“ಎಲ್ಲ ಭೂತಗಳು ಮಲಗಿರುವ ರಾತ್ರಿಯಲ್ಲಿ ಎಚ್ಚೆತ್ತಿರುತ್ತಾನೆ ಬಹಿ: ಪ್ರವೃತ್ತಿಯಿಂದ ನಿವೃತ್ತರಾದ ಸಂಯಮಿ:ಎಲ್ಲ ಭೂತಗಳು ಎಚ್ಚೆತ್ತಿರುವ ಹಗಲೇ ರಾತ್ರಿ,- ನೋಡಬಲ್ಲ ಆ ಬ್ರಹ್ಮ ನಿಷ್ಠ ಸಂಯಮಿಗೆ”.
ಹಗಲು ಯಾವುದು? ರಾತ್ರಿ ಯಾವುದು? ಕಣ್ಣುಗಳು ಕಾಣುವುದು ಹಗಲು. ಕಣ್ಣು ಕಾಣುವಷ್ಟು ಹಗಲು, ಕಣ್ಣು ಕಾಣದಿದ್ದರೆ ರಾತ್ರಿ, ಕಾಣದುದೆಲ್ಲ ರಾತ್ರಿ.
ಕಿವಿ ಕೇಳುವ ಶಬ್ದ ಕಿವಿಗೆ ಹಗಲು, ಕಿವಿಗೆ ಕೇಳಬಾರದ ಶಬ್ದ ರಾತ್ರಿ, ಹಗಲಿದ್ಧರೂ ಅದು ರಾತ್ರಿ ಏನೂ ಕೇಳಿಸದ ಕಿವಿಗೆ ಹೋಗಲು ರಾತ್ರಿ ಎರಡೂ ಒಂದೇ, ಹಾಗೆಯೇ ಜ್ಞಾನೇಂದ್ರಿಯಗಳಿಗೆ ಗೋಚರವಾಗುವ ವಿಷಯವೆಲ್ಲ ಇಂದ್ರಿಯಗಳಿಗೆ ಹಗಲು. ಗೋಚರವಾಗದುದೆಲ್ಲ ರಾತ್ರಿ. ಅಂದ್ರೆ ಕತ್ತಲೆ, ನಂತರ ಗೂಗೆ ಗೊತ್ತಲ್ಲ ನಿಮಗೆ ಗೂಗೆಯ ಹಗಲೆಲ್ಲಾ ಕಾಗೆಗೆ, ಇಲಿಯ ಹಗಲು ರಾತ್ರಿಯೆಲ್ಲಾ ಬೆಕ್ಕಿಗೆ ಹಗಲೇ, ನೋಡಿದ್ರಲ್ಲ,
ಹಾಗೆಯೇ ಸಸ್ಯಪ್ರಪಂಚವೂ ಈ ರಾತ್ರಿ ಹಗಲುಗಳನ್ನು ಅವಿಜ್ಞಾತವಾಗಿ ಅನುಭವಿಸುತ್ತಿರಬಹುದು. ಮಾನವನ ಬುದ್ಧಿ ತಿಳಿದ ಮಟ್ಟಿಗೆ ಮಣ್ಣು ಕಲ್ಲು ಮುಂತಾದ ಜಡ ಪ್ರಪಂಚಕ್ಕೆ ಹಗಲು–ರಾತ್ರಿಯ ಭೇದವಾಗಲಿ ಅಥವಾ ಭೇದ ಮಾಡುವ ಅರಿವಾಗಲಿ ಇದಾವುದೂ ಇಲ್ಲದ ಕಾರಣ, ದಡದಲ್ಲಿ ಚೈತನ್ಯ ಹುಟ್ಟಲು ಸಾಧ್ಯವಿಲ್ಲ, ದಡದಲ್ಲಿ ಜಡವಾದ ಕಲ್ಲೇ ಹುಟ್ಟುತ್ತದೆ. ಕಲ್ಲಿನಲ್ಲಿ ಚೈತನ್ಯ ವಸ್ತು ಹುಟ್ಟಿಸಲು ವಿಜ್ಞಾನಿಗಳಿಗೂ ಬರಲ್ಲ. ಜಡದಿಂದ ಜಡ ಹುಟ್ಟುತ್ತದೆ, ಜಡದಿಂದ ಚೈತನ್ಯ ಹುಟ್ಟಲ್ಲ. ಚೈತನ್ಯದಿಂದ ಚೈತನ್ಯವೂ ಹುಟ್ಟುತ್ತದೆ ಜಡವೂ ಹುಟ್ಟುತ್ತದೆ.
ಉದಾಹರಣೆಗೆ– ಮಾನವನ ಚೈತನ್ಯದ ಚಿಲುಮೆ, ಚೈತನ್ಯಾತಮಕವಾದ ಮಾನವನಿಗೆ ಚೈತನ್ಯ ವಸ್ತು ಕೊಡುವ ಅದ್ಭುತವಾದ ಶಕ್ತಿ ಇದೆ. ಮಾನವನ ದೇಹದಿಂದ ಜಡವಾದ ಕೂದಲು ನಮ್ಮ ಬೆರಳಿನ ತುದಿಯಲ್ಲಿ ಜಡವಾದ ಉಗುರು ಬೆಳೆಯುತ್ತಿರುತ್ತದೆ. ಆದ್ದರಿಂದ ಕಲ್ಲಿನಲ್ಲಿ ಕಲ್ಲು ಹುಟ್ಟುವುದು ಎಷ್ಟು ಸತ್ಯವೂ, ಸಹಜವೂ ಕಲ್ಲಿನಲ್ಲಿ ಚೈತನ್ಯದಾಯಕ ವಸ್ತು ಹುಟ್ಟುವುದಿಲ್ಲ ಎಂಬುದು ಅಷ್ಟೇ ಪರಮ ಸತ್ಯ..!
ಅದಕ್ಕಾಗಿಯೇ ಬಸವಣ್ಣನವರು ವೈಚಾರಿಕ, ವೈಜ್ಞಾನಿಕ ಪ್ರಗತಿಪರ ಲಿಂಗಾಯಿತ ಧರ್ಮ ಕೊಟ್ಟರು, ಸುಳ್ಳುಗಳ ಕಂತೆ ಪೋಣಿಸಿ ಪುಂಡರ ಸುಳ್ಳು ಪುರಾಣಗಳ ಗಂಟು ಮೂಟೆ ಕಟ್ಟಿ ಮೂಲೆಯಲ್ಲಿ ಹಾಕಿ ಸತ್ಯ, ನ್ಯಾಯ, ನೀತಿ, ನಿಷ್ಠೆ, ಅಹಿಂಸೆ, ಧರ್ಮ ಮಾರ್ಗ ಸಮಾನತೆ ಕಾಯಕ ದಾಸೋಹ ತತ್ವಗಳನ್ನು ಕೊಟ್ಟು ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಬಸವಾದಿ ಶರಣರು ಪ್ರಮಥರು ಎಲ್ಲಾ ಶರಣರಿಗೂ..!
# ನಿರೂಪಣೆಯು — ಕೆ.ಶಿವು.ಲಕ್ಕಣ್ಣವರ