ಬೆಳಗಾವಿ ಪೊಲೀಸ್ ಕಮೀಷನರ್ ಆಗಿ ಬೋರಲಿಂಗಯ್ಯ

0
7

ಬೆಳಗಾವಿ : ಬೆಳಗಾವಿ ಕಮಿಷನರ್​ ಆಗಿ ಬೋರಲಿಂಗಯ್ಯ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಬೆಳಗಾವಿಯ ಕಮಿಷನರ್ ಕಚೇರಿಯಲ್ಲಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ನಿರ್ಗಮಿತ ಆಯುಕ್ತ ಕೆ. ತ್ಯಾಗರಾಜನ್​ರಿಂದ ಅಧಿಕಾರ ಹಸ್ತಾಂತರ ಮಾಡಲಾಗಿದೆ. ಬೆಳಗಾವಿಯಲ್ಲಿ ಕಲ್ಲು ತೂರಾಟ, ರಾಯಣ್ಣ ಮೂರ್ತಿ ಭಗ್ನ ಪ್ರಕರಣಕ್ಕೆ ಸಂಬಂಧಿಸಿ ಬೆಳಗಾವಿ ನಗರ ಪೊಲೀಸ್ ಕಮಿಷನರ್​ ತಲೆದಂಡವಾಗಿತ್ತು. ಕೆ. ತ್ಯಾಗರಾಜನ್ ಎತ್ತಂಗಡಿ ಮಾಡಿ ಬೋರಲಿಂಗಯ್ಯ ನೇಮಕ ಮಾಡಿದ್ದಾರೆ.

ಬೆಳಗಾವಿಯ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಎಂಇಎಸ್ ಪುಂಡಾಟ ನಡೆದಿತ್ತು. ಕಲ್ಲು ತೂರಾಟ, ರಾಯಣ್ಣ ಮೂರ್ತಿ ಭಗ್ನ ಪ್ರಕರಣ ಸಂಬಂಧಿಸಿದಂತೆ 38 ಜನರು ಬಂಧನ ಆಗಿತ್ತು. ಎಲ್ಲಾ ಗಲಾಟೆಗಳಿಗೆ ಪೊಲೀಸ್ ವೈಫಲ್ಯ ಎಂಬ ಆರೋಪ ಕೇಳಿ ಬಂದಿತ್ತು.

Contact Your\'s Advertisement; 9902492681

ಸರ್ಕಾರದ ಆದೇಶದಂತೆ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದೇನೆ. ಈ ಹಿಂದೆ ಇದ್ದ ಅಧಿಕಾರಿಗಳು ಮಾಡಿದ ಉತ್ತಮ ಕೆಲಸಗಳನ್ನ ಮುಂದುವರೆಸುತ್ತೇನೆ. ಬೆಳಗಾವಿಯಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಕ್ರೈಂ ಪ್ರಕರಣಗಳನ್ನ ಪರಿಶೀಲನೆ ಮಾಡಿ ಹೆಚ್ಚಿನ ರೀತಿಯಲ್ಲಿ ಕಂಟ್ರೋಲ್ ಮಾಡುತ್ತೇವೆ ಎಂದು ಬೆಳಗಾವಿಯ ನೂತನ ಪೊಲೀಸ್ ಆಯುಕ್ತ ಡಾ. ಬೋರಲಿಂಗಯ್ಯ ಟಿವಿ9ಗೆ ಹೇಳಿಕೆ ನೀಡಿದ್ದಾರೆ.

ನೂತನ ಕಮೀಷನರ್, ಅಧಿಕಾರಿಗಳು ಮತ್ತು ನಾಗರಿಕ ಸಹಕಾರ ಕೋರಿದ್ದಾರೆ. ಕನ್ನಡ ಮರಾಠಿಗರು ಅನ್ನೋದಕ್ಕಿಂತ ಎಲ್ಲರೂ ಭಾರತೀಯರು. ಎಲ್ಲಾ ರೀತಿಯ ಜನರಿದ್ದು ಎಲ್ಲರನ್ನೂ ಸರಿದೂಗಿಸಿಕೊಂಡು ಹೋಗುತ್ತೇವೆ. ಕಾನೂನು ಕೈಗೆತ್ತಿಕೊಂಡ್ರೇ ಕಾನೂನಿನಲ್ಲಿ ಇರುವ ಕ್ರಮಗಳನ್ನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಅಧಿವೇಶನದ ವೇಳೆ ಎಂಇಎಸ್ ಪುಂಡಾಟಿಕೆ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ್ದಾರೆ. ಆ ಕೇಸ್‌ಗೆ ಸಂಬಂಧಿಸಿದಂತೆ ಡಿಟೈಲ್ ತೆಗೆದುಕೊಂಡು ನೋಡಿಕೊಳ್ಳುತ್ತೇನೆ. ಕೇಸ್ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ಮುಂದುವರೆಯುತ್ತೇವೆ ಎಂದು ಡಾ. ಬೋರಲಿಂಗಯ್ಯ ಹೇಳಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here