ವಿದ್ಯಾರ್ಥಿ ವೇತನ: ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ವಿಸ್ತರಣೆ

0
35

ಕಲಬುರಗಿ: ಪ್ರಸಕ್ತ 2021-22ನೇ ಸಾಲಿಗೆ ಅಲ್ಪಸಂಖ್ಯಾತರ  ಸಮುದಾಯದ ವಿದ್ಯಾರ್ಥಿಗಳಿಂದ ಕೆಳಕಂಡ ವಿದ್ಯಾರ್ಥಿ ವೇತನಕ್ಕಾಗಿ ನ್ಯಾಷನಲ್ ಸ್ಕಾಲಪ್‍ಶಿಪ್ ಪೋರ್ಟಲ್‍ದಲ್ಲಿ ಅನ್‍ಲೈನ್ ಮೂಲಕ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕವನ್ನು 2022ರ ಜನವರಿ 15 ರವರೆಗೆ ವಿಸ್ತರಿಸಲಾಗಿದೆ ಎಂದು ಕಲಬುರಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಪಸಂಖ್ಯಾತರ ಸಮುದಾಯದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ  ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳು ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕಾಗಿ (ಪಿಯುಸಿ ದಿಂದ ಪಿಜಿ) ಹಾಗೂ ಮೇರಿಟ್ ಕಮ್ ಮಿನ್ಸ್ ಸ್ಕಾಲರ್‍ಶಿಫ್‍ಗಾಗಿ (ಎಲ್ಲಾ ವೃತ್ತಿಪರ ಕೋರ್ಸ್‍ಗಳಿಗೆ) ಅರ್ಜಿ ಸಲ್ಲಿಕೆ ಕೊನೆಯ ದಿನಾಂಕವನ್ನು 2022ರ  ಜನವರಿ 15 ರವರೆಗೆ ವಿಸ್ತರಿಸಲಾಗಿದೆ.

Contact Your\'s Advertisement; 9902492681

ಹೆಚ್ಚಿನ ಮಾಹಿತಿಗಾಗಿ www.scholarship.gov.in, ಅಲ್ಪಸಂಖ್ಯಾತರ ಸಚಿವಾಲಯದ ಕೇಂದ್ರ ಸರ್ಕಾರದ ಪೋರ್ಟಲ್ www.minorityaffairs.gov.in ಹಾಗೂ  ಅಲ್ಪಸಂಖ್ಯಾತರ ನಿರ್ದೇಶನಾಲಯ   ಪೋರ್ಟಲ್ http://gokdom.kar.nic ಗೆ ಲಾಗಿನ್ ಆಗಿ  ಅರ್ಜಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಮಿನಿವಿಧಾನ ಸೌಧದ 4ನೇ ಮಹಡಿಯಲ್ಲಿರುವ ಜಿಲ್ಲಾ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರವನ್ನು ಹಾಗೂ ದೂರವಾಣಿ ಸಂಖ್ಯೆ: 08472-244006ಗೆ ಹಾಗೂ ಕೆಳಕಂಡ ತಾಲೂಕಾ ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿಗಳ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆಗೆ ಸಂಪರ್ಕಿಸಲು ಕೋರಲಾಗಿದೆ.

ಆಳಂದ ತಾಲೂಕು: ಮೊಬೈಲ್ ಸಂಖ್ಯೆ 9449785047, ಅಫಜಲಪೂರ-ಮೊಬೈಲ್ ಸಂಖ್ಯೆ 7899755427. ಚಿಂಚೋಳಿ-ಮೊಬೈಲ್ ಸಂಖ್ಯೆ 8722326201, ಸೇಡಂ-ಮೊಬೈಲ್ ಸಂಖ್ಯೆ 7760680162, ಚಿತ್ತಾಪೂರ-ಮೊಬೈಲ್ ಸಂಖ್ಯೆ 9741168681, ಜೇವರ್ಗಿ- ಮೊಬೈಲ್ ಸಂಖ್ಯೆ 9535775141 ಹಾಗೂ ಕಲಬುರಗಿ- ಮೊಬೈಲ್ ಸಂಖ್ಯೆ 7899755427 ಗಳಿಗೆ ಸಂಪರ್ಕಿಸಲು ಕೋರಲಾಗಿದೆ.

ವಿದ್ಯಾಸಿರಿ ಯೋಜನೆ: ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ವಿಸ್ತರಣೆ

ಕಲಬುರಗಿ: ಪ್ರಸಕ್ತ 2021-22ನೇ ಸಾಲಿಗೆ ವಿದ್ಯಾಸಿರಿ ಯೋಜನೆಯಡಿ  ಅಲ್ಪಸಂಖ್ಯಾತರ ಸಮುದಾಯದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಜೈನ್ ಹಾಗೂ ಪಾರ್ಸಿ ಜನಾಂಗಕ್ಕೆ ಸೇರಿದ ವಿದ್ಯಾರ್ಥಿಗಳು ಸರ್ಕಾರಿ ನಿಲಯದಲ್ಲಿ ಪ್ರವೇಶ ಲಭ್ಯವಾಗದೇ ಇದ್ದಲ್ಲಿ ಅಂತಹ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮುಂದುವರೆಸಲು ವಿದ್ಯಾಸಿರಿ ಯೋಜನೆಯಡಿ  ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕವನ್ನು 2022ರ ಜನವರಿ 10 ರವರೆಗೆ ವಿಸ್ತರಿಸಲಾಗಿದೆ ಎಂದು ಕಲಬುರಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.

ಸರಕಾರಿ ನಿಯಮದನ್ವಯ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದವರಾಗಿರಬೇಕು. ವ್ಯಾಸಂಗ ಮಾಡುವ ಕಾಲೇಜಿನಿಂದ ಕನಿಷ್ಠ 5 ಕಿ.ಮೀ. ದೂರ ವಿರಬೇಕು.  ವಿದ್ಯಾರ್ಥಿಗಳು ಕಡ್ಡಾಯವಾಗಿ ಸೇವಾ ಸಿಂಧುದಲ್ಲಿ ಅನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಈಗಾಗಲೇ ಜಿಲ್ಲಾ ಕಚೇರಿಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಪುನಃ ಸೇವಾ ಸಿಂಧು  ಅನ್‍ಲೈನ್ ಮೂಲಕ ಅರ್ಜಿಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ನಗರಾಭಿವೃಧ್ಧಿ ಪ್ರಾಧಿಕಾರದ ಮೊದಲನೇ ಮಹಡಿಯಲ್ಲಿರುವ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಗಳ ಕಚೇರಿಯನ್ನು ಹಾಗೂ  ದೂರವಾಣಿ ಸಂಖ್ಯೆ 08472-244006, 247260 ಗಳಿಗೆ ಹಾಗೂ  https://dom.karnataka.gov.in/kalaburagi/public ವೆಬ್‍ಸೈಟ್‍ನ್ನು  ಹಾಗೂ  ಆಳಂದ ತಾಲೂಕು: ಮೊಬೈಲ್ ಸಂಖ್ಯೆ 9449785047, ಅಫಜಲಪೂರ- 7899755427. ಚಿಂಚೋಳಿ-8722326201, ಸೇಡಂ-7760680162, ಚಿತ್ತಾಪೂರ- 9741168681, ಜೇವರ್ಗಿ-9535775141 ಹಾಗೂ ಕಲಬುರಗಿ-7899755427 ಗಳಿಗೆ ಸಂಪರ್ಕಿಸಲು ಕೋರಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here