ಸುರಪುರ: ಕಳೆದ ೨೭ನೇ ತಾರೀಖು ನಡೆದ ತಾಲೂಕಿನ ಕಕ್ಕೇರಾ ಚುನಾವಣೆಯ ಮತ ಎಣಿಕೆ ಮುಗಿದಿದ್ದು ಕಾಂಗ್ರೆಸ್‌ನ ೧೬ ಅಭ್ಯಾರ್ಥಿಗಳು ಗೆಲುವು ಸಾಧಿಸುವ ಮೂಲಕ ಸ್ಪಷ್ಟ ಬಹುಮತ ಪಡೆದುಕೊಂಡಿದೆ.
ಗುರುವಾರ ಬೆಳಿಗ್ಗೆ ೮ ಗಂಟೆಗೆ ಆರಂಭಗೊಂಡ ಮತ ಏಣಿಕೆ ಹತ್ತು ಗಂಟೆಯ ವೇಳೆಗೆ ಪೂರ್ಣಗೊಂಡಿತ್ತು,ಕಾಂಗ್ರೆಸ್‌ನ ೧೬ ಅಭ್ಯಾರ್ಥಿಗಳು ಗೆಲುವುದು ಸಾಧಿಸಿದರೆ,ಬಿಜೆಪಿಯ ೬ ಅಭ್ಯಾರ್ಥಿಗಳು ಗೆದ್ದಿದ್ದಾರೆ.ಅಲ್ಲದೆ ಒಬ್ಬರು ಪಕ್ಷೇತರ ಅಭ್ಯಾರ್ಥಿಯೂ ಗೆಲುವುದು ಸಾಧಿಸಿದ್ದಾರೆ.
ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು,ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಕಾರ್ಯಕರ್ತರು ಮತ ಎಣಿಕೆ ಕೇಂದ್ರದ ಅನತಿ ದೂರದಲ್ಲಿಯೆ ಸಂಭ್ರಮಾಚರಣೆ ನಡೆಸಿದರು.ಗುಲಾಲು ಎರಚಿ ಪಕ್ಷದ ಧ್ವಜವನ್ನು ಹಿಡಿದು ಕುಣಿದಾಡಿದರು.ಅಲ್ಲದೆ ಬಿಜೆಪಿ ಅಭ್ಯಾರ್ಥಿಗಳ ಗೆಲುವಿನ ಸಂದೇಶ ಹೊರ ಬರುತ್ತಿದ್ದಂತೆ ಬಿಜೆಪಿ ಪಕ್ಷದ ಮುಖಂಡರು ಕೂಡ ತಮ್ಮ ಅಭ್ಯಾರ್ಥಿಯ ಗೆಲುವಿಗಾಗಿ ಸಂಭ್ರಮಿಸಿದರು.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಗೆಲುವಿನ ಸುದ್ದಿ ಹೊರಬರುತ್ತಿದ್ದಂತೆ ತಹಸೀಲ್ ಬಳಿಯಿಂದ ಕಾಂಗ್ರೆಸ್ ಕಚೇರಿ ವಸಂತ ಮಹಲ್‌ಗೆ ಆಗಮಿಸಿ ಮಾಜಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕರಿಗೆ ಭೇಟಿ ಮಾಡಿ ಸಂಭ್ರಮಿಸಿದರು.ಅಲ್ಲದೆ ನಂತರ ಮುಖಂಡರಾದ ರಾಜಾ ರೂಪಕುಮಾರ ನಾಯಕ,ರಾಜಾ ವೇಣುಗೋಪಾಲ ನಾಯಕ,ರಾಜಾ ಸಂತೋಷ ನಾಯಕ ಹಾಗು ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರ ನಾಯಕ ಸೇರಿದಂತೆ ಅನೇಕ ಮುಖಂಡರು ಹಾಗು ಕಾರ್ಯಕರ್ತರು iಹಾತ್ಮ ಗಾಂಧಿ ವೃತ್ತದಲ್ಲಿ ಜಮಾವಣೆಗೊಂಡು ಮಹಾತ್ಮ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪಟಾಕಿ ಸಿಡಿಸಿ ಗುಲಾಲು ಎರಚಿ ಸಿಹಿ ಹಂಚಿ ಸಂಭ್ರಮಿಸಿದರು.ನಂತರ ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿಗೆ ತೆರಳಿ ಮಾಲಾರ್ಪಣೆ ಮಾಡಿ ಸಂಭ್ರಮಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ವಿಠ್ಠಲ್ ಯಾದವ್,ವೆಂಕೋಬ ಯಾದವ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗಣ್ಣ ಬಾಚಿಮಟ್ಟಿ, ರಾಜಾ ವಿಜಯಕುಮಾರ ನಾಯಕ,ರಾಜಾ ಸುಶಾಂತ ನಾಯಕ,ಗುಂಡಪ್ಪ ಸೋಲಾಪುರ,ಅಬ್ದುಲ್ ಗಫೂರ ನಗನೂರಿ,ಯಲ್ಲಪ್ಪ ನಾಯಕ ಮಲ್ಲಿಬಾವಿ,ಭೀಮು ನಾಯಕ ಮಲ್ಲಿಬಾವಿ ಸೇರಿದಂತೆ ನೂರಾರು ಸಂಖ್ಯೆಯ ಕಾರ್ಯಕರ್ತರಿದ್ದರು.
ಕಕ್ಕೇರಾ ಪುರಸಭೆ ಚುನಾವಣೆಯಲ್ಲಿ ೧೬ ಸ್ಥಾನ ಗೆದ್ದಿದ್ದೇವೆ,ಪಕ್ಷೇತರ ಅಭ್ಯಾರ್ಥಿಯು ನಮ್ಮ ರೆಬೆಲ್ ಅಭ್ಯಾರ್ಥಿ ಅವರು ನಮ್ಮೊಂದಿಗೆ ಇರಲಿದ್ದಾರೆ.ಈ ಗೆಲುವು ಮುಂದಿನ ಎಲ್ಲಾ ಚುನಾವಣೆಹೆ ದಿಕ್ಸೂಚಿಯಾಗಲಿದೆ,ಸಮಗ್ರ ಕಕ್ಕೇರಾ ಅಭಿವೃಧ್ಧಿಗೆ ಶ್ರಮಿಸುತ್ತೇವೆ-ರಾಜಾ ವೆಂಕಟಪ್ಪ ನಾಯಕ ಮಾಜಿ ಶಾಸಕರು ಸುರಪುರ
ಕಕ್ಕೇರಾ ಪುರಸಭೆ ಚುನಾವಣೆಯಲ್ಲಿ ನಮಗೆ ಸೋಲುಂಟಾಗಿದೆ,ಇದರ ಹೊಣೆಯನ್ನು ಯಾವುದೇ ಅಭ್ಯಾರ್ಥಿ ಮೇಲೆ ಹೊರಿಸುವುದಿಲ್ಲ ನಾನೆ ಹೊಣೆ ಹೊತ್ತುಕೊಳ್ಳುತ್ತೇನೆ.ಮುಂದಿನ ದಿನಗಳಲ್ಲಿ ಉತ್ತಮವಾಗಿ ಕೆಲಸ ಮಾಡಿ ಜನರ ವಿಶ್ವಾಸಗಳಿಸುತ್ತೇನೆ ಹಾಗು ಈಗ ಮತದಾರರು ನೀಡಿದ ತೀರ್ಪಿಗೆ ತಲೆ ಬಾಗುತ್ತೇನೆ-ನರಸಿಂಹ ನಾಯಕ (ರಾಜುಗೌಡ) ಶಾಸಕರು ಸುರಪುರ
ಪೆಟ್ರೋಲ್ ಹಾಕುತ್ತಿದ್ದ ಪರಶುರಾಮ ಈಗ ಪುರಸಭೆ ಸದಸ್ಯ: ಕಕ್ಕೇರಾ ಪುರಸಭೆಯ ವಾರ್ಡ್ ಸಂಖ್ಯೆ ೬ರ ಕಾಂಗ್ರೆಸ್ ಅಭ್ಯಾರ್ಥಿ ಪರಶುರಾಮ ಎಚ್.ಗೋವಿಂದರ್ ಅನೇಕ ವರ್ಷಗಳಿಂದ ಪೆಟ್ರೋಲ್ ಬಂಕ್‌ಲ್ಲಿ ಪೆಟ್ರೋಲ್ ಹಾಕುವ ಕೆಲಸ ಮಾಡುತ್ತಿದ್ದವರು.ಸಮಾಜ ಸೇವೆ ಮಾಡುವ ಆಸಕ್ತಿಯಿಂದ ಚುನಾವಣೆಗೆ ನಿಲ್ಲುವ ಮೂಲಕ ಬಿಜೆಪಿ ಪಕ್ಷದ ಅಭ್ಯಾರ್ಥಿ ಶಿವರಾಜ ವಿರುದ್ಧ ೫೧ ಮತಗಳ ಅಂತರದಿಂದ ಗೆಲ್ಲುವ ಮೂಲಕ ಪುರಸಭೆ ಸದಸ್ಯರಾಗಿ ಆಯ್ಕೆಯಾದರು.