ಶಹಾಬಾದ: ಪ್ರಧಾನಿ ಮೋದಿಗೆ ಸೂಕ್ತ ಭದ್ರತೆ ನೀಡದ ಪಂಜಾಬ್ ಸರ್ಕಾರದ ಕ್ರಮವನ್ನು ಖಂಡಿಸಿ ಗುರುವಾರ ಸಾಯಂಕಾಲ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರು ಪಂಜಿನ ಮೆರವಣಿಗೆ ನಡೆಸಿ, ನೆಹರು ವೃತ್ತದಲ್ಲಿ ಜಮಾಯಿಸಿದ್ದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ವಿರುದ್ಧ ಘೋ?ಣೆ ಕೂಗಿ ಪ್ರತಿಭಟನೆ ನಡೆಸಿದರು.
ಬಿಜೆಪಿ ಯುವಮೋರ್ಚಾ ಅಧ್ಯಕ್ಷ ದಿನೇಶ ಗೌಳಿ ಮಾತನಾಡಿ,ಪಂಜಾಬಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಮನದ ವೇಳೆ ಭದ್ರತಾ ವೈಫಲ್ಯ ಆಗಿರೋದು ಅಕ್ಷಮ್ಯ ಅಪರಾಧ. ಪ್ರಧಾನಿ ಸ್ಥಾನಕ್ಕೆ ಗೌರವ ನೀಡಿಯಾದ್ರೂ ಸೂಕ್ತ ಭದ್ರತೆ ನೀಡಬೇಕಿತ್ತು. ಕಾಂಗ್ರೆಸ್ ಸರ್ಕಾರ ತನ್ನ ಸಣ್ಣತನದಿಂದ ತನ್ನ ಮರ್ಯಾದೆ ಹಾಳು ಮಾಡಿಕೊಂಡಿದೆ. ಕೂಡಲೇ ಸಿಎಂ ಸ್ಥಾನಕ್ಕೆ ಪಂಜಾಬ್ ಮುಖ್ಯಮಂತ್ರಿ ಚರಣ್ಜೀತ್ ಸಿಂಗ್ ರಾಜೀನಾಮೆ ನೀಡುವಂತೆ ಆಗ್ರಹಿಸಿದರು.
ಬಿಜೆಪಿ ಮುಖಂಡ ಚಂದ್ರಕಾಂತ ಗೊಬ್ಬೂರಕರ್ ಮಾತನಾಡಿ, ಪ್ರಧಾನಿ ಸ್ಥಾನಕ್ಕೆ ಗೌರವ ಕೊಟ್ಟು ಕಾಂಗ್ರೆಸ್ ಸರ್ಕಾರ ಸೂಕ್ತ ಭದ್ರತೆ ಕೈಗೊಳ್ಳಬೇಕಿತ್ತು. ಆದರೆ ಕಾಂಗ್ರೆಸ್ ಸೇಡಿನ ರಾಜಕಾರಣ ಮಾಡಿ ಪ್ರಧಾನಿಗೆ ಅಗೌರವ ಸೂಚಿಸಿದೆ ಅಂತ ಶವಯಾತ್ರೆ ನಡೆಸಿ ಕಿಡಿಕಾರಿದ್ರು. ಪ್ರಧಾನಿ ಮೋದಿಗೆ ಅವಮಾನ ಮಾಡೋ ಸಲುವಾಗಿಯೇ ಪಂಜಾಬ್ ಸರ್ಕಾರ ಈ ರೀತಿ ವರ್ತಿಸಿದೆ.
೨೦ ನಿಮಿ?ಗಳ ಕಾಲ ಓರ್ವ ಪ್ರಧಾನ ಮಂತ್ರಿಯನ್ನ ರಸ್ತೆಯಲ್ಲಿ ನಿಲ್ಲಿಸಿದ್ದು ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ. ಇಂತಹ ಸನ್ನಿವೇಶದಲ್ಲೂ ಸಹ ಕಾಂಗ್ರೆಸ್ ಮುಖಂಡರು ತಪ್ಪನ್ನು ಒಪ್ಪಿಕೊಳ್ಳದೇ ಖಾಲಿ ಚೇರ್ ಇದ್ದಿದ್ದರಿಂದ ಹಿಂತಿರುಗಿ ಹೋಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಯುವ ಮೋರ್ಚಾದ ಕಾರ್ಯದರ್ಶಿ ಮಲ್ಲಿಕಾರ್ಜುನ ಗೊಳೇದ, ಪ್ರಧಾನ ಕಾರ್ಯದರ್ಶಿಗಳಾದ ರಾಕೇಶ್ ಮಿಶ್ರಾ, ಮಹೇಶ್ ಯಲೇರಿ, ಜಿಲ್ಲಾ ಕಾರ್ಯದರ್ಶಿಗಳಾದ ಜ್ಯೋತಿ ಶರ್ಮ, ಮಂಡಲ ಉಪಾಧ್ಯಕ್ಷ ಮಹದೇವ್ ಗೋಬ್ಬೂರಕರ, ಪ್ರಧಾನ ಕಾರ್ಯದರ್ಶಿಗಳಾದ ಸಿದ್ರಾಮ ಕುಸಾಳೆ, ಮಹಿಳಾ ಮೋರ್ಚಾ ಅಧ್ಯಕ್ಷರಾದ ಜಯಶ್ರೀ ಸೂಡಿ, ಪ್ರಮುಖರಾದ ಚಂದ್ರಕಾಂತ ಗೋಬ್ಬೂರಕರ, ಬಸವರಾಜ ಬಿರಾದಾರ, ಸಂಜಯ ವಿಟಕರ, ಆಶಿ? ಮಂತ್ರಿ, ಬಾಬು ಕೋಬಾಳ, ಪ್ರಬು ಪಾಟೀಲ, ಅಮೀತ ಠಾಕೂರ್, ರೇವಣಸಿದ್ದ ಮತ್ತಿಮಡು, ವೀರೇಶ ಬಂದಳ್ಳಿ, ಕಿರಣ ದಂಡಗುಲಕರ, ಶರಣು ಕೌಲಗಿ, ವಿನಾಯಕ ಗೌಳಿ, ಸತೀ? ರಾಪನೂರ, ಶ್ರೀನಿವಾಸ ನೇದಲಗಿ, ಅಮುಲ ಪೊದ್ದಾರ, ಸಂಗಮೇಶ ಪಟ್ಟೇದಾರ, ಅಂಬ್ರೇ? ಕಲ್ಯಾಣಿ, ಅನಿಲ ಕಲ್ಯಾಣಿ, ವಿನೋದ ಕಟ್ಟಿ, ಸುರೇಂದ್ರ ಗೌಳಿ, ಆನಂದ ಕುಂಬಾರ, ಸುಭಾ? ಅವರಾದಿ, ಅಭಯ ಯಾದವ, ಮಹೇಶ್ ಪ್ಯಾರಸಬಾದಿ, ಮಹೇಶ್, ವಿರೇಶಿ ನಾಲವಾರ, ರಜನಿಕಾಂತ್ ಸುರ್ಯವಂಶಿ, ಸಾಯಬಣ್ಣ, ಪರಿಟ, ಸಿದ್ದು ಮಾಣಿಕ ಸೇರಿದಂತೆ ಇತರರು ಇದ್ದರು.