ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ರದವಾಡ್ಗಿ ಹೇಳಿಕೆಗೆ ಸಿದ್ದಲಿಂಗರೆಡ್ಡಿ, ರುಕ್ಕುಂ ಪಟೇಲ್ ಟಾಂಗ್

0
21

ಜೇವರ್ಗಿ: ಹತ್ತು ಹಲವು ವಿಧಾಯಕ ಕಾರ್ಯಕ್ರಮಗಳ ಮೂಲಕ ಹಾಗೂ ಸರಕಾರದ ಯೋಜನೆಗಳನ್ನು ಜೇವರ್ಗಿಗೆ ತರುವುದರೊಂದಿಗೆ ಶಾಸಕರಾದ ಡಾ. ಅಜಯ್ ಸಿಂಗ್ ಜೇವರ್ಗಿ ಮತಕ್ಷೇತ್ರದ ಪ್ರಗತಿಗೆ ಅವಿರತ ಶ್ರಮಿಸುತ್ತ ಕ್ಷೇತ್ರದ ಜನರಿಗೆ ತಲುಪುತ್ತಿದ್ದರೂ ಇದನ್ನೆಲ್ಲ ಕಂಡು ಕಾಣದಂತೆ ಜಾಣ ಕುರುಡುತನ ತೋರುತ್ತಿರುವ ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದವಾಡಗಿಯವರು ಅಭಿವೃದ್ಧಿ ವಿಚಾರದಲ್ಲಿ ಶಾಸಕರ ಬದ್ಧತೆ ಪ್ರಶ್ನಿಸುವ ಭಂಡತನ ಮಾಡಿರೋದು ಸರಿಯಲ್ಲ ಎಂದು ಜೇವರ್ಗಿ ಕಾಂಗ್ರೆಸ್ ಪಕ್ಷದ ಮುಖಂಡರು ಶಿವರಾಜರ ಹೇಳಿಕೆಗೆ ಟಾಂಗ್ ನೀಡಿದ್ದಾರೆ.

ಈ ಕುರಿತಂತೆ ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ಜೇವರ್ಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ಧಲಿಂಗ ರೆಡ್ಡಿ ಹಾಗೂ ಯಡ್ರಾಮಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರುಕ್ಕುಂ ಪಟೇಲ್ ಅವರು ಡಾ. ಅಜಯ್ ಸಿಂಗ್ 2019 ರಿಂದ ಇಲ್ಲಿಯವರೆಗೂ 6 ಕೆಡಿಪಿ ಸಭೆಗಳನ್ನು ಮಾಡಿದ್ದಾರೆ. ಈ ಸಭೆಗಳಲ್ಲಿ ಜೇವರ್ಗಿ ಹಾಗೂ ಯಡ್ರಾಮಿ ತಾಲೂಕಿನ ಪ್ರಗತಿ ವಿಚಾರಗಳನ್ನೇ ಪ್ರಧಾನವಾಗಿಟ್ಟುಕೊಂಡು ಅಧಿಕಾರಿಗಳಿಗೆ ಸೂಚನೆ ನೀಡುತ್ತ ಪ್ರಗತಿಗೆ ಶ್ರಮಿಸಿದ್ದಾರೆ.

Contact Your\'s Advertisement; 9902492681

ಹೀಗಿದ್ದರೂ ಕೆಡಿಪೆ ಸಭೆಗಳನ್ನು ಎಷ್ಟು ಮಾಡಿದ್ದೀರಿ ಎಂದು ಶಾಸಕರನ್ನು ಕೇಳಿರುವ ಶಿವರಾಜ ರz್ದÉೀವಾಡಗಿಯವರು ತಮ್ಮ ಸರಕಾರದ ಜಿಲ್ಲಾ ಉಸ್ತುವಾರಿ ಸಚಿವರುಗಳು ಅದೆಷ್ಟು ಸಭೆಗಳನ್ನು ಮಾಡಿದ್ದಾರೆ. ಅದೆಷ್ಟು ಪ್ರಗತಿಗೆ ಒತ್ತು ಕೊಟ್ಟಿದ್ದಾರೆಂಬುದನ್ನು ಹೇಳಬೇಕು ಎಂದು ಆಗ್ರಹಿಸಿದ್ದಾರೆ.

ಅತಿವೃಷ್ಟಿ ಬೆಳೆಹಾನಿಗೆ ಪರಿಹಾರ ನೀಡುವ ವಿಚಾರದಲ್ಲಿಯೂ ಶಾಸಕರಾದ ಡಾ. ಅಜಯ್ ಸಿಂಗ್ ಬೆಳಗಾವಿ ಸುವರ್ಣ ಸದನದಲ್ಲಿಯೇ ಸದರಿ ವಿಚಾರ ಪ್ರಸ್ತಾಪಿಸಿ ಜೇವರ್ಗಿ ಹಾಗೂ ಯಡ್ರಾಮಿ ಬೆಳೆಹಾನಿಗೊಳಗಾದ ಸಾವಿರಾರು ರೈತರಿಗೆ ನ್ಯಾಯ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಈ ವಿಚಾರವಾಗಿ ರಾಜ್ಯ ಮಟ್ಟದಲ್ಲೆಲ್ಲಾ ಪತ್ರಿಕೆಗಳಲ್ಲಿ ವರದಿಯಾಗಿ ಸರಕಾರದ ಗಮನ ಸೆಳೆಯಲಾಗಿದೆ.

ಯಡ್ರಾಮಿ ತಾಲೂಕಿನಲ್ಲಿ ಅಧಿಕಾರಿಗಳು ಮಾಡಿದ ಅಲಕ್ಷತನದಿಂದಾಗಿ ಅಲ್ಲಿನ ಬೆಳೆಹಾನಿ ಪರಿಹಾರದ ಸಮೀಕ್ಷೆಯ ಮಾಹಿತಿಯೇ ಆನ್‍ಲೈನ್ ಅಪ್‍ಲೋಡ್ ಆಗಿರಲಿಲ್ಲ. ಶಾಸಕರು ಈ ಸಮಸ್ಯೆ ಗಮನಕ್ಕೆ ಬಂದ ತಕ್ಷಣ ರೈತರ ನಿಯೋಗವನ್ನು ಸಿಎಂ ಬಸವರಾಜ ಬೊಮ್ಮಾಯಿ ಬಳಿ ಕರೆದೊಯ್ದು ಯಾವುದೇ ಕಾರಣಕ್ಕೂ ರೈತರ ಬಿಟ್ಟು ಹೋಗಿರುವ ಬೆಳೆಹಾನಿಯ ಮಾಹಿತಿ ಪಡೆದು ಎಲ್ಲರಿಗೂ ಹಾನಿಗೆ ತಕ್ಕಂತೆ ಪರಿಹಾರ ಹಣ ಮಂಜೂರಾತಿಗೂ ಶ್ರಮಿಸಿದ್ದಾರೆ. ಇದೀಗ ಸರಕಾರ ಈ ಪ್ರಕರಣದಲ್ಲಿ ಜಿಲ್ಲಾಡಳಿತದಿಂದ ಮಾಹಿತಿ ಕೋರಿದೆ. ಇದು ಶಾಸಕರ ಸತತ ಪ್ರಯತ್ನದ ಕಾರಣದಿಂದಲೇ ರೈತರಿಗೆ ನ್ಯಾಯ ಸಿಗುತ್ತಲಿದೆ.

ಈಗಾಗಲೇ ಜೇರಟಗಿಯಿಂದ ಆರಂಭಿಸಿ ಶಾಸಕರು ಗ್ರಾಮ ವಾಸ್ತವ್ಯ ಶುರು ಮಾಡಿದ್ದು ವಡಗೇರಾ ಸೇರಿದಂತೆ ಅನೇಕ ಹಳ್ಳಿಗಳಲ್ಲಿ ತಂಗುವ ಮೂಲಕ ಜನರ ಸಮಸ್ಯೆಗಳನ್ನು ಖುದ್ದು ಕಂಡಿದ್ದಾರೆ. ಇದರಿಂದ ಗ್ರಾಮೀಣ ಭಾಗದ ಜನರ ಮೂಲ ಸೌಕರ್ಯ ಹಾಗೂ ಇತರೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಕೋವಿಡ್ ಪರಿಸ್ಥಿತಿ ಸುಧಾರಿಸಿದ ನಂತರ ಮತ್ತೆ ಗ್ರಾಮ ವಾಸ್ತವ್ಯ ಸರಣಿ ಪುನಾರಂಭವಾಗಲಿವೆ. ಧರಂಸಿಂಗ್ ಫೌಂಡೇಷನ್‍ನಿಂದ ಜೇವರ್ಗಿ ಎಸ್ಸೆಸ್ಸೆಲ್ಸಿ ಫಲಿತಾಂಶ ವೃದ್ದಿಗೂ ಮಿಶನ್ 100 ಎಂದು ಶೈಕ್ಷಣಿಕ ಗುಣಣಟ್ಟ ಸುಧಾರಣೆಯ ಯೋಜನಯೂ ಜೇವರ್ಗಿ ಮತಕ್ಷೇತ್ರಾದ್ಯಂತ ಜಾರಿಗೊಂಡಿದ್ದು ಮಕ್ಕಳ ಶಿಕ್ಷಣ ಮಟ್ಟ ಸುಧಾರಣೆಯತ್ತ ಸದ್ದಿಲ್ಲದೆ ಕೆಲಸ ಸಾಗಿದೆ.

ಧರಂಸಿಂಗ್ ಫೌಂಡೇಷನ್‍ನಿಂದಲೇ ಜೇವರ್ಗಿಯಲ್ಲಿ ಕಲ್ಯಾಣ ಮಂಟಪ, ಗ್ರಂಥಾಲಯ, ಅನ್ನ ದಾಸೋಹ ಯೋಜನೆಗೆ ಚಾಲನೆ ನೀಡಲಾಗಿದ್ದು ಇನ್ನಾರು ತಿಂಗಳಲ್ಲಿ ಕಾರ್ಯಗತಗೊಳ್ಳಲಿವೆ. ಜೇವರ್ಗಿಗೆ ಮಂಜೂರಾಗಿರುವ ತಾಯಿ- ಮಕ್ಕಳ ಆರೈಕೆ ಆಸ್ಪತ್ರೆಗೂ ಧರಂಸಿಂಗ್ ಫೌಂಡೇಷನ್ ಭೂದಾನ ಮಾಡಿ ಜೇವರ್ಗಿ ಜನರಿಗೆ ಆರೋಗ್ಯ ಸೇವೆ ದೊರಕುವಂತಾಗಲು ಬೆಂಬಲಿಸಿದೆ.

ಹೀಗೆ ಸರಕಾರದ ಹಂತದಲ್ಲಿ ಹಾಗೂ ಧರಂಸಿಂಗ್ ಪೌಂಡೇಷನ್‍ನಿಂದ ಸಾಕಷ್ಟು ಜನಪರ ಯೋಜನೆಗಳನ್ನು ಜೇವರ್ಗಿ ಮತಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಇದೆಲ್ಲವೂ ಜೇವರ್ಗಿ ಜನ ಗಮನಿಸುತ್ತಿದ್ದಾರೆ. ಇಷ್ಟೆಲ್ಲಾ ಇದ್ದರೂ ಸಹ ಇದನ್ನು ಸಹಿಸದ ವಿರೋಧ ಪಕ್ಷಗಳವರು ಸುಖಾ ಸುಮ್ಮನೆ ಆರೋಪಗಳನ್ನು ಮಾಡುತ್ತಿದ್ದಾರೆ.

ಇಂತಹ ಆರೋಪಗಳಿಗೆ ಜೇವರ್ಗಿ ಮತಕ್ಷೇತ್ರದ ಜನತೆ ಎಂದಿಗೂ ಕಿವಿಗೊಡೋದಿಲ್ಲ ಎಂಬ ವಿಶ್ವಾಸ ತಮಗಿದೆ. ಡಾ. ಅಜಯ್ ಸಿಂಗ್ ಅವರ ಪ್ರಗತಿಪರ ಧೋರಣೆಗಳಿಗೆ ಜೇವರ್ಗಿಯ ಜನತೆ ಸದಾ ಬೆಂಬಲ ನೀಡುತ್ತಾರೆಂದು ಜೇವರ್ಗಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಸಿದ್ಧಲಿಂಗ ರೆಡ್ಡಿ ಹಾಗೂ ಯಡ್ರಾಮಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರುಕ್ಕುಂ ಪಟೇಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here