ಜಯಶ್ರೀ ಮತ್ತಿಮುಡ ಅವರಿಂದ ಶ್ರೀ ಮಹಾಲಕ್ಷ್ಮೀ ಮಹಿಳಾ ಸ್ವಸಹಾಯ ಸಂಘ ಉದ್ಘಾಟನೆ

0
155

ಕಲಬುರಗಿ : ಇ೦ದು ಸಮಯದಲ್ಲಿ ಮಹಿಳೆಯರು ಗೋಡೆಯ ಮಧ್ಯದಲ್ಲಿದ್ದು ಅಡುಗೆ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದರೆ, ಆಧುನಿಕ ಯುಗದಲ್ಲಿ ಎಲ್ಲಾ ಕ್ಷೇತ್ರದಲ್ಲಿ ಸೇವೆಗೈಯುತ್ತ ಸಾಧನೆ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದು ಮಹಿಳಾ ಮುಖಂಡರಾದ ಜಯಶ್ರೀ ಮತ್ತಿಮುಡ ಹೇಳಿದರು.

ನಗರದ ಉಪಳಾ೦ವ ಗ್ರಾಮದ ಶ್ರೀರಾಮ ಕನ್ನಡ ಕಾನ್ವೆಂಟ್  ಶಾಲೆಯ ಆವರಣದಲ್ಲಿ ಶ್ರೀ ಮಹಾಲಕ್ಷ್ಮೀ ಮಹಿಳಾ ಸ್ವಸಹಾಯ ಸಂಘ ಉದ್ಘಾಟನೆಗೊಳಿಸಿ ಮಾತನಾಡುತ್ತಾ ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವ ಹಾಗೆ  ಮಹಿಳೆಯರು ಅಕ್ಷರ ಜ್ಞಾನ ಪಡೆದು ಸಂಘಟಿತರಾಗಿ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುವ ಮೂಲಕ ಉತ್ತಮ ಸಮಾಜ ನಿರ್ಮಿಸಬೇಕೆಂದು ಹೇಳಿದರು.

Contact Your\'s Advertisement; 9902492681

ಸಮಾರಂಭದ  ದಿವ್ಯ ಸಾನಿಧ್ಯ ವಹಿಸಿದ ಶ್ರೀನಿವಾಸ ಸರಡಗಿಯ  ಪೂಜ್ಯರಾದ ಡಾ. ರೇವಣಸಿದ್ಧ ಶಿವಾಚಾರ್ಯರು ಆಶೀರ್ವಚನ ನೀಡುತ್ತ  ಆಧ್ಯಾತ್ಮಿಕತೆಯಲ್ಲಿ ಭಾರತ ದೇಶ ಪ್ರಪಂಚಕ್ಕೆ ಪರಿಚಯಿಸಿದ ಸ್ವಾಮಿ ವಿವೇಕಾನಂದರ ಹುಟ್ಟು ಹಬ್ಬದಂದೆ ಈ ಸಂಘ ಉದ್ಘಾಟನೆಯಾಗುತ್ತಿರುವುದು ಸಂತೋಷದ ವಿಷಯ. ರಾಷ್ಟ್ರಕ್ಕೆ ಪ್ರಾಣಾರ್ಪಣೆ ಮಾಡಿದ ಸೇನಾನಿಗಳು,ಸಮಾಜಕ್ಕಾಗಿ ತಮ್ಮ ಜೀವವನ್ನೇ ತ್ಯಾಗ ಮಾಡಿದ ಮಹಾನ ಪುರುಷರು ನಮ್ಮೆಲ್ಲರಿಗೂ ಆದರ್ಶ ವ್ಯಕ್ತಿಯಾಗಬೇಕೆಂದು ಹೇಳುತ್ತಾ, ಹಳ್ಳಿಯಲ್ಲಿಯೂ ಮಹಿಳೆಯರು ಜಾಗೃತಿರಾಗಿ ಸಂಘಟನೆ ಮೂಲಕ ಸಮಾಜ ಸೇವೆಗೈಯಲೆಂದು ನುಡಿದರು.

ಮುಖ್ಯ ಅತಿಥಿಗಳಾಗಿ ಅವರಾದ ಗ್ರಾಮ ಪಂಚಾಯತ ಅಧ್ಯಕ್ಷರಾದ ಸಂಗೀತಾ ಪಾಟೀಲ, ಉಪಾಧ್ಯಕ್ಷರಾದ ಗುಂಡೇರಾಯ ಮೂಲಗೆ, ಯುವ ಮುಖಂಡರಾದ ವಿರೇಶ ಬಿರಾದಾರ ಉಪಳಾ೦ವ, ಗ್ರಾಮ ಪಂಚಾಯತ ಸದಸ್ಯರಾದ ನಾಗೇಂದ್ರ ಹುಲಿಕಾರ, ಶ್ರೀರಾಮ ಕನ್ನಡ ಕಾನ್ವೆಂಟ್  ಶಾಲೆಯ ಅಧ್ಯಕ್ಷರಾದ ಗೌಡೇಶ ಬಿರಾದಾರ ನ್ಯಾಯವಾದಿ ಹಣಮಂತರಾಯ ಅಟ್ಟೂರ ಆಗಮಿಸಿದರು.

ಸಂಘದ ಅಧ್ಯಕ್ಷರಾದ ಲಕ್ಷ್ಮಿ ಮುಲಗೆ ಅಧ್ಯಕ್ಷತೆವಹಿಸಿದರು. ಕಾರ್ಯಕ್ರಮದಲ್ಲಿ ಮಲ್ಲಮ್ಮ ನಿಂಬಾಳ, ಪಾರ್ವತಿ ಹತಗುಂದಿ, ದಾನಮ್ಮ ಟೇಂಗಳಿ, ಸ್ವಾತಿ, ಕಾಶಮ್ಮ, ನಿಂಗಮ್ಮ, ನಿರ್ಮಲಾ, ಲಲಿತಾಬಾಯಿ  ಕಪನೂರ, ಶ್ರೀದೇವಿ, ವಿಜಯಲಕ್ಷ್ಮಿ ರೆಡ್ಡಿ, ವಿದ್ಯಾವತಿ, ಜಯಶ್ರೀ, ಭಾಗ್ಯಶ್ರೀ, ನೀಲಮ್ಮ ಶೆಳಗಿ, ಗಂಗಾಧರ ಹತಗುಂದಿ, ಶಿವಲೀಲಾ ಇಟಗಿ, ಗಂಗಮ್ಮ, ರಂಜಿತಾ ಕುಂಬಾರ, ಜ್ಯೋತಿ ಪಾಟೀಲ, ದೇವರಾಜ, ಪೀರಪ್ಪ ಬಿರಾದಾರ, ಗ್ರಾಮದ ಹಲವಾರು ಜನ ಭಾಗವಸಿದ್ದರು. ಸೇವಂತಿ ಮತ್ತು ಪೂಜಾ ಪ್ರಾರ್ಥಿಸಿದರು.ಶ್ವೇತಾ ರೆಡ್ಡಿ ನಿರುಪಿಸಿದರು.ಸಂಗೀತಾ ಪಾಟೀಲ ಸ್ವಾಗತಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here