ಚಿತ್ತಾಪುರ:ದೈಹಿಕ, ಮಾನಸಿ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ಸೂರ್ಯ ನಮಸ್ಕಾರ ಅವಶ್ಯಕ ಎಂದು ಪತಂಜಲಿ ಯೋಗ ಶಿಕ್ಷಕ ವೀರಣ್ಣ ಯಾರಿ ಹೇಳಿದರು.
ತಾಲೂಕಿನ ವಾಡಿ ಪಟ್ಟಣದ ಎಸಿಸಿ ಮೈದಾನದಲ್ಲಿ ಯೋಗಾಭ್ಯಾಸ ವೇಳೆ ಮಾತನಾಡುತ್ತಾ ರಾಜ್ಯದ ಎಲ್ಲಾ ಪದವಿ ಪೂರ್ವ ಕಾಲೇಜುಗಳಲ್ಲಿ ಜನವರಿ 1 ರಿಂದ ಫೆಬ್ರವರಿ 7ರವರೆಗೆ ಸೂರ್ಯ ನಮಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಕೇಂದ್ರ ಶಿಕ್ಷಣ ಇಲಾಖೆ ಸೂಚಿಸಿದ್ದು, 75ನೇ ಸ್ವಾತಂತ್ರೋತ್ಸವ ಅಮೃತ ಮಹೋತ್ಸವ ಅಂಗವಾಗಿ ಹಾಗೂ ಜ.26ರ ಗಣರಾಜ್ಯೋತ್ಸದಂದು ಸೂರ್ಯ ನಮಸ್ಕಾರ ಆಯೋಜಿಸಬೇಕೆಂದು ಕೇಂದ್ರ ಶಿಕ್ಷಣ ಸಚಿವಾಲಯ ಎಲ್ಲ ರಾಜ್ಯಗಳ ಶಿಕ್ಷಣ ಇಲಾಖೆಗಳ ಮುಖ್ಯಸ್ಥರಿಗೆ ಪತ್ರ ಬರೆದಿರುವು
ನಮಗೆಲ್ಲ ಸಂತೋಷದಾಯಕ ವಿಷಯವಾಗಿದೆ.
ಕರೊನಾದಂತಹ ಸಾಂಕ್ರಾಮಿಕ ರೋಗದ ನಡುವೆ ದೇಶದ ಜನರ ಆರೋಗ್ಯವೃದಿಯ ಜೊತೆಗೆ ಮನೋಬಲ ಹೆಚ್ಚಿಸುವಂತಹ ಸರ್ಕಾರದ ಕ್ರಮ ಅಭಿನಂದರ್ಹ ಎಂದು ಹೇಳಿದರು.
ಸರ್ಕಾರಿ ಹಾಗೂ ಖಾಸಗಿ ಪದವಿ ಪೂರ್ವ ಕಾಲೇಜು ಗಳಲ್ಲಿ ಉಚಿತ ಸೂರ್ಯ ನಮಸ್ಕಾರ ಹೇಳಿಕ ಕೊಡಲು ನಮ್ಮ ಯೋಗಸಾಧಕರ ತಂಡ ಸಿದ್ದವಿದೆ,ಅದಕ್ಕಾಗಿ ಈ ನಂ 9964035623 ಸಂಪರ್ಕಿಸಬಹುದು ಎಂದರು.
ಈ ಸಂದರ್ಭದಲ್ಲಿ ಮಲ್ಲಯ್ಯ ಸ್ವಾಮಿ,ಶಾಂತವೀರಪ್ಪ ಅಳ್ಳೊಳ್ಳಿ, ಜೈದೇವ ಜೋಗಿಕಲಮಠ,ಭೀಮರಾವ ದೊರೆ,ರವಿ ರದ್ದೆವಾಡಗಿ,
ಪ್ರಕಾಶ ಚಂದನಕೇರಿ, ಕಾಶಿನಾಥ ಶೆಟಗಾರ,ಅಶೋಕ ಕಾನಕುರ್ತೆ ಇದ್ದರು.