

ಕಲಬುರಗಿ ತನ್ನ ಇತಿಹಾಸದಲ್ಲಿಯೇ ಕನಿಷ್ಟ 2 ರಿಂದ 4-5 ಮಂತ್ರಿಗಳನ್ನು ಹೊಂದಿರುವ ಈ ಜಿಲ್ಲೆಗೆ ಪ್ರಸ್ತುತ ಸರಕಾರದ ಅವಧಿಯಲ್ಲಿ ಇನ್ನುವರೆಗೂ ಮಂತ್ರಿ ಸ್ಥಾನ ಸಿಕ್ಕಿರುವದಿಲ್ಲ. ಅಷ್ಟೇ ಅಲ್ಲದೇ ಕಲ್ಯಾಣ ಕರ್ನಾಟಕದ ರಾಯಚೂರು, ಯಾದಗೀರ, ಬಳ್ಳಾರಿ ಜಿಲ್ಲೆಗಳಿಗೆ ನಮ್ಮ ಭಾಗದವರನ್ನು ಮಂತ್ರಿ ಮಾಡದೇ ನಿರಂತರ ನಿರ್ಲಕ್ಷ ಮಾಡುತ್ತಿರುವುದು ನ್ಯಾಯವೇ? ಇದೇ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ನೀಡಿರುವ ಸಂವಿಧಾನದ ವಿಶೇಷ ಸ್ಥಾನಮಾನವೆ? ಸರಕಾರದಿಂದ ಆಗುತ್ತಿರುವ ಈ ರೀತಿಯ ಧೋರಣೆಯಿಂದ ಪ್ರಾದೇಶಿಕ ಸಮತೋಲನೆ ಸಾಧ್ಯವೆ? ಸರಕಾರವೇ ಪ್ರತ್ಯೇಕತೆಯ ಧೋರಣೆಯನ್ನು ಅನುಸರಿಸುವ ಮುಖಾಂತರ ಕಲ್ಯಾಣ ಕರ್ನಾಟಕದ ಜನಮಾನಸದಲ್ಲಿ ಪ್ರತ್ಯೇಕತೆಯ ಭಾವನೆ ಹುಟ್ಟಿಸುತ್ತಿರುವುದು ಅಖಂಡ ಕರ್ನಾಟಕದ ಢೋಂಗಿತನದ ಧೋರಣೆ ಸ್ಪಷ್ಟವಾಗಿ ಪ್ರದರ್ಶನವಾಗುತ್ತಿದೆ. ಸಮಿತಿ ಈ ವಿಷಯಕ್ಕೆ ಗಂಭೀರವಾಗಿ ಪರಿಗಣಿಸಿ ಬರುವ 2022 ರ ಮೊದಲನೇ ವಾರದಲ್ಲಿ ಮುಂದಿನ ಹೋರಾಟದ ರೂಪರೇಷೆಗಳನ್ನು ಹಮ್ಮಿಕೊಂಡು ಪ್ರಕಟಿಸಲಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here