ಕೇಂದ್ರ ಸರಕಾರದ ಪ್ರತಿಭಾನ್ವೇಷಣೆ: ಶರಣಬಸವ ಶಾಲೆ ವಿದ್ಯಾರ್ಥಿಗಳ ಆಯ್ಕೆ

0
9

ಸುರಪುರ: 2021-22ನೇ ಸಾಲಿನ ನಡೆದ ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಇಲಾಖೆಯವರು ನಡೆಸಿರುವ (Innovation Science Pursuit for Inspired Research) ಪ್ರತಿಭಾನ್ವೇಷಣೆಯ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಆಯ್ಕೆಯನ್ನು ಆನ್ ಲೈನ್‍ನಲ್ಲಿ ಕರೆಯಲಾಗಿದ್ದು. ಅದರಲ್ಲಿ ನಮ್ಮ ಶರಣಬಸವ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಹಸನಾಪುರ ಸುರಪುರದ ಒಟ್ಟು 5 ವಿದ್ಯಾರ್ಥಿಗಳು ಪ್ರತ್ಯೇಕInnovation Idea ಗಳನ್ನು ಆನ್ ಲೈನ್‍ನಲ್ಲಿ ಭರ್ತಿಮಾಡಿರುತ್ತಾರೆ. ಭೂಮಿಕಾ ಶಂಭುಲಿಂಗ ಶಾಬಾದಿ (Accident reducing zone by IR-Sensor)ಮತ್ತು ಪ್ರಚೇತ್ ಪ್ರಕಾಶ ಅಂಬುರೆ(Black line following car)ಈ ಇಬ್ಬರು ವಿದ್ಯಾರ್ಥಿಗಳು ನೀಡಿರುವ (Innovation Idea) ಗಳಲ್ಲಿ ಆಯ್ಕೆಯಾಗುವ ಮೂಲಕ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಈ ಎಲ್ಲಾ ಮಕ್ಕಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಪೂಜ್ಯ. ಡಾ.ಶರಣಬಸವಪ್ಪ ಅಪ್ಪಾ, ಕಾರ್ಯದರ್ಶಿಗಳಾದ ಶರಣಬಸಪ್ಪ ವ್ಹಿ ನಿಷ್ಠಿ, ಜಂಟಿ ಕಾರ್ಯದರ್ಶಿಗಳಾದ ದೊಡ್ಡಪ್ಪ.ಎಸ್.ನಿಷ್ಠಿ, ಹಾಗೂ ಮುಖ್ಯ ಗುರುಗಳಾದ ರತ್ನಮ್ಮ ಮತ್ತು ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here