ರಾಷ್ಟ್ರಧರ್ಮ ಪಾಲನೆ ಸರ್ವಶ್ರೇಷ್ಠ ಭಕ್ತಿ: ದಾಡಗೆ

0
13

ಭಾಲ್ಕಿ: ಭಾರತದ ನೆಲದಲ್ಲಿ ಜೀವಿಸುವ ಪ್ರತಿಯೊಬ್ಬರೂ ಭಾರತ ಮಾತೆಯ ಸಂತಾನ. ಪ್ರತಿಯೊಬ್ಬರೂ ರಾಷ್ಟ್ರಧರ್ಮ ಪಾಲಿಸುವ ಮೂಲಕ ಈ ನೆಲದ ಋಣ ತೀರಿಸಬೇಕೆಂದು ವಂದೇ ಮಾತರಂ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಿವಾನಂದ ದಾಡಗೆ ನುಡಿದರು. ಭಾಲ್ಕಿಯ ಸದ್ಗುರು ಪ್ರೌಢ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ನಿಮಿತ್ತ ಆಯೋಜಿಸಿದ್ದ ಯುವ ಸಪ್ತಾಹದಲ್ಲಿ ಮುಖ್ಯ ಉಪನ್ಯಾಸ ಮಂಡಿಸಿ ಮಾತನಾಡಿದರು.

ಸ್ವಾಮಿ ವಿವೇಕಾನಂದರು ಚಿಕಾಗೋದ ವಿಶ್ವಧರ್ಮ ಸಮ್ಮೇಳನದಲ್ಲಿ ಮಾತನಾಡುವ ಮುನ್ನ ಭಾರತವನ್ನು ಬಡ ಹಾವಾಡಿಗರ ರಾಷ್ಟ್ರವೆಂದು, ಅನಕ್ಷರಸ್ಥರ ದೇಶವೆಂದು ಗುರುತಿಸುವಂಥ ಪರಿಸ್ಥಿತಿ ಇತ್ತು. ಈಗ ಭಾರತವು ವಿಶ್ವಗುರುವಾಗುವ ಉದಯೋನ್ಮುಖ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದರು.

Contact Your\'s Advertisement; 9902492681

ಕಾರ್ಯಕ್ರಮ ಉದ್ಘಾಟಿಸಿ ಶಿಕ್ಷಣ ಸಂಯೋಜಕ ಸಹದೇವ ಮಾತನಾಡಿ, ವಿದ್ಯಾರ್ಥಿಗಳ ಮುಂದೆ ಉತ್ತಮ ಗುರಿ ಮತ್ತು ಹಿಂದೆ ಆದರ್ಶ ಗುರು ಇರಬೇಕು ಎಂದರು. ಕರೋನಾ ಸಂದರ್ಭದಲ್ಲಿ ಮಕ್ಕಳು ಅನಗತ್ಯ ಹೆದರಿಕೆಗೆ ಒಳಗಾಗದೇ ಆರೋಗ್ಯದ ಬಗ್ಗೆ ಮುಂಜಾಗ್ರತೆ ವಹಿಸಬೇಕೆಂದು ತಿಳಿಸಿದರು.

ಬಿಇಓ ಕಚೇರಿಯ ಶಿವಕುಮಾರ ಸಿಂಧೆ, ಪತ್ರಕರ್ತ ಸೋಮನಾಥ ಮುದ್ದಾ, ಅರವಿಂದ ಕುಂದನ, ಕನ್ಯಾಕುಮಾರಿ ಯಾಲಾ, ದಯಾಳ್ ದಂಡಿನ್ ಮುಂತಾದವರು ಇದ್ದರು. ಅಡಳಿತಾಧಿಕಾರಿ ವೀರಣ್ಣ ಪರಸಣ್ಣೆ ಸ್ವಾಗತಿಸಿದರು. ರಾಜಕುಮಾರ ಮೇತ್ರೆ ನಿರ್ವಹಿಸಿದರು. ಸುಜಾತಾ ಪಾಟೀಲ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here