ದಾವಣಗೆರೆ : ‘ಚಂದ್ರಬಿಂಬ’ ಕೃತಿ ಬಿಡುಗಡೆ

0
14

ದಾವಣಗೆರೆ: ಹೆಸ್ಕುಂದ ಚಂದ್ರಶೇಖರ ಅಡಿಗ ಅವರ ಐವತ್ತು ವರ್ಷಗಳ ಕಲಾ ಹಾಗೂ ಸಾಂಸ್ಕೃತಿಕ ಸೇವೆ ಅವಿಸ್ಮರಣೀಯವಾಗಿದೆ ಎಂದು ಮೈಸೂರಿನ ಸಾಹಿತಿ ಡಾ.ಕಬ್ಬಿನಾಲೆ ವಸಂತ ಭಾರದ್ವಜ್ ಅಭಿಪ್ರಾಯಪಟ್ಟರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಹೆಸ್ಕುಂದ ಚಂದ್ರಶೇಖರ ಅಡಿಗ ಸ್ಮರಣೆಯ ‘ಚಂದ್ರಬಿಂಬ’ ಕೃತಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

Contact Your\'s Advertisement; 9902492681

‘ಚಂದ್ರಶೇಖರ ಅಡಿಗರು ಹೋಟೆಲ್‌ ಉದ್ಯಮದ ಮೂಲಕ ಅನ್ನವನ್ನು ಅನ್ನಪೂರ್ಣೇಶ್ವರಿ ಎಂದು ಪರಿಭಾವಿಸಿದ್ದರು. ಉದ್ಯಮದಲ್ಲಿ ಕಾಯಕ ನಿಷ್ಠೆ, ಕರ್ಮಯೋಗ ಪಾಲಿಸಿರುವುದರ ಜೊತೆಗೆ ಸಂಸಾರಕ್ಕೂ ಅರ್ಥ ತಂದುಕೊಟ್ಟಿದ್ದಾರೆ. ಅಡಿಗರ ಬಳಿ ಕೆಲಸ ಮಾಡುತ್ತಿದ್ದ ಕಾರ್ಮಿಕರೊಬ್ಬರು ಮೆಚ್ಚುಗೆಯ ಲೇಖನ ಬೆರೆದಿರುವುದು ವಿಶೇಷವಾಗಿದೆ. ಅರ್ಥಪೂರ್ಣವಾಗಿ ಅವರನ್ನು ನೆನಪಿಸಿಕೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.

ಜಾನಪದ ತಜ್ಞ ಡಾ.ಎಂ.ಜಿ. ಈಶ್ವರಪ್ಪ, ‘ಚಂದ್ರಶೇಖರ ಅಡಿಗರು ಹೋಟೆಲ್‌ ಉದ್ಯಮದ ಜೊತೆಗೆ ಸಂಸ್ಕೃತಿಯನ್ನು ಹೊಟ್ಟೆಗೆ ಹಾಗೂ ಮೆದುಳಿಗೆ ಆಹಾರವಾಗಿ ನೀಡಿದ್ದಾರೆ. ಜನರ ಬಾಯಿಯೊಳಗೆ ಇನ್ನೂ ಉಳಿದವರು ಅಮರರಾಗಿದ್ದಾರೆ’ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷ ಬಿ.ವಾಮದೇವಪ್ಪ ಅಧ್ಯಕ್ಷತೆ ವಹಿಸಿದ್ದರು. ಕಲಾವಿದೆ ಆಶಾ ಶ್ರೀನಿವಾಸ್ ಆಚಾರ್ಯ ಹಾಜರಿದ್ದರು. ಶ್ರೀಮತಿ ಚಂದ್ರಶೇಖರ ಅಡಿಗ ಸ್ವಾಗತಿಸಿದರು. ಅದಿತಿ ಆಚಾರ್ಯ ಹಾಗೂ ಅಭಿರಾಮ ಆಚಾರ್ಯ ಭರತನಾಟ್ಯ ಕಾರ್ಯಕ್ರಮ ನಡೆಸಿಕೊಟ್ಟರು. ದೀಪಾ ಅಡಿಗ ಪ್ರಾರ್ಥಿಸಿದರು. ಸಾಲಿಗ್ರಾಮ ಗಣೇಶ ಶೆಣೈ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here