ರಬಕವಿ-ಬನಹಟ್ಟಿ : ಬನಹಟ್ಟಿಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಿಸಿಟ್ಟದ್ದ ಮನೆ ಮೇಲೆ ಆಹಾರ ಶಿರಸ್ತೆದಾರ ಹಾಗು ಬನಹಟ್ಟಿ ಪೊಲೀಸರು ದಾಳಿ ನಡೆಸಿದ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಇಲ್ಲಿನ ಮುಗತಿ ಗಲ್ಲಿಯ ನಿತ್ಯಾನಂದ ಅಶೋಕ ಸಮ್ಮತಶೆಟ್ಟಿ ಎಂಬುವರ ಮನೆಯಲ್ಲಿ ಅಕ್ರಮವಾಗಿ ಶೇಖರಿಸಿಟ್ಟಿದ್ದ ಅಕ್ಕಿಯನ್ನು ಖಚಿತ ಮಾಹಿತಿ ಮೇರೆಗೆ ಆಹಾರ ಶಿರಸ್ತೆದಾರ ಸುರೇಶ ದಳವಾಯಿ ನೇತೃತ್ವದಲ್ಲಿ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಒಟ್ಟು 11 ಪ್ಲಾಸ್ಟಿಕ್ ಚೀಲದ 5.5 ಕ್ವಿಂಟಲ್ನಷ್ಟು ಅಕ್ಕಿ ವಶಪಡಿಸಿಕೊಂಡಿದ್ದು 10 ಸಾವಿರಕ್ಕೂ ಅಧಿಕ ಮೌಲ್ಯದ ಪಡಿತರ ಧಾನ್ಯ ಜಪ್ತಿ ಮಾಡಿದ್ದಾರೆ. ಮೆಲ್ನೋಟಕ್ಕೆ ಹಪ್ಪಳ(ಶ್ಯಾಂಡಿಗೆ) ಮಾಡುವ ಉದ್ದೇಶಕ್ಕೆ ಅಕ್ರಮ ಅಕ್ಕಿ ಖರೀದಿಸಿರುವದಾಗಿ ಆರೋಪಿ ಹೇಳಿಕೆ ನೀಡಿದ್ದು, ಈ ಕುರಿತು ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್ಐ ಸುರೇಶ ಮಂಟೂರ ತನಿಖೆ ಮುಂದುವರೆಸಿದ್ದಾರೆ.