ಆನೆಕಾಲು ರೋಗ ನಿರ್ಮೂಲನೆಗೆ ಎಲ್ಲರು ಮಾತ್ರ ಸೇವಿಸಿ: ಡಾ:ಆರ್.ವಿ ನಾಯಕ

0
12

ಸುರಪುರ: ಸರಕಾರ ಆನೆಕಾಲು ರೋಗ ನಿರ್ಮೂಲನೆಗಾಗಿ ಇದೇ ೦೫ನೇ ತಾರೀಖಿನಿಂದ ೧೪ನೇ ತಾರೀಖಿನವರೆಗೆ ೧೮ ನೇ ಸುತ್ತಿನ ಅಭಿಯಾನವನ್ನು ಹಮ್ಮಿಕೊಂಡಿದೆ,ಆದ್ದರಿಂದ ಎಲ್ಲರು ಆನೆಕಾಲು ರೋಗ ನಿರ್ಮೂಲನೆಗಾಗಿ ಮಾತ್ರೆಗಳನ್ನು ಸೇವಿಸುವ ಮೂಲಕ ಅಭಿಯಾನಕ್ಕೆ ಕೈಜೋಡಿಸುವಂತೆ ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ ನಾಯಕ ತಿಳಿಸಿದರು.

ನಗರದ ಶ್ರೀಪ್ರಭು ಮಹಾವಿದ್ಯಾಲಯದ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಆನೆಕಾಲು ರೋಗ ನಿರ್ಮೂಲನೆ ಅಭಿಯಾನಕ್ಕೆ ಚಾಲನೆ ಕಾರ್ಯಕ್ರಮದ ನೇತೃತ್ವವಹಿಸಿ ಮಾತನಾಡಿ,ಆನೆಕಾಲು ರೋಗ ಸೊಳ್ಳೆಯಿಂದ ಹರಡುವಂತದ್ದು,ಒಬ್ಬರಿಂದ ಒಬ್ಬರಿಗೆ ಕಚ್ಚುವುದರಿಂದ ಈ ರೋಗ ಹರಡುತ್ತದೆ.ಆದ್ದರಿಂದ ಸರಕಾರ ಪ್ರತಿಯೊಬ್ಬರಿಗೂ ಡಿ.ಇ.ಸಿ ಮತ್ತು ಅಲ್ಫೆಂಡಾಜೋಲ್ ಮಾತ್ರೆಯನ್ನು ನುಂಗಬೇಕು,ಆದರೆ ಮಾತ್ರೆಯನ್ನು ಕಡ್ಡಾಯವಾಗಿ ಊಟ ಮಾಡಿದ ನಂತರವೇ ನುಂಗಬೇಕು ಅಲ್ಲದೆ ಗರ್ಭೀಣಿ ಮಹಿಳೆಯರು ಮತ್ತು ಎರಡು ವರ್ಷದ ಒಳಗಿನ ಮಕ್ಕಳು ಈ ಮಾತ್ರೆಗಳನ್ನು ನುಂಗಬೇಡಿ ಎಂದು ಸಲಹೆ ನೀಡಿದರು.

Contact Your\'s Advertisement; 9902492681

ಅಭಿಯಾನದ ಆರಂಭದಲ್ಲಿ ಆನೆಕಾಲು ರೋಗ ನಿರ್ಮೂಲನೆಯ ಕುರಿತು ಜನಜಾಗೃತಿ ಮೂಡಿಸಲು ವಾಹನಗಳ ಮೂಲಕ ಪ್ರಚಾರ ನಡೆಸಲಾಗುತ್ತಿದ್ದು,ಈ ವಾಹನಗಳಿಗೆ ನಗರಸಭೆ ಅಧ್ಯಕ್ಷರಾದ ಸುಜಾತಾ ವೇಣುಗೋಪಾಲ ಜೇವರ್ಗಿಯವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ (ತಾತಾ),ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ,ತಾಲೂಕು ಪಂಚಾಯತಿ ಇಒ ಅಮರೇಶ ಮೂಡಲದಿನ್ನಿ,ನಗರಸಭೆ ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ,ಶ್ರೀಪ್ರಭು ಕಾಲೇಜಿನ ಪ್ರಾಂಶುಪಾಲ ಹೆಚ್.ಎಸ್.ಹೊಸ್ಮನಿ,ಎಮ್.ಡಿ ವಾರಿಸ್,ಉಪ ಪ್ರಾಂಶುಪಾಲ ವೇಣುಗೋಪಾಲ ನಾಯಕ ಜೇವರ್ಗಿ,ತಹಸೀಲ್ ಸಿರಸ್ತೆದಾರ ಸೋಮನಾಥ ನಾಯಕ ಸೇರಿದಂತೆ ಆರೋಗ್ಯ ಇಲಾಖೆಯ ಅನೇಕ ಜನ ಸಿಬ್ಬಂದಿಗಳಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here