ಸಗರ ನಾಡು ಕಲಾ ವೇದಿಕೆ ರುಕ್ಮಾಪುರ ಸಂಗೀತ ಮಂದಾರ ಕಾರ್ಯಕ್ರಮ

0
58

ಸುರಪುರ: ಸಗರ ನಾಡು ಕಲಾ ವೇದಿಕೆ ರುಕ್ಮಾಪುರ ವತಿಯಿಂದ ನಗರದ ಶೆಟ್ಟಿ ಮೊಹಲ್ಲಾದ ಶ್ರೀ ಸುಗೂರೇಶ್ವರ ದೇವಸ್ಥಾನದಲ್ಲಿ ಹೊಸ ವರ್ಷದ ಅಂಗವಾಗಿ ಸಂಗೀತ ಮಂದಾಯ-೨೦೨೨ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನ್ಯಾಯವಾದಿ ಶಿವಾನಂದ ಆವಂಟಿ ಮಾತನಾಡಿ,ಸಂಗೀತ ಮನಸ್ಸೀಗೆ ಶಾಂತಿ ನೆಮ್ಮದಿಯನ್ನು ನೀಡುತ್ತದೆ.ಹಿಂದಿನ ಕಾಲದಲ್ಲಿ ಸಂಗೀತಕ್ಕೆ ರಾಜಾಶ್ರಯವಿತ್ತು ಆದರೆ ಇಂದು ಸಂಘ ಸಂಸ್ಥೆಗಳು ಮತ್ತು ಮಠ ಮಾನ್ಯಗಳು ಸಂಗೀತದ ಕಾರ್ಯಕ್ರಮಗಳನ್ನು ಆಯೋಜಿಸಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯವಾದುದು ಎಂದರು.ಆದ್ದರಿಂದ ಎಲ್ಲರು ಸಂಗೀತವನ್ನು ಮತ್ತು ಸಂಗೀತಗಾರರನ್ನು ಗೌರವಿಸುವ ಮತ್ತು ಬೆಳೆಸುವ ಕೆಲಸ ಆಗಬೇಕು ಎಂದರು.

Contact Your\'s Advertisement; 9902492681

ಮತ್ತೋರ್ವ ಮುಖ್ಯ ಅತಿಥಿಗಳಾದ ನ್ಯಾಯವಾದಿ ಜಯಲಲಿತ ಪಾಟೀಲ್ ಮಾತನಾಡಿ,ಸಂಗೀತವು ವೇದಗಳ ಕಾಲದಿಂದಲು ಜನರ ಮನಸ್ಸು ಸೊರೆಗೊಳ್ಳುತ್ತಾ ಬಂದಿದ್ದು ಅಂದು ಋಷಿ ಮುನಿಗಳು ಮತ್ತು ಅರಸರು ಸಂಗೀತವನ್ನು ಉಳಿಸಿ ಬೆಳೆಸಿದ್ದಾರೆ.ಆದರೆ ಇಂದಿನ ಹೆಚ್ಚಿನ ಯುವ ಸಮೂಹ ಟಿ.ವಿ,ಮೊಬೈಲ್ ಗೀಳನ್ನು ಹಚ್ಚಿಕೊಂಡು ಯುವ ಜನತೆಯ ಆರೋಗ್ಯ ಕ್ಷೀಣಿಸುತ್ತಿದೆ,ಶಾಸ್ತ್ರಿಯ ಸಂಗೀತವನ್ನು ಆಲಿಸುವುದರಿಂದ ರೋಗಿಯು ಗುಣಮುಖನಾಗುತ್ತಾನೆ ಎಂಬುದಕ್ಕೆ ಹಲವು ಉದಾಹರಣೆಗಳಿವೆ,ವೈದ್ಯರು ಸಹ ಮಾನಸಿಕ ಆಸ್ವಸ್ಥರಿಗೆ ಸಂಗೀತ ಕೇಳುವಂತೆ ಸಲಹೆ ನೀಡುತ್ತಾರೆ ಅಂತಹ ಸಂಗೀತದ ಕಾರ್ಯಕ್ರಮವನ್ನು ಸಗರನಾಡು ಕಲಾ ವೇದಿಕೆ ನಡೆಸುತ್ತಿರುವುದು ತುಂಬಾ ಹೆಮ್ಮೆಯ ಸಂಗತಿಯಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಡಾ:ಸಂಜಯ್ ಕುಲಕರ್ಣಿ ಮಾತನಾಡಿದರು.ಸೂಗೂರೇಶ್ವರ ದೇವಸ್ಥಾನದ ಅರ್ಚಕರಾದ ವೇ.ಮೂ ಕೊಟ್ರಯ್ಯಸ್ವಾಮಿ ಬಳುಂಡಗಿಮಠ ಸಾನಿಧ್ಯವಹಿಸಿದ್ದರು.ಸುನೀಲ ಸರ್ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಸಂಗೀತ ಕಲಾವಿದರಾದ ಶಿವಶರಣಯ್ಯ ಸ್ವಾಮಿ ಬಳೂಂಡಗಿಮಠ,ಮೋಹನರಾವ್ ಮಾಳದಕರ್,ಸಿದ್ದಲಿಂಗಯ್ಯಸ್ವಾಮಿ ಬಳೂಂಡಗಿಮಠ,ಯಲ್ಲಪ್ಪ ಹುಲಿಕಲ್,ಪ್ರಾಣೇಶ ಕುಲಕರ್ಣಿ,ಸುಧಾ ದಾಯಫುಲೆ,ನರಸಿಂಹ ಬಂಡಿ,ಗೋಪಾಲರಾವ್ ಗುಳೆದ,ಶ್ರೀನಿವಾಸ ದಾಯಫುಲೆ,ಚಂದ್ರಹಾಸ್ ಮಿಠ್ಠಾ,ತಿಮ್ಮಯ್ಯ ಪೋತಲ್ಕರ್,ಶಂಕರ ಆಲೂರು,ಗುರುನಾಥರಡ್ಡಿ ಶೀಲವಂತ,ಜಗದೀಶ ಮಾನು,ಮಹಾಂತೇಶ ಹಸನಾಪುರ ಸೇರಿದಂತೆ ಜೀವ್ಹೇಶ್ವರ ಭಜನಾ ಮಂಡಳಿ ಸದಸ್ಯರು ಹಾಗು ಸಗರನಾಡು ಕಲಾ ವೇದಿಕೆ ಅಧ್ಯಕ್ಷರಾದ ರಾಜಶೇಖರ ಗೆಜ್ಜೆ,ಸುರೇಶ ಬಾಯಿ ಅಂಬುರೆ,ರಮೇಶ ಕುಲಕರ್ಣಿ ಇವರುಗಳಿಂದ ಸಂಗೀತ ದರ್ಬಾರ ಕಾರ್ಯಕ್ರಮ ನಡೆಯಿತು.

ಪ್ರಮುಖರಾದ ಸಿದ್ದಲಿಂಗಯ್ಯ ಸ್ವಾಮಿ ಕಡ್ಲೆಪ್ಪನವರ ಮಠ,ಸೂಗೂರೇಶ ಮಡ್ಡಿ,ಚೆನ್ನಪ್ಪ ಗುಂಡಾನೂರ,ಎಸ್.ಬಿ ಜೈನ್,ರಾಮಣ್ಣ ಚಾರು,ಭೀಮಣ್ಣ ಹುದ್ದಾರ,ವಿನೋದ ಬಳುಂಡಗಿಮಠ,ಅನ್ವರ ಜಮಾದಾರ,ಓಂಪ್ರಕಾಶ ಗಡಗಡೆ,ಶರಣಬಸಪ್ಪ ಯಳವಾರ ಭಾಗವಹಿಸಿದ್ದರು.ವೇದಿಕೆ ಅಧ್ಯಕ್ಷ ರಾಜಶೇಖರ ಗೆಜ್ಜೆ ಪ್ರಾಸ್ತಾವಿಕವಾಗಿ ಮಾತನಾಡಿದರು, ದೇವು ಹೆಬ್ಬಾಳ ನಿರೂಪಿಸಿದರು,ಶಿಕ್ಷಕ ಹೆಚ್.ರಾಠೋಡ ಸ್ವಾಗತಿಸಿದರು.ವೆಂಕಟೇಶಗೌಡ ಪಾಟೀಲ್ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here