ವ್ಯಾಸರಾಜರ ವೃಂದಾವನವನ್ನು ಧ್ವಂಸಗೊಳಿಸಿರು ಕಿಡಿಗೇಡಿಗಳ ಬಂಧನಕ್ಕೆ ಆಗ್ರಹ

0
45

ಸುರಪುರ: ಕೊಪ್ಪಳ ಜಿಲ್ಲೆ ಆನೆಗುಂದಿಯಲ್ಲಿನ ಶ್ರೀ ವ್ಯಾಸರಾಜ ಯತಿಗಳ ಮೂಲ ವೃಂದವನ್ನು ಧ್ವಂಸನಗೊಳಿಸಿರುವುದು ವಿಪ್ರ ಸಮಾಜಕ್ಕೆ ತುಂಬಲಾಗದ ನಷ್ಠವಾಗಿದೆ ಈ ಕೃತ್ಯದಿಂದ ನಮ್ಮ ಸಮಾಜಕ್ಕೆ ಹಾಗೂ ಹಿಂದು ಧರ್ಮಕ್ಕೆ ಧಕ್ಕೆ ಊಂಟಾಗಿದೆ ಈ ಘಟನೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಈ ಕೃತ್ಯದಲ್ಲಿ ಭಾಗಿಯಾದ ಕಿಡಿಗೇಡಿಗಳನ್ನು ಕೊಡಲೆ ಬಂಧಿಸಬೇಕೆಂದು ವಿಪ್ರ ಸಮಾಜದ ಮುಖಂಡ ನಾರಾಯಣ ಆಚಾರ ಐಜಿ ಆಗ್ರಹಿಸಿದರು.

ನಗರದ ಗಾಂಧಿವೃತ್ತದಲ್ಲಿ ವಿಪ್ರಸಮಾಜ ನಗರ ಘಟಕ ಸುರಪುರ ವತಿಯಿಂದ ಶುಕ್ರವಾರ ಕೊಪ್ಪಳ ಜಿಲ್ಲೆಯ ಆನೆಗುಂದಿಯಲ್ಲಿ ಶ್ರೀ ವ್ಯಾಸರಾಜರ ಮೂಲ ವೃಂದಾವನವನ್ನು ಧ್ವಂಸಗೊಳಿಸಿರುವುದನ್ನು ಖಂಡಿಸಿ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಅವರು ವಿಶ್ವ ಪ್ರಸಿದ್ದ ಹಂಪಿಯ ಹತ್ತಿರ ವಿರುವ ಐತಿಹಾಸಿಕ ತಾಣವಾಗಿರು ನವವೃಂದಾವನಗಳನ್ನು ಅತ್ಯಂತ ಪವಿತೃವಾಗಿ ಕಾಣುತ್ತೇವೆ ಇತಿಂಹ ವೃಂದಾವನವನ್ನು ಹಾಳುಮಾಡಿರುವುದು ಸರಿಯಲ್ಲ ಈ ಘಟನೆಯಿಂದ ವಿಪ್ರಸಮುದಾಯದ ಆಚರಣೆಗೆಳಿಗೆ ಮತ್ತು ನಂಬಿಕೆ ಧಕ್ಕೆ ಉಂಟಾಗಿದೆ ತಕ್ಷಣವೆ ಸರಕಾರ ಎಚ್ಚೆತ್ತುಕೊಂಡು ನವವೃಂದಾವನಗಳಿಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಒತ್ತಾಯಿಸಿದರು.

Contact Your\'s Advertisement; 9902492681

ಹಿರಿಯ ನ್ಯಾಯವಾದಿ ವಿ.ಎಸ್.ಜೋಷಿ ಮಾತನಾಡಿ ಇತಂಹ ಘಟನೆಗಳು ನಮ್ಮ ವಿಪ್ರ ಸಮಾಜದ ಮೇಲೆ ಆಗಿರುವುದು ತೊಂಬಾ ನೋವಿನ ಸಂಗತಿಯಾಗಿದೆ ಈ ಘಟನೆಯಿಂದ ನಮ್ಮ ಸಮಾಜದ ಆಸ್ತೀಕತೆಗೆ ಧಕ್ಕೆ ಉಂಟಾಗಿದೆ. ವಿಪ್ರ ಸಮುದಾಯದವು ನಾವು ಇಂದಿನ ವರೆಗೂ ಯಾರಮೇಲು ಅನ್ಯಾಯಮಾಡಿಲ್ಲ ಮಾಡುವುದು ಇಲ್ಲ ನಮ್ಮ ಶಕ್ತಿ ಅನುಗುಣವಾಗಿ ಬದುಕುತ್ತಿರುವ ನಾವುಗಳು ಇಂದು ನಡೆದಿರುವ ಈ ಹೇಯಕೃತ್ಯದಿಂದ ನಮ್ಮ ಸಮಾಜವನ್ನು ಹಾಳುಮಾಡುವ ಹೊನ್ನಾರ ನಡೆಸಿದ್ದಾರೆ ಮತ್ತು ಈ ಕೃತ್ಯವು ಹಂಪಿಯ ಹತ್ತಿರ ನಡೆದಿರುವ ಕಾರಣ ಈ ಪ್ರಕರಣ ಸುತ್ತಾ ಅನುಮಾನ ಮೂಡುತ್ತಿದೆ ತಕ್ಷಣವೆ ಈ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಇದಕ್ಕೂ ಮುಂಚೆ ನಗರದ ವೇಣುಗೋಪಾಲ ಸ್ವಾಮಿ ದೇವಸ್ಥಾನ ಆವರಣದಿಂದ ಪ್ರಮುಖ ಬೀದಿಗಳ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ಗಾಂಧಿ ವೃತ್ತದಲ್ಲಿ ಜಮಾವಣೆಗೊಂಡರು.ರಾಜ್ಯ ಪಾಲರಿಗೆ ಬರೆದ ಮನವಯನ್ನು ತಹಸೀಲ್ದಾರ ಸುರೇಶ ಅಂಕಲಗಿ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ವೆಂಕೋಬ ಆಚಾರ್ ಬೀರನೂರ,ಗಣಪತರಾವ್ ಕುಲಕರ್ಣಿ,ಸೀತಾರಾಮ ಆಚಾರ್ ಐ.ಜಿ,ಭೀಮಶೇನ್ ಆಚಾರ್ ಜೋಷಿ,ರಾಧಾಕೃಷ್ಣ ಜೋಷಿ,ಭೀಮ ಭಟ್ ಜೋಷಿ,ರಾಮಾಚಾರ್ ಜಾಲಿಬೆಂಚಿ,ನಾಗರಾಜ ಪಾಲಮೂರ್,ಕೃಷ್ಣಾ ಚಾರ್ ದೇವರು,ನರಸಿಂಹರಾವ್ ಕುಲಕರ್ಣಿ,ಭೀಮಶೇನ್ ಆಚಾರ್ ಜೋಷಿ,ಅಪ್ಪಣ್ಣ ಕುಲ್ಕರ್ಣಿ,ಧೀರೇಂದ್ರ ಕುಲಕರ್ಣಿ,ಗಣಪತರಾವ್ ಜಹಾಗೀರದಾರ,ಚಂದ್ರಕಾಂತ ನಾಡಿಗೇರ್,ಮಲ್ಲಾರಾವ್ ಪಟವಾರಿ,ರಾಘವೇಂದ್ರ ಗೆದ್ದಲಮರಿ,ವಿಜಯರಾಘವನ್ ಪಿ,ನರಸಿಂಹ ಬಡಶೇಶಿ,ಲಕ್ಷ್ಮೀನಾರಾಯಣ ಜೋಷಿ,ಪ್ರಹ್ಲಾದ ದಿಕ್ಷಿತ್ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here