ಅನನ್ಯ ಮಹಾವಿದ್ಯಾಲಯದಲ್ಲಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಆಚರಣೆ

0
11

ಕಲಬುರಗಿ: ನಗರದ ನಗರದ ಅನನ್ಯ ಪದವಿ ಮತ್ತು ಸಮಾಜಕಾರ್ಯ ಸ್ನಾತಕೋತ್ತರ ಪದವಿ ಮಹಾವಿದ್ಯಾಲಯದಲ್ಲಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಆಚರಿಸಲಾಯಿತು.

ಈ ಸಂಧರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶರಣು ಬಿ ಪೂಜಾರಿ ಹೊನ್ನಗೆಜ್ಜೆ ಅವರು ಮಾತನಾಡುತ್ತಾ ೧೨ ನೇ ಶತಮಾನದ ಕಾಲವೆಂದರೆ ಸಾಮಾಜಿಕ ಸುಧಾರಣೆಯ ಸುವರ್ಣಯುಗ ಎಂದರೆ ತಪ್ಪಾಗಲಾರದು ವಿಶ್ವ ಗುರು ಬಸವೇಶ್ವರರ ನಾಯಕತ್ವದ ಸಮಕಾಲಿನ ಶರಣರಲ್ಲಿ ಅಂಬಿಗರ ಚೌಡಯ್ಯನವರ ಒಬ್ಬರು ತಮ್ಮದೆಯಾದ ಹೆಸರಿನ ಅಂಕಿತನಾಮ ಇಟ್ಟುಕೊಂಡು ವಚನಗಳನ್ನು ರಚಿಸಿ ಕಾಯಕದೊಂದಿಗೆ ಜೀವನ ಸಾಗಿಸಿದ ಶ್ರೇಷ್ಠ ವಚನಕಾರರು ಅಂಬಿಗರ ಚೌಡಯ್ಯನವರ ತಮ್ಮ ನೇರ, ನೀಷ್ಠುರವಚನಗಳ ಮುಖಾಂತರ ಸಮಾಜದ ಮೂಡನಂಬಿಕೆ ಕಂದಾಚಾರ ಹಾಗೂ ಜಾತಿ ವ್ಯವಸ್ಥೆ ನಿರ್ಮೂಲನೆಗೆ ನಾಂದಿ ಹಾಡಿದರು.

Contact Your\'s Advertisement; 9902492681

ಸಮಾಜದ ಕೀಳುರಿಮೆ ಆಚಾರ ವಿಚಾರ ಸರಿಪಡಿಸಿ ಜನರಲ್ಲಿ ವೈಚಾರಿಕತೆಯ ಮನೋಭಾವ ಬೆಳೆಸಿದ ಕೀರ್ತಿ ಅಂಬಿಗರ ಚೌಡಯ್ಯನವರಿಗೆ ಸಲ್ಲುತ್ತದೆ ಎಂದ
ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ವೀರಯ್ಯ ಹಿರೇಮಠ, ಆಶಾರಾಣಿ ಕಲ್ಕೋರಿ, ಗೌರಿ ಬೆಟಿಗೇರಿ, ಸರಿತಾ ಕರಿಗುಡ್ಡ, ಭಾಗ್ಯಶ್ರೀ ಪಾಟೀಲ್, ಅಶ್ವಿನಿ ಗೌಳಿ, ರಾಜೇಶ್ವರಿ ಕಿರಣಗಿ. ಪ್ರೀತಿ ಸಜ್ಜನ್. ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here