ಸ್ವಾಮಿ ವಿವೇಕಾನಂದರು ಜನಸಿದ ನೆಲದಲ್ಲಿ ನಾವು ಜನಸಿದ್ದು ನಮ್ಮ ಪುಣ್ಯ: ನ್ಯಾ ಚಿದಾನಂದ ಬಡಿಗೇರ

0
26

ಸುರಪುರ: ಸ್ವಾಮಿ ವಿವೇಕಾನಂದರಂತಹ ಮಹಾನ್ ಚೇತನರು ಜನಸಿದ ನೆಲದಲ್ಲಿ ನಾವೆಲ್ಲರು ಜನಸಿರುವುದು ನಮ್ಮ ಪುಣ್ಯವಾಗಿದೆ ಎಂದು ನ್ಯಾಯಾಧೀಶ ಚಿದಾನಂದ ಬಡಿಗೇರ ಮಾತನಾಡಿದರು.

ನಗರದ ನ್ಯಾಯಾಲಯದ ಆವರಣದಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ,ತಾಲೂಕು ಕಾನೂನು ಸೇವಾ ಸಮಿತಿ,ತಾಲೂಕು ನ್ಯಾಯವಾದಿಗಳ ಸಂಘ ಹಾಗು ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ ೧೫೯ನೇ ಜಯಂತಿ ಅಂಗವಾಗಿ ಯುವ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಸ್ವಾಮಿ ವಿವೇಕಾನಂದರು ಜಗತ್ತಿಗೆ ಪ್ರಕರ ಸೂರ್ಯನಿದ್ದಂತೆ.ಅವರ ಆದರ್ಶ ಇಂದಿನ ಎಲ್ಲ ಯುವಕರಿಗೆ ಮಾದರಿಯಾಗಬೇಕು.

Contact Your\'s Advertisement; 9902492681

ಪ್ರತಿಯೊಬ್ಬ ತಂದೆ ತಾಯಂದಿರು ಮಕ್ಕಳಿಗೆ ಅವರ ಜೀವನ ಚರಿತ್ರೆಯನ್ನು ತಿಳಿಸಬೇಕು ಮತ್ತು ಯುವಕರು ಸ್ವಾಮಿ ವಿವೇಕಾನಂದರು ನೀಡಿದ ಸಂದೇಶವಾದ ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲಬೇಡಿ ಎಂದಿರುವುದನ್ನು ಅರಿತುಕೊಳ್ಳಬೇಕು ಎಂದರು.ಸ್ವಾಮಿ ವಿವೇಕಾನಂದರು ತಮ್ಮ ೩೦ನೇ ವಯಸ್ಸಿನಲ್ಲಿಯೇ ಇಡೀ ಜಗತ್ತು ತನ್ನತ್ತ ತಿರುಗಿ ನೋಡುವಂತೆ ಮಾಡಿದರು.ಅಮೇರಿಕಾದ ಜನರನ್ನು ಕೇವಲು ಮೂರು ಶಬ್ದಗಳಿಂದ ಎಲ್ಲರ ಮನಸ್ಸು ಗೆದ್ದರು ಅಂತವರ ಜಯಂತಿಯನ್ನು ಯುವ ಸಪ್ತಾಹ ಎಂದು ಆಚರಿಸುತ್ತಿರುವುದು ಸಂತೋಷದ ಸಂಗತಿಯಾಗಿದೆ ಎಂದರು.

ನಂತರ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿದ್ದ ನ್ಯಾಯವಾದಿಗಳಾದ ವಿ.ಎಸ್ ಬೈಚಬಾಳ ಅವರು ಸ್ವಾಮಿ ವಿವೇಕಾನಂದರ ಜೀವನ ಸಾಧನೆ ಕುರಿತು ಮತ್ತೋರ್ವ ನ್ಯಾಯವಾದಿಗಳಾದ ಚನ್ನಪ್ಪ ಹೂಗಾರ ತಂಬಾಕು ಮತ್ತು ಗುಟಕಾ ನಿಷೇಧದ ಕುರಿತು ಮಾತನಾಡಿದರು.ಅಲ್ಲದೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಬಸವರಾಜ ಕಿಲ್ಲೇದಾರ ಮಾತನಾಡಿದರು.

ಕಾರ್ಯಕ್ರಮದ ವೇದಿಕೆ ಮೇಲೆ ಮುಖ್ಯ ಅತಿಥಿಗಳಾಗಿ ನ್ಯಾಯವಾದಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಗೋಪಾಲ ತಳವಾರ,ಸಹಾಯಕ ಸರಕಾರಿ ಅಭಿಯೋಜಕರಾದ ರಾಘವೇಂದ್ರ ಜಾಗೀರದಾರ್,ದಿವ್ಯಾರಾಣಿ ನಾಯಕ ಇದ್ದರು.ಕಾರ್ಯಕ್ರಮದಲ್ಲಿ ನ್ಯಾಯವಾದಿಗಳಾದ ಆದಪ್ಪ ಹೊಸ್ಮನಿ,ಮಲ್ಲಣ್ಣ ಬೋವಿ,ರಮಾನಂದ ಕವಲಿ,ಖಾಜಿ ಸೇರಿದಂತೆ ಅನೇಕ ಜನ ನ್ಯಾಯವಾದಿಗಳು ಹಾಗು ಕಕ್ಷಿದಾರರಿದ್ದರು.ವಕೀಲ ಅಪ್ಪಣ್ಣ ಗಾಯಕವಾಡ ನಿರೂಪಿಸಿದರು,ಮಂಜುನಾಥ ಹುದ್ದಾರ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here