Monday, July 15, 2024
ಮನೆಬಿಸಿ ಬಿಸಿ ಸುದ್ದಿಮಕ್ಕಳಲ್ಲಿರುವ ಶಿಸ್ತು ನಗು ನೋಡಿದರೆ ಸಾಕು ಶಿಕ್ಷಕರ ಪಾತ್ರ ಗೋಚರಿಸುತ್ತದೆ: ಕಸಾಪ ಅಧ್ಯಕ್ಷ ತೇಗಲತಿಪ್ಪಿ

ಮಕ್ಕಳಲ್ಲಿರುವ ಶಿಸ್ತು ನಗು ನೋಡಿದರೆ ಸಾಕು ಶಿಕ್ಷಕರ ಪಾತ್ರ ಗೋಚರಿಸುತ್ತದೆ: ಕಸಾಪ ಅಧ್ಯಕ್ಷ ತೇಗಲತಿಪ್ಪಿ

ಕಲಬುರಗಿ: ಶಾಲೆಗೆ ಹೋಗಿ ಮಕ್ಕಳಿಗೆ ಯಾವ ರೀತಿಯಾಗಿ ಶಿಕ್ಷಣ ಮಾಡುತ್ತಿದ್ದಾರೆ ಎಂದು ಕೇಳುವುದು ಅವಶ್ಯಕತೆ ಇಲ್ಲ ಮಕ್ಕಳಲ್ಲಿರುವ ಶಿಸ್ತು ನಗು ನೋಡಿದರೆ ಸಾಕು ಅಲ್ಲಿನ ಶಿಕ್ಷಕರು ಯಾವ ರೀತಿಯಾಗಿ ಪಾಠ ಮಾಡುತ್ತಿದ್ದಾರೆ ಎಂದು ಮಕ್ಕಳ ಮುಖದಲ್ಲಿ ಕಾಣಬಹುದು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರದ ವಿಜಯಕುಮಾರ ಪಾಟೀಲ್ ತೇಗಲತಿಪ್ಪಿ ಹೇಳಿದ್ದರು.

ಅವರು ನಗರದ ದಕ್ಷಿಣ ಮತಕ್ಷೇತ್ರದ ಸಿರನೂರು ಗ್ರಾಮದ ಭಾರತೀಯ ವಿದ್ಯಾ ಮಂದಿರದಲ್ಲಿ ಮಕ್ಕಳ ಸಾಂಸ್ಕೃತಿಕ ಉತ್ಸವ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿದ ಅವರು, ಹಣಗಳಿಸುವುದಕ್ಕೆ ಹುಟ್ಟಿಕೊಂಡಿರುವ ಕೆಲ ಶಿಕ್ಷಣ ಸಂಸ್ಥೆಗಳು ಒಂದು ಕಡೆಯಿದ್ದಾರೆ ಸಂಸ್ಕಾರ ಬರಿತ ಶಿಕ್ಷಣ ಕೊಡುವಂತಹ, ವಿಶೇಷವಾದ ಸಂಸ್ಕೃತಿಕ ಶಿಕ್ಷಣ ಬಿತ್ತನೆ ಮಾಡುವಂತಹ ಸಂಸ್ಥೆ ಭಾರತೀಯ ವಿದ್ಯಾ ಮಂದಿರ ಮಾಡುತ್ತಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಎ.ಬಿ.ವಿ.ಪಿ. ರಾಷ್ಟ್ರೀಯ ಉಪಾಧ್ಯಕ್ಷ ಮತ್ತು ಹಿಂಗುಲಾಂಬಿಕಾ ಆಯುರ್ವೇದಿಕ್ ಕಾಲೇಜನ

ಪ್ರಾಂಶುಪಾಲರದ ಡಾ.ಅಲ್ಲಮಪ್ರಭು ಗುಡ್ಡಾ, ಜೆ.ಇ.ಇ. ಸೋಸೈಟಿ ಸಂಸ್ಥಾಪಕ ಅಧ್ಯಕ್ಷೆ ಸಂಧ್ಯಾರಾಣಿ ಪಾಟೀಲ, ಜೆ.ಇ.ಇ. ಸೋಸೈಟಿಯ ಸಂಸ್ಥಾಪಕ ಚೇರಮನ್ ಚಂದ್ರಕಾಂತ ಪಾಟೀಲ, ಕಲಬುರಗಿ ಸರಕಾರಿ ಮೆಟ್ರಿಕಪೂರ್ವ ಬಾಲಕಿಯರ ವಸತಿ ನಿಲಯದ ಮೇಲ್ವಿಚಾರಕಿಯಾದ ಅಶ್ವಿನಿ ಹಡಪದ SBI Bank Asst. Manager ವಿಶಾಲ ಜಿ. ಖಾನಾಪೂರ, ರಾಜಶೇಖರ್ ಗುಡ್ಡಾ, ಶಾಲೆಯ ಸಿಬ್ಬಂದಿಯಾದ ಸೂರ್ಯಕಾಂತ ವೀರಶೆಟ್ಟಿ, ಸಿದ್ದರಾಮ ಪಾಟೀಲ್, ಶೋಭಾ, ರೂಪಪಾಟೀಲ್ ಸೇರಿದಂತೆ ಇತರರು ಇದ್ದರು.

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular