ಸ್ವಾಮಿ ವಿವೇಕಾನಂದರ ೧೫೯ನೇ ಜಯಂತಿ

0
7

ಮಾಲೂರು: ಶಾಂತಿ ಮತ್ತು ಪ್ರೀತಿಯ ತಳಹದಿಯಲ್ಲಿ ನಿರ್ಮಾಣವಾಗಿರುವ ಭಾರತದ ಆಧ್ಯಾತ್ಮಿಕ ಸಂಸ್ಕೃತ ಮುಖ್ಯವೆಂದು ಇಡೀ ವಿಶ್ವಕ್ಕೆ ಸಾರಿದ ಭಾರತದ ಮೊದಲ ವೀರಸನ್ಯಾಸಿ ಸ್ವಾಮಿ ವಿವೇಕಾನಂದರು ಎಂದು ಮಾಜಿ ಶಾಸಕ ಎ.ನಾಗರಾಜು ಹೇಳಿದರು.

ಮಾಲೂರು ಮತ್ತು ಮಾಸ್ತಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸ್ವಾಮಿ ವಿವೇಕಾನಂದರ ೧೫೯ನೇ ಜಯಂತಿಯ ಪ್ರಯುಕ್ತ ಪಟ್ಟಣದ ಬಸ್ ನಿಲ್ದಾಣದ ಬಳಿ ಇರುವ ಪುರಸಭೆಯ ಉದ್ಯಾನವನದಲ್ಲಿ ವಿವೇಕಾನಂದರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.

Contact Your\'s Advertisement; 9902492681

ಸ್ವಾಮಿ ವಿವೇಕಾನಂದ ರವರು ಅಮೇರಿಕಾದ ಚಿಕಾಗೋ ನಗರದಲ್ಲಿ ನಡೆದ ವಿಶ್ವ ಧರ್ಮ ಪರಿ?ತ್ತಿನಲ್ಲಿ ಯುವ ಸಂಪನ್ಮೂಲ ವ್ಯರ್ತವಾಗದೆ ದೇಶದ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಯ ಶಕ್ತಿಯಾಗಬೇಕೆಂಬ ಧೋರಣೆಯನ್ನು ಪ್ರತಿಪಾದಿಸುವ ಮೂಲಕ ಯುವ ಜನತೆಯ ಸ್ಪೂರ್ತಿಯ ನುಡಿಗಳಾನ್ನಾಡಿದ್ದರು. ಇವರ ಆದರ್ಶ ಮತ್ತು ತತ್ವ ಸಿದ್ದಾಂತಗಳು ಇಂದಿನ ಯುವ ಪೀಳಿಗೆಗೆ ದಾರಿದೀಪವಾಗಿದೆ ಎಂದರು.

ಈ ಸಂದರ್ಭದಲ್ಲಿ ಮಾಲೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜಿ.ಮಧುಸೂದನ್, ಪುರಸಭಾ ಸದಸ್ಯರಾದ ಎನ್.ವಿ.ಮುರಳೀಧರ್, ಆರ್.ವೆಂಕಟೇಶ್, ಮುಖಂಡರಾದ ಎ.ಅಶ್ವತ್ಥರೆಡ್ಡಿ, ಬ್ಯಾಲಹಳ್ಳಿ ರಮೇಶ್, ಕೋಳಿ ನಾರಾಯಣ್, ಕರಗದ ಶಂಕರಪ್ಪ, ರವಿರೆಡ್ಡಿ, ನಾರಾಯಣರೆಡ್ಡಿ, ನದೀಮ್, ಯುವ ಕಾಂಗ್ರೆಸ್‌ನ ತನ್ವೀರ್, ನವೀನ್ ಕುಮಾರ್, ಶಭೀರ್, ರೋಹಿತ್, ಮಾಸ್ತಿ ಪ್ರವೀಣ್ ಇನ್ನಿತರರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here