ಮಹಿಳೆಯರು ಲಿಂಗತಾರತಮ್ಯ ಮೀರಿ ಬೆಳೆಯಲಿ

0
5

ಬಾಗಲಕೋಟೆ: ಮಹಿಳೆಯರು ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕವಾಗಿ ಎಲ್ಲ ರೀತಿಯಿಂದಲೂ ಸಮಾನತೆ ಸಾಧಿಸುವ ಅಗತ್ಯವಿದೆ. ಈಚೆಗೆ ಮಹಿಳೆಯರನ್ನು ನೋಡುವ ದೃಷ್ಟಿಕೋನ ಬದಲಾಗಿದೆ ಎಂದು ನ್ಯಾಯಾಧಿಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೇಮಲತಾ ಹುಲ್ಲೂರ ಹೇಳಿದರು.

ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಕಾಲೇಜಿನಲ್ಲಿ ಮಹಿಳಾ ಸಬಲೀಕರಣ ಘಟಕ ಹಾಗೂ ಐಕ್ಯೂಎಸಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Contact Your\'s Advertisement; 9902492681

ಲಿಂಗ ತಾರತಮ್ಯ ಮೀರಿ ಮಹಿಳೆಯರು ಬೆಳೆಯಬೇಕು. ಬಾಲ್ಯ ವಿವಾಹಗಳು ಹೆಚ್ಚುತ್ತಲೆ ಇವೆ. ಉಚಿತ ಶಿಕ್ಷಣ ಇದ್ದರೂ ಸಹ ಸಾಕಷ್ಟು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಬಾಲ ಕಾರ್ಮಿಕರು ಹೆಚ್ಚುತ್ತಿದ್ದಾರೆ. ಮಹಿಳೆ ಎಂತಹ ಉನ್ನತ ಹುದ್ದೆಯಲ್ಲಿದ್ದರೂ ಮನೆಗೆಲಸ ಮಾಡಲೇಬೇಕಾದ ಅನಿವಾರ್ಯತೆ ಇದೆ. ಕಾನೂನು ವ್ಯವಸ್ಥೆ ಎಷ್ಟೇ ಸುಧಾರಿಸಿದರೂ ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚುತ್ತಿವೆ. ಹೆಣ್ಣು ಮಕ್ಕಳಿಗಾಗಿ ಸರ್ಕಾರ ಹಲವು ಯೋಜನೆ ಜಾರಿಗೊಳಿಸಿದೆ. ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡುಮುಂದೆ ಬರಬೇಕು ಎಂದರು.

ಭಾವನಾತ್ಮಕವಾಗಿ ಹೆಣ್ಣು ಹೆಚ್ಚು ಬುದ್ದಿವಂತಳು ಮತ್ತು ಸೂಕ್ಷ್ಮಸಂವೇದನೆ ಉಳ್ಳವಳು. ಎಲ್ಲ ಕ್ಷೇತ್ರಗಳಲ್ಲೂ ನಮಗೆ ಅವಕಾಶಗಳಿವೆ ಅವುಗಳನ್ನು ಬಳಸಿಕೊಳ್ಳಬೇಕು. ಸಮಸ್ಯೆಗಳು ಎಲ್ಲರಿಗೂ, ಎಲ್ಲ ವೃತ್ತಿಯಲ್ಲೂ ಸಾಮಾನ್ಯವೇ ಆದರೆ ಅದೆಲ್ಲವನ್ನು ಮೀರಿ ಜಯಿಸುವ ಶಕ್ತಿ ನಮಗೆ ಬರಬೇಕು ಎಂದರು. ಪ್ರಾಚಾರ್ಯ ಡಾ| ವಿ.ಎಸ್‌. ಕಟಗಿಹಳ್ಳಿಮಠ ಅಧ್ಯಕ್ಷತೆ ವಹಿಸಿದ್ದರು.

ಶಾರದಾ ಪವಾರ ಪ್ರಾರ್ಥಿಸಿದರು. ಮಹಿಳಾ ಸಬಲೀಕರಣ ಘಟಕದ ಸಂಯೋಜಕ ಡಾ| ಎಂ.ಎಸ್‌. ಚವ್ಹಾಣ ಪರಿಚಯಿಸಿದರು. ಪ್ರೊ| ಜೆ.ಎಸ್‌. ಲಾಗಲೋಟಿ ನಿರೂಪಿಸಿದರು. ಪ್ರೊ| ಡಿ.ಎಚ್‌. ಪಾಟೀಲ ವಂದಿಸಿದರು. ಪ್ರೊ| ಎಂ.ಎಂ. ಹಿರೇಮಠ, ಪ್ರೀತಿ ಬಿರಾದಾರ, ವೀಣಾ ಕಲ್ಮಠ, ವಿ.ಎಸ್‌. ಸಾಲಿಮಠ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here