ಮಾಲೂರು: ತೊರ‍್ನಹಳ್ಳಿ ಗ್ರಾಮದ ಶ್ರೀ ಸಪ್ಪಲಾಂಭ ಹಾಗೂ ಭೀಮೇಶ್ವರಸ್ವಾಮಿ ಜಾತ್ರಾ ಮಹೋತ್ಸವವು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಕೋವಿಡ್-೧೯ರ ಹಿನ್ನಲೆಯಲ್ಲಿ ಜಾತ್ರೆ ಕಾರ್ಯಕ್ರಮವನ್ನು ಸ್ಥಗಿತಗೊಳಿಸಲಾಗಿದೆ ಎಂದು ತಹಶಿಲ್ದಾರ್ ಕೆ.ರಮೇಶ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇತ್ತಿಚಿನ ದಿನಗಳಲ್ಲಿ ಕೋರೊನ ೩ನೇ ಅಲೆಯು ಹೆಚ್ಚಾಗುತ್ತಿರುವ ಹಾಗೂ ಒಮಿಕ್ರಾನ್ ವೈರೆಸ್ ಹರಡುತ್ತಿರುವ ಕಾರಣ ಗ್ರಾಮದಲ್ಲಿ ನಡೆಯುತ್ತಿದ್ದ ಸಪ್ಪಲಾಂಭ ಹಾಗೂ ಭೀಮೇಶ್ವರಸ್ವಾಮಿ ಜಾತ್ರಾ ಮಹೋತ್ಸವವು ಕಾರ್ಯಕ್ರಮವನ್ನು ಸ್ಥಗಿತಗೊಳಿಸಿದ್ದು, ಸಾರ್ವಜನಿಕರು ಎಚ್ಚರ ವಹಿಸಿ ದೇವಾಲಯಕ್ಕೆ ದೇವರ ದರ್ಶನಕ್ಕೆ ಮಾತ್ರ ಅವಕಾಶವನ್ನು ನೀಡಿದ್ದು.
ದೇವಾಲಯಕ್ಕೆ ಆಗಮಿಸು ಭಕ್ತಾಧಿಗಳು ಮಾಸ್ಕ್, ಸ್ಯಾನಿಟೈಸರ್ ಬಳಸಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಹೋಗುಬೇಕು, ಇಲ್ಲವಾದಲ್ಲಿ ದಂಡವನ್ನು ವಿಧಿಸಲಾಗುವುದು, ಜಾತ್ರೆಯನ್ನು ಸ್ಥಗಿತಗೊಳಿಸಿರುವುದರಿಂದ ನಾಗರೀಕರು ಜಾತ್ರೆಗೆ ಬರಬಾರದು ಎಂದು ಸಾರ್ವಜನಿಕರ ಪ್ರಕಟಣೆಯನ್ನು ಹೊರಡಿಸಲಾಗಿದೆ ಎಂದು ತಿಳಿಸಿರುತ್ತಾರೆ.