- # ಕೆ.ಶಿವು.ಲಕ್ಕಣ್ಣವರ
ರಾಮನಗರದಲ್ಲಿ ನಡೆದ ಕಾರ್ಯಕ್ರಮವೊಂದಲ್ಲಿ ವೇದಿಕೆ ಮೇಲೆಯೇ ಅಶ್ವತ್ಥ್ ನಾರಾಯಣ್ ಹಾಗೂ ಡಿ.ಕೆ.ಸುರೇಶ್ ಕೈ ಕೈ ಮಿಲಾಯಿಸಿಕೊಂಡ ಘಟನೆ ನಡೆಯಿತು. ಈ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ.
# ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದೆಯೇ ನಡೆದ ಘಟನೆಯೂ: ರಾಮನಗರ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹಾಗೂ ಸಂಸದ ಡಿ.ಕೆ. ಸುರೇಶ್ ವೇದಿಕೆಯಲ್ಲೇ ಕೈ ಕೈ ಮಿಲಾಯಿಸಿದ ಘಟನೆ ನಡೆಯಿತು.ರಾಮನಗರ ಜಿಲ್ಲಾಡಳಿತದಿಂದ ಡಿಸಿ ಕಚೇರಿ ಆವರಣದಲ್ಲಿ ನಿರ್ಮಿಸಿರುವ ಡಾ. ಬಿ ಆರ್ ಅಂಬೇಡ್ಕರ್ ಮತ್ತು ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲೇ ಈ ಘಟನೆ ನಡೆಯಿತು.
ಕಾರ್ಯಕ್ರಮದಲ್ಲಿ ಸಚಿವ ಡಾ.ಅಶ್ವತ್ಥ ನಾರಾಯಣ ಮಾತನಾಡುವ ಸಂದರ್ಭದಲ್ಲಿ ಉಪಯೋಗಿಸಿದ ಒಂದು ಪದ ಡಿ.ಕೆ.ಸುರೇಶ್ ಆಕ್ರೋಶಕ್ಕೆ ಕಾರಣವಾಯಿತು. ಅಶ್ವತ್ಥ ನಾರಾಯಣ ವಿರುದ್ಧ ರೊಚ್ಚಿಗೆದ್ದ ಡಿ.ಕೆ.ಸುರೇಶ್ ಅವರು ಮಾತನಾಡುತ್ತಿದ್ದ ಪೋಡಿಯಂ ಕಡೆ ಆಕ್ರೋಶದಿಂದ ಬಂದರು. ಈ ಸಂದರ್ಭದಲ್ಲಿ ಸಚಿವ ಅಶ್ವತ್ಥ ನಾರಾಯಣ ಕೂಡಾ ಮುಂದೆ ಬಂದರು. ಇಬ್ಬರು ಪರಸ್ವರ ಏರು ಧ್ವನಿಯಲ್ಲಿ ವಾಗ್ದಾದ ನಡೆಸಿ ಕೈ. ಕೈ. ಮಿಲಾಯಿಸುವ ಹಂತಕ್ಕೂ ತಲುಪಿತು. ಇದೇ ಸಂದರ್ಭದಲ್ಲಿ ಎಂಎಲ್ ಸಿ ರವಿ ಅವರು ಅಶ್ವತ್ಥ ನಾರಾಯಣ ಮಾತನಾಡುತ್ತಿದ್ದ ಮೈಕ್ ನ್ನು ಕಿತ್ತು ಎಸೆದರು. ಈ ಕೂಡಲೇ ಪೊಲೀಸರು ಮಧ್ಯಪ್ರವೇಶ ಮಾಡಿ ಪರಿಸ್ಥಿತಿಯನ್ನು ನಿಯಂತ್ರಣ ಮಾಡಿದರು.
ಸಚಿವ ಅಶ್ವತ್ಥ್ ನಾರಾಯಣ್ ಮಾತನಾಡುವಾಗ ವೇದಿಕೆ ಮುಂಭಾಗದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ, ನಾವು ಯಾರ ಜಮೀನಿಗೂ ಕೈ ಹಾಕಿಲ್ಲ. ಯಾಕೆ ಕೂಗಾಡ್ತೀರಾ? ಯಾವಾನೋ ಅವನು ಗಂಡಸು. ನಮಗೆ ಅಧಿಕಾರ ಬೇಕಿಲ್ಲ . ಜಿಲ್ಲೆಗೆ ವಂಚನೆ ಮಾಡೋರು ನಾವಲ್ಲ. ನಾವು ಬೇರೆಯವರ ಆಸ್ತಿಗೆ ಕೈ ಹಾಕಿಲ್ಲ ಎಂದರು. ಇದರಿಂದ ರೊಚಿಗಿದ್ದ ಡಿ.ಕೆ.ಸುರೇಶ್ ಹಾಗೂ ರವಿ ವಾಗ್ವಾದ ನಡೆಸಿದರು. ಏ ಗಂಡಸ್ ತನ ತೋರ್ಲಿಲಿ ಅವನು ಎಂದು ಸುರೇಶ್ ಜಗಳಕ್ಕಿಳಿದರು.
ಈ ಗಲಾಟೆ ಶರುವಾದ ಕೂಡಲೇ, ವೇದಿಕೆ ಎದುರು ಸಹ ಕೂಗಾಟ ಶುರುವಾಯ್ತು. ಗಲಾಟೆ ನಡುವೆ, ಮುಖ್ಯಮಂತ್ರಿ ಮಾತನಾಡಿ ನಾನು ಅಭಿವೃದ್ಧಿ ಮಾಡಲು ಬಂದಿದ್ದೇನೆ. ದಯವಿಟ್ಟು ಗಲಾಟೆ ಮಾಡಬೇಡಿ ಎಂದರು. ಕೆಲ ಹೊತ್ತಿನ ಬಳಿಕ ಸಂಸದ ಡಿ.ಕೆ.ಸುರೇಶ್ ಮಾತನಾಡುತ್ತಿದ್ದರೆ, ವೇದಿಕೆ ಮುಂಭಾಗ ಗಲಾಟೆ ನಡೆಯುತ್ತಲೇ ಇತ್ತು.
# ಡಿಕೆ ಸುರೇಶ್ ಧರಣಿಯೂ: ಸಚಿವ ಅಶ್ವತ್ಥ ನಾರಾಯಣ ಅವರ ಹೇಳಿಕೆಯಿಂದ ಆಕ್ರೋಶಗೊಂಡ ಡಿ.ಕೆ.ಸುರೇಶ್ ವೇದಿಕೆಯಲ್ಲೇ ಧರಣಿ ನಡೆಸಿದರು. ಜಟಾಪಟಿಯ ಬಳಿಕ ಆಕ್ರೋಶಗೊಂಡ ಡಿ.ಕೆ.ಸುರೇಶ್ ಹಾಗೂ ಬೆಂಬಲಿಗರು ವೇದಿಕೆಯಲ್ಲೇ ಧರಣಿ ನಡೆಸಿದರು. ವೇದಿಕೆಯ ಕೆಳಗಡೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಪರಸ್ಪರ ಧಿಕ್ಕಾರ ಕೂಗುತ್ತಲೇ ಇದ್ದರು.
# ಮೈಕ್ ಕಿತ್ತು ಬಿಸಾಡಿದ ಎಂಎಲ್‌ಸಿ ರವಿಯೂ: ಜಟಾಪಟಿಯ ಸಂದರ್ಭದಲ್ಲಿ ಮಧ್ಯಪ್ರವೇಶ ಮಾಡಿದ ಎಂ.ಎಲ್.ಸಿ ರವಿ ಅವರು ಮಾತನಾಡುವ ಮುಂದಾದರು. ಇದೇ ವೇಳೆ ಸಚಿವ ಅಶ್ವತ್ಥ ನಾರಾಯಣ ತಡೆದರು. ಈ ವೇಳೆ ಆಕ್ರೋಶಗೊಂಡ ಎಂ.ಎಲ್.ಸಿ ರವಿ ಅವರು ಮೈಕ್ ಕಿತ್ತು ಹಾಕಿದರು. ಈ ಸಂದರ್ಭದಲ್ಲಿ ಅಂಗರಕ್ಷಕರು ಮಧ್ಯಪ್ರವೇಶ ಮಾಡಿ ಪರಿಸ್ಥಿತಿ ನಿಯಂತ್ರಣ ಮಾಡಿದರು.
# ನಿಜವಾಗಿಯೂ ಅಲ್ಲಿ ನಡೆದಿದ್ದೇನು ಅಂತ ನೋಡೋಣ ಈಗ: ರಾಮನಗರದಲ್ಲಿ ನಡೆದ ಕಾರ್ಯಕ್ರಮದ ವೇಳೆ ಸಚಿವ, ಸಂಸದರ ನಡುವೆ ದೊಡ್ಡ ಗಲಾಟೆಯೇ ನಡೆದಿಯಿತು. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಮ್ಮುಖದಲ್ಲಿಯೇ ಬಿಜೆಪಿ ಸಚಿವ ಡಾ.ಅಶ್ವತ್ಥ್ ನಾರಾಯಣ ಹಾಗೂ ಸಂಸದ ಡಿ.ಕೆ.ಸುರೇಶ್ ಎದೆ ಉಬ್ಬಿಸಿಕೊಂಡು ಜೋರು ಜಗಳವಾಡಿಕೊಂಡಿದ್ದಾರೆ. ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣ ಹಾಗೂ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲು ಆಯೋಜಿಸಿದ್ದ ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಜರಿದ್ದರು. ಆದರೆ ಇದೇ ವೇಳೆಯಲ್ಲಿ ಸಚಿವ ಸಿ.ಎನ್.ಅಶ್ವತ್ಥ್ ನಾರಾಯಣ ಹಾಗೂ ಸಂಸದ ಡಿ.ಕೆ.ಸುರೇಶ್ ಕಿತ್ತಾಡಿಕೊಂಡಿದ್ದಾರೆ.
ಸಚಿವ ಅಶ್ವತ್ಥ್ ನಾರಾಯಣ ಭಾಷಣಕ್ಕೆ ಸಂಸದ ಡಿ.ಕೆ.ಸುರೇಶ್ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ‘ನಮ್ಮ ಕಾಲದಲ್ಲಿಯೇ ಅಡಿಗಲ್ಲು, ನಮ್ಮ ಕಾಲದಲ್ಲಿಯೇ ಉದ್ಘಾಟನೆ’, ‘ನಮ್ಮ ಸರ್ಕಾರದಲ್ಲಿ ಬೇರೆ ಸರ್ಕಾರದ ರೀತಿ ಅಲ್ಲ’ವೆಂದು ಅಶ್ವತ್ಥ್ ನಾರಾಯಣ ಭಾಷಣ ಮಾಡಿದ್ದರು. ರಾಜ್ಯದಲ್ಲಿನ ನೀರಾವರಿ ಯೋಜನೆ ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯ. ನಾವು ನಮ್ಮ ಅಭಿವೃದ್ಧಿಯನ್ನಷ್ಟೇ ಮಾಡಿಕೊಳ್ಳಲ್ಲ, ರಾಜ್ಯದ ಅಭಿವೃದ್ಧಿಯನ್ನು ಮಾಡುತ್ತೇವೆಂದು ಅಶ್ವತ್ಥ್ ನಾರಾಯಣ ಹೇಳಿದರು. ಇದಕ್ಕೆ ಡಿ.ಕೆ.ಸುರೇಶ್ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ಅಶ್ವತ್ಥ್ ನಾರಾಯಣ ಮತ್ತು ಡಿ.ಕೆ.ಸುರೇಶ್ ನಡುವೆ ಕಾರ್ಯಕ್ರಮದ ವೇದಿಕೆಯಲ್ಲಿಯೇ ಪರಸ್ಪರ ವಾಕ್ಸಮರವೇ ನಡೆಯಿತು. ಈ ವೇಳೆಯಲ್ಲಿ ಅಶ್ವತ್ಥ್ ನಾರಾಯಣ ಬಳಿಯಿದ್ದ ಮೈಕ್ ಅನ್ನು ಎಂ.ಎಲ್.ಸಿ ರವಿ ಹಿಡಿದು ಎಳೆದಾಡಿದರು.
# ಕಾರ್ಯಕ್ರಮದಲ್ಲಿ ನಡೆದಿದ್ದೇನು..?: ರಾಮನಗರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಅಡ್ಡಿಪಡಿಸಿದ್ದರು. ಸಂಸದ ಡಿ.ಕೆ.ಸುರೇಶ್ ಹಾಗೂ ಡಿ.ಕೆ.ಶಿವಕುಮಾರ್ ಪರ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗಿದ್ದರು. ಈ ವೇಳೆಯಲ್ಲಿ ಭಾಷಣ ಮಾಡುತ್ತಿದ್ದ ಸಚಿವ ಡಾ.ಅಶ್ವತ್ಥ್ ನಾರಾಯಣ, ‘ಒಬ್ಬ ಮುಖ್ಯಮಂತ್ರಿ ಬಂದಾಗ ನಮ್ಮ ಜಿಲ್ಲೆಯ ಗೌರವವವನ್ನು ಈ ರೀತಿ ಹಾಳು ಮಾಡುವುದಕ್ಕೆ ಈ ರೀತಿ ಕೂಗುವುದಾ? ಘೋಷಣೆ ಕೂಗುವುದಾ..? ಯಾರಪ್ಪ ಗಂಡು..? ಕೆಲಸದಲ್ಲಿ ತೋರಿಸಿ. ಯಾರೋ ನಾಲ್ಕು ಜನರನ್ನು ಕರೆದುಕೊಂಡು ಬಂದು ಕಾರ್ಯಕ್ರಮದಲ್ಲಿ ಗಲಾಟೆ ಮಾಡೋದಾ..? ನೀವು ಏನು ಕೆಲಸ ಮಾಡಿದ್ದೀರಿ ಎಂದು ತೊಡೆತಟ್ಟಿ ಹೇಳಿ ನೋಡೋಣ..? ನಾವು ಏನು ಮಾಡಿದ್ದೇವೆಂದು ಧರ್ಯವಾಗಿ ಹೇಳುತ್ತೇವೆ. ಈ ಜಿಲ್ಲೆಗೆ ವಂಚನೆ ಮಾಡಲು ಬಂದಿಲ್ಲ ನಾವು. ಜನರ ಮತ ತೆಗೆದುಕೊಳ್ಳಲು ಬಂದಿಲ್ಲ ನಾವು. ಜನರ ವಿಶ್ವಾಸ ಗಳಿಸಿ ಸೇವೆ ಸಲ್ಲಿಸಲು ಬಂದಿದ್ದೇವೆ ಅಂತಾ ಹೇಳಿದರು.
ಮುಂದುವರಿದು ಜೀವನಪರ್ಯಂತ ಕೇವಲ ಅಧಿಕಾರ… ಅಧಿಕಾರವೆನ್ನುವವರ ಮಧ್ಯೆ ಜನರ ಸೇವೆ ಮಾಡಲು ನಮ್ಮ ಸರ್ಕಾರ ಬಂದಿದೆ. ಜನಪರವಾಗಿ ಕೆಲಸ ಮಾಡುವವರನ್ನು ನಾಯಕ ಎನ್ನುತ್ತಾರೆ. ನಮಗೆ ನಾವು ಕೆಲಸ ಮಾಡಿಕೊಳ್ಳುವವರನ್ನು ಏನಂತಾರೆ..? ಮುಖ್ಯಮಂತ್ರಿ ಬಂದಾಗ ಅವರಿಗೆ ಅಗೌರವ ತೋರಿಸುತ್ತೀರಾ..? ಮುಖ್ಯಮಂತ್ರಿ ಸಹಕಾರ ಕೊಡಲು ಬಂದಿದ್ದಾರೆ, ರಾಜಕಾರಣಕ್ಕೆ ಅಲ್ಲ. ರಾಮನಗರ ಜಿಲ್ಲೆಯಲ್ಲಿ ನಮ್ಮ ಪ್ರತಿನಿಧಿ ಇಲ್ಲದಿದ್ದರೂ ಅಭಿವೃದ್ಧಿಯಿಂದ ಕೈಬಿಟ್ಟಿಲ್ಲ ಎಂದು ಸಚಿವ ಅಶ್ವತ್ಥ್ ನಾರಾಯಣ ಹೇಳಿದರು.
ಘಟನೆ ಬಳಿಕ ಸಂಸದ ಡಿ.ಕೆ.ಸುರೇಶ್ ವೇದಿಕೆಯಲ್ಲೇ ಧರಣಿ ಕುಳಿತರು. ನೋಡ ನೋಡುತ್ತಲೇ ವೇದಿಕೆ ಕೆಳಗೂ ಗಲಾಟೆ ಶುರುವಾಗಿತ್ತು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿದರು. ‘ರಾಜಕೀಯ ಇದ್ದದ್ದೇ, ಆದರೆ ನಾವೆಲ್ಲಾ ಜನಪರ ಕೆಲಸ ಮಾಡಬೇಕೇ ಹೊರತು ಭಿನ್ನಾಭಿಪ್ರಾಯ ದೊಡ್ಡದು ಮಾಡಬಾರದು’ ಅಂತಾ ಇಬ್ಬರಿಗೂ ಕಿವಿಮಾತು ಹೇಳಿದರು.
ಅಷ್ಟೊತ್ತಿಗಾಗಲೇ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿದ್ದರು. ಪರಿಸ್ಥಿತಿ ಈಗಲೂ ಬೂದಿ ಮುಚ್ಚಿದ ಕೆಂಡವಾಗಿದೆ..!