ಶಹಾಬಾದ : ರಾಜ್ಯದಲ್ಲಿ ಕೊರೊನಾ ಸೋಂಕು ದಿನೇ ದಿನೇ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಇದೇ ಜನೇವರಿ ೨೧ ರಂದು ಆಚರಿಸಲಿರುವ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿಯನ್ನು ಸರಳವಾಗಿ ಆಚರಿಸಲು ಸರಕಾರ ಆದೇಶ ಹೊರಡಿಸಿದ್ದರಿಂದ ಎಲ್ಲರೂ ಸರಕಾರದ ಆದೇಶವನ್ನು ಪಾಲಿಸುವ ಮೂಲಕ ಸರಳವಾಗಿ ಜಯಂತಿಯನ್ನು ಆಚರಿಸೋಣ ಎಂದು ತಾಲೂಕಾ ಕೋಲಿ ಸಮಾಜದ ಅಧ್ಯಕ್ಷ ಶಿವಕುಮಾರ ತಳವಾರ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಜನೇವರಿ ೨೧ ರಂದು ಬೆಳಿಗ್ಗೆ ೮ ಗಂಟೆಗೆ ಪೋಲಿಸ್ ಕ್ವಾಟರ್ಸ್ ಹತ್ತಿರದ ಬಸವೇಶ್ವರ ನಗರದಲ್ಲಿರುವ ಅಂಬಿಗರ ಚೌಡಯ್ಯನವರ ಮೂರ್ತಿಗೆ ಅಭಿ?ಕ ಹಾಗೂ ವಿಶೇಷ ಪೂಜೆ ಮಾಡಲಾಗುವುದು. ನಂತರ ೯ ಗಂಟೆಗೆ ರಾಮಾ ಮೊಹಲ್ಲಾದ ಅಂಬಿಗರ ಚೌಡಯ್ಯನವರ ಭವನ ಪೂಜೆ ನೆರವೇರಿಸಲು ಸಮಾಜದ ಬಾಂಧವರು ಆಗಮಿಸಬೇಕಾಗಿ ಮನವಿ ಮಾಡಿಕೊಂಡಿದ್ದಾರೆ.