ಕಲಬುರಗಿ: ದಕ್ಕನ ಭಾಗದ ಪ್ರಸಿದ್ಧ ಸೂಫಿ ಸಂತರೊಬ್ಬರಲ್ಲಿ ದಿಗ್ಗಜ ಸೂಫಿ ಎಂದೆ ಖ್ಯಾತರಾದ ಹಜರತ್ ಖ್ವಾಜಾ ಬಂದೇ ನವಾಜ್ (ರ.ಅ) ಅವರ 615ನೇ ಉರುಸ್ ಸಂಭ್ರಮ ನಡೆಯಲ್ಲಿದ್ದು, ಇಂದು ಮಧ್ಯಹ್ನದಂದು ನಗರದ ಉದ್ಯಾನವನದಿಂದ ಗಂಧದ ಮೇರವಣಿಗೆ ಕಾರ್ಯಕ್ರಮ ಜರುಗಲಿದೆ.
ನಾಳೆ ಖವಾಲಿ, ಚಿರಾಗ್ (ದಿಪಾಲಂಕಾರ) ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಸಮಿತಿ ತಿಳಿಸಿದೆ. ಉರುಸ್ ಅಂಗವಾಗಿ ದರ್ಗಾದ ಸಮಿತಿಯಿಂದ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ವಿವಿಧ ಕಡೆಯಿಂದ ಬರುವ ಭಕ್ತಾದಿಗಳಿಗೆ ಬಸ್ ಸೌಕರ್ಯ ಸೇರಿಂದತೆ ಮುಂತಾದ ಮುನ್ನೆಚರಿಕೆ ಕ್ರಮವಾಗಿ ತಯಾರಿ ಮಾಡಿಕೊಳಲಾಗಿದೆ ಎಂದು ದರ್ಗಾದ ಸಮಿತಿ ತಿಳಿಸಿದೆ.
ಪ್ರತಿ ವರ್ಷ ಹೈದಾರಾಬಾದ್ ಮೂಲದಿಂದ ಅತಿ ಹೆಚ್ಚು ಭಕ್ತರು ಆಗಮಿ ದರ್ಗಾದ ಉರುಸ್ ನಲ್ಲಿ ಪಾಲ್ಗೊಳಲಿದ್ದು, ಎರಡು ಪ್ರತ್ಯೇಕ ರೈಲುಗಳು ಬೀಡುಗಡೆ ಮಾಡಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 19 ರಿಂದ 21ರ ವರೆಗೆ ಈ ಎರಡು ವಿಶೇಷ ರೈಲುಗಳು ಹೈದಾರಾಬಾದ್ ದಿಂದ ಕಲಬುರಗಿ ಹಾಗೂ ಕಲಬುರಗಿಯಿಂದ ಹೈದಾರಾಬಾದ್ ಮಾರ್ಗವಾಗಿ ಚಲಿಸಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.