ಮಾಲೂರು: ಓಂ ಶಕ್ತಿ ಮಾತೆಯನ್ನು ಪೂಜಿಸುವುದರಿಂದ ತಾಯಿ ನಮ್ಮ ಸಂಕಷ್ಟವನ್ನು ಪರಿಹರಿಸುತ್ತಾಳೆ ಎಂದು ಓಂ ಶಕ್ತಿಯ ಭಕ್ತರಾದ ನಾಗವೇಣಮ್ಮ ರವರು ತಿಳಿಸಿದರು ಮಾಲೂರು ತಾಲ್ಲೂಕಿನ ಕಸಬಾ ಹೋಬಳಿ ತೊರ‍್ನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ತಾಯಿ ಓಂ ಶಕ್ತಿ ದೇವಾಲಯ ನಿರ್ಮಾಣದ ಗುದ್ದಲಿ ಪೂಜೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿ ವರ್ಷ ನೂರಾರು ಭಕ್ತರು ಶ್ರೀ ಮೇಲ್ ಮರವತ್ತೂರು ದೇವಾಲಯಕ್ಕೆ ಹೋಗಿ ದರ್ಶನ ಪಡೆಯುತ್ತಾರೆ. ಆದರೆ ನಮ್ಮ ತೊರ‍್ನಹಳ್ಳಿ ಗ್ರಾಮದಲ್ಲಿ ಶಕ್ತಿಗಳು ಕುಳಿತು ಭಜನೆ ಹಾಗೂ ಪೂಜಾ ಕಾರ್ಯಗಳನ್ನು ನಿರ್ವಹಿಸಲು ಸೂಕ್ತ ದೇವಾಲಯದ ಅವಶ್ಯಕತೆಯಿದ್ದು, ಇಂದು ನೂತನ ದೇವಾಲಯ ನಿರ್ಮಾಣಕ್ಕೆ ಗುದ್ದಲಿಪೂಜೆ ನಿರ್ವಹಿಸುತ್ತಿದ್ದೇವೆ, ಶೀಘ್ರದಲ್ಲೇ ದೇವಾಲಯ ನಿರ್ಮಿಸಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಗಾಯಿತ್ರಮ್ಮ ನಾಗವೇಣಮ್ಮ, ಯಶೋಧಮ್ಮ, ಗಂಗಮ್ಮ, ಲಕ್ಷ್ಮಿ, ಸುನಂದಮ್ಮ, ಮಂಜಮ್ಮ, ಈರಮ್ಮ, ಶಿಲ್ಪಮ್ಮ, ಸತ್ಯಮ್ಮ ಮತ್ತು ಶ್ರೀ ಓಂ ಶಕ್ತಿ ತಾಯಿಯ ಭಕ್ತಾಧಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು