ಸರಕಾರಿ ಶಾಲೆಯನ್ನು ‘ಹೈಟೆಕ್’ ಆಗಿಸಿದ ಕವಿ ವೀರಣ್ಣ ಮಡಿವಾಳರ

0
12

ಬೆಳಗಾವಿ: ಜಿಲ್ಲೆಯ ಹಿಂದುಳಿದ ರಾಯಬಾಗ ತಾಲ್ಲೂಕು ನಿಡಗುಂದಿ ಗ್ರಾಮದ ಡಾ.ಅಂಬೇಡ್ಕರ್‌ ನಗರ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ, ಯುವ ಕವಿ 38 ವರ್ಷದ ವೀರಣ್ಣ ಮಡಿವಾಳರ ಅವರು, ಶಾಲೆಯ ಅಭಿವೃದ್ಧಿಗೆ ತಮ್ಮ ಬಹುಪಾಲು ಸಮಯವನ್ನು ವಿನಿಯೋಗಿಸುತ್ತಿದ್ದಾರೆ.

ಆ ಶಾಲೆಯನ್ನು ಯಾವುದೇ ಖಾಸಗಿ ಕಾನ್ವೆಂಟ್‌ಗಳಿಗೂ ಕಡಿಮೆ ಇಲ್ಲದಂತೆ ರೂಪಿಸಿದ್ದಾರೆ. ಸಾಮಾಜಿಕ ಮಾಧ್ಯಮವನ್ನು ಬಳಸಿಕೊಂಡು ಮತ್ತು ತಮಗೆ ಪರಿಚಯ ಇರುವವರಿಂದ ಹಣ ಸಂಗ್ರಹಿಸಿ ಶಾಲೆಯನ್ನು ಅದ್ಭುತವಾಗಿ ಅಭಿವೃದ್ಧಿಪಡಿಸಿದ್ದಾರೆ. ಉದ್ಯಾನ, ಗುಬ್ಬಚ್ಚಿ ಗೂಡುಗಳು, ಪಾಠೋಪಕರಣಗಳು ಗಮನಸೆಳೆಯುತ್ತವೆ.

Contact Your\'s Advertisement; 9902492681

ಕಲಾವಿದರೂ ಆಗಿರುವ ಅವರು ಶಾಲೆಯ ಗೋಡೆಗಳಿಗೆ ಆಕರ್ಷಕ ಚಿತ್ರ ಬಿಡಿಸಿ ಅಂದಗೊಳಿಸಿದ್ದಾರೆ. ಜನಪ್ರತಿನಿಧಿಗಳು ಹಾಗೂ ಊರಿನವರಿಗೆ ಮನವರಿಕೆ ಮಾಡಿಕೊಟ್ಟು ಜಾಗ ಪಡೆದು ಕಟ್ಟಡ ನಿರ್ಮಿಸಿದ್ದಾರೆ. ಕುಗ್ರಾಮದ ಮಕ್ಕಳು ಕೂಡ ಗುಣಮಟ್ಟದ ಶಿಕ್ಷಣ ಪಡೆಯಲು ಕಾರಣವಾಗಿದ್ದಾರೆ. ಕೋವಿಡ್ ಲಾಕ್‌ಡೌನ್‌ ವೇಳೆ ಬಹುಭಾಷಾ ಪ್ರಯೋಗಾಲಯ ನಿರ್ಮಾಣಕ್ಕೆ ಶ್ರಮಿಸಿದರು. ಗ್ರಾಮ್ಕಕೊಂದು ಮೌಲ್ಯಯುತ ಆಸ್ತಿ ದೊರಕಿಸಿದ್ದಾರೆ. ಮೊನಚಾದ ಬರವಣಿಗೆ ಮೂಲಕ ಸಾಹಿತ್ಯ ಲೋಕದಲ್ಲೂ ಹೆಸರು ಗಳಿಸಿದ್ದಾರೆ.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಪ್ರಥಮ ರ‍್ಯಾಂಕ್‌ನೊಂದಿಗೆ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2010ರಲ್ಲಿ ‘ನೆಲದ ಕರುಣೆಯ ದನಿ’ ಕವನಸಂಕಲನ ಮತ್ತು ಆಡಿಯೊ ಬುಕ್ ಪ್ರಕಟವಾಗಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ, ಬೇಂದ್ರೆ ಗ್ರಂಥ ಬಹುಮಾನ, ಅಮ್ಮ ಪ್ರಶಸ್ತಿ, ಇಂಚಲ ಕಾವ್ಯ ಪ್ರಶಸ್ತಿ, ಅರಳು ಪ್ರಶಸ್ತಿ, ಸಾಂಬಶಿವಪ್ಪ ಸ್ಮಾರಕ ಸಾಹಿತ್ಯ ಪ್ರಶಸ್ತಿ ಮೊದಲಾದವುಗಳಿಗೆ ಭಾಜನರಾಗಿದ್ದಾರೆ. ಅವರ ಕವಿತೆ ಇತರ ಭಾಷೆಗಳಿಗೆ ಅನುವಾದಗೊಂಡಿವೆ ಮತ್ತು ಪಠ್ಯದಲ್ಲಿ ಸೇರಿವೆ. 2007ರಿಂದ ಶಿಕ್ಷಕರಾಗಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here